KUK News & Events

Rajyotsava 2013 – ಅನಂತ ಧನ್ಯವಾದಗಳು!!!

ನಲ್ಮೆಯ ಕನ್ನಡಿಗ ಮಿತ್ರರೇ,   ನಮ್ಮ ಕರೆಯೋಲೆಗೆ ಓಗೊಟ್ಟು ಬಹಳ ಹೆಚ್ಹಿನ ಸಂಖ್ಯೆಯಲ್ಲಿ ನೆರೆದು, ಕನ್ನಡಿಗರುಯುಕೆಯ ಕನ್ನಡ ರಾಜ್ಯೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ನಮ್ಮ ತುಂಬು ಹೃದಯದಧನ್ಯವಾದಗಳು.  ನಿಮ್ಮ ಬೆಂಬಲ  ಹಾಗೂ ಪ್ರೋತ್ಸಾಹವೇ ನಮಗೆ ಸ್ಫೂರ್ತಿ.  ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಅಂಗ್ಲನಾಡಿನಲ್ಲಿ ಬೆಳೆಸಿ, ಪಸರಿಸುವುದಕ್ಕೆ ನಿಮ್ಮಬೆಂಬಲವೇ ಬೆನ್ನೆಲುಬು.   ನಮ್ಮ ಸ್ಥಳೀಯ ಪ್ರತಿಭೆಗಳಿಂದ ಗಾನ, ನೃತ್ಯ, ಕಿರುನಾಟಕ, ನಿರೂಪಣೆ ಮುಂತಾದ ವೈವಿಧ್ಯಮಯ ಕಲಾಪ್ರದರ್ಶನ, ಮನರಂಜನೆ ಅದ್ಭುತವಾಗಿ ಮೂಡಿಬಂತು. ಮುದ್ದಾದಬಾಲಕಲಾವಿದರ ಕಲಾಪ್ರದರ್ಶನವಂತು ಸ್ಮರಣೀಯವಾಗಿತ್ತು. ಡಾ॥ಜ್ಯೋತ್ಸ್ನಾ ಶ್ರೀಕಾಂತ್, ಮಂಚೂಣಿಯಲ್ಲಿದ್ದ Bangalore Dreams ಅವರ ಸಂಗೀತ ಸುಧೆ ಸಭಿಕರನ್ನೆಲ್ಲಮೈಮರೆಯುವಂತೆ ಮಾಡಿತು. ವಿಜುಶ್ರೀಯವರ ಪ್ರತಿಸ್ಪಂದ್ಯ  ಆಟಗಳು ಸಭಿಕರನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿತು. ಇಷ್ಟೊಂದು ಭರ್ಜರಿಮನರಂಜನೆ ನೀಡುವುದಕ್ಕೆ ಈ ಕಲಾವಿದರೆಲ್ಲ ಪಟ್ಟ ಪ್ರಯತ್ನಕ್ಕೆ ಕನ್ನಡಿಗರುಯುಕೆ ಚಿರಋಣಿಯಾಗಿರುತ್ತದೆ, ಅವರೆಲ್ಲರಿಗೂ ಧನ್ಯವಾದಗಳು. ನೆರೆದಿರುವ ಪ್ರೇಕ್ಷಕರು ಆಯ್ಕೆ ಮಾಡಿದ ಪ್ರತಿ ವರ್ಗದಲ್ಲಿ ಅತ್ಯುತ್ತಮ ಸ್ಥಳೀಯ ಕಲಾ ಪ್ರದರ್ಶನ ಈ ಕೆಳಗಿನಂತಿವೆ.  ಹಾಡುಗಾರಿಕೆ – ಸುಮಾ ಶ್ರೀರಾಮ್  ನೃತ್ಯ – ಪ್ರಂಜಲ  ಹಾಸ್ಯ – ಭಾಸ್ಕರ್ ಮತ್ತು ತಂಡ   ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಯುನೈಟೆಡ್ ಲ್ಯಾಂಡ್ ಬ್ಯಾಂಕ್ ಮತ್ತು ಸಹ ಪ್ರಾಯೋಜಕರಾದ ಡಿಜ್ಜಿ  ಇನ್ವೆಸ್ಟ್ ಮೆಂಟ್ಸ್ ಅವರ ಧನಸಹಾಯಕ್ಕೂ ಕನ್ನಡಿಗರುಯುಕೆತುಂಬಾ ಅಭಾರಿಯಾಗಿರುತ್ತದೆ.   ನಮ್ಮ ಎಲ್ಲ ಏರ್ಪಾಡಿನಲ್ಲೂ ಪಾಲ್ಗೊಂಡು ಸಹಾಯ ಮಾಡಿದ ಎಲ್ಲ ಸ್ವಯಂಸೇವಕರಿಗೂ ನಮ್ಮ ಧನ್ಯವಾದಗಳು.   ಈ ಕಾರ್ಯಕ್ರಮದಲ್ಲಿ ಏನಾದರು  ಲೋಪ, ತಪ್ಪುಗಳಾಗಿದ್ದರೆ   ದಯವಿಟ್ಟು ತಮ್ಮ ಕ್ಷಮೆ ಇರಲಿ. ಏನಾದರು ಸಲಹೆ, ಅಭಿಪ್ರಾಯಗಳಿದ್ದರೆ ದಯವಿಟ್ಟುevents@kannadigaruuk.com ಗೆ ಈಮೈಲ್ ಕಳುಹಿಸಿ. ನೀವು  ನೀಡುವ ಅತ್ಯಮೂಲ್ಯ ಅಭಿಪ್ರಾಯಗಳು, ಉತ್ತಮ ಗುಣಮಟ್ಟದ ಕಾರ್ಯಕ್ರಮವನ್ನು ನೀಡಲು ಬಹಳಸಹಾಯವಾಗುತ್ತದೆ, ಅದಕ್ಕಾಗಿ ನಾವು ನಿಮಗೆ ತುಂಬಾ ಅಭಾರಿ.   ಕಾರ್ಯಕಮಕ್ಕೆ ಬಂದು, ಅದನ್ನು ಯಶಸ್ವಿಯಾಗಿ  ನೆರವೇರಲು ಕಾರಣಕರ್ತರಾಗಿದ್ದಕ್ಕಾಗಿ, ಮತ್ತೊಮ್ಮೆ ನಿಮಗೆಲ್ಲ ಕನ್ನಡಿಗರುಯುಕೆಯ ಹೃತ್ಪೂರ್ವಕ ಧನ್ಯವಾದಗಳು.   ಕನ್ನಡಿಗರುಯುಕೆ ತಂಡ

KUK News & Events

Rajyotsava 2013 – A BIG THANK YOU!!

Dear Friends, It gives us an immense pleasure to thank you all for the overwhelming response and for your active participation in KannadigaruUK’s Kannada Rajyothsava 2013. Thank you for your full-hearted support and participation; it’s this support and enthusiasm that is helping KannadigaruUK to host events every year and to spread the Kannada culture in […]

KUK News & Events

Thanks to all for making Basingstoke event a nice and memorable one

We would like to thank everyone for coming out to family get together organised by KannadigaruUK Basingstoke chapter as part of the auspicious Ganesha Festival celebration. Good to see more than hundred people attending this family get together. We hope everyone enjoyed the evening and occasion. We are sure that this family get together has […]

KUK News & Events

KUK Basingstoke Chapter hosts get together on Sept 14th

Dear Friends, As part of the auspicious Ganesha Festival celebration, KannadigaruUK will be organising a family get-together in the heart of Hampshire, Basingstoke. As part of this get-together we will be launching our KannadigaruUK Basingstoke Chapter. The aim of this chapter is to bring all the families, children and friends together living in and around […]