KUK Local Chapters

ಕನ್ನಡದಲ್ಲೇ ಜಗತ್ತನ್ನು ಸುತ್ತೋಣ – ಕನ್ನಡ ಟ್ರಾವೆಲ್ಸ್ ಜೊತೆ ಸಂಭಾಷಣೆ

ಕನ್ನಡ ನಾಡಿನ ಆಡಳಿತಾಂಗಗಳ ಊರು, ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲೆ ಇಂದು ಕನ್ನಡವನ್ನು ಕನ್ನಡಕ ಹಾಕಿಕೊಂಡು ಹುಡುಕುವ ಪರಿಸ್ಥಿತಿ ಬರುತ್ತಿರುವಾಗ ಇಲ್ಲೊಂದು ಯುವ ಪಡೆ ಹುಮ್ಮಸ್ಸಿನಿಂದ ಹೊಸದೊಂದು ವಿಭಿನ್ನವಾದಂತ ಪ್ರಯತ್ನಕ್ಕೆ ಕೈಹಾಕಿದೆ.

ವಿಶ್ವದಲ್ಲಿಯೆ ಪುರಾಣ ಪುಣ್ಯಕತೆಗಳಲ್ಲಿ ಭರತವರ್ಷೆ, ಜಂಬೋದ್ವೀಪೆ, ದಂಡಕಾರಣ್ಯೆ ಗೋದಾವರಿ ತೀರೆ…ಎಂದೆಲ್ಲಾ ಉಲ್ಲೇಖವಾಗಿ ಅಂತಹ ಒಂದು ಪ್ರದೇಶದಲ್ಲಿ ಎರಡುಸಾವಿರ ವರ್ಷಕ್ಕಿಂತ ಹೆಚ್ಚು ಇತಿಹಾಸ ಹೊಂದಿರುವ ಒಂದು ಸಂಸ್ಕೃತಿ ಅದರ ಭಾಷೆಯಾದ ಕನ್ನಡವನ್ನು ಓದುವ, ಬರೆಯುವ ಮತ್ತು ಮಾತನಾಡುವ ಜನಗಳನ್ನು ಮುಟ್ಟಿ ತಟ್ಟಿ ಅವರುಗಳನ್ನು ಅವರದೆ ಭಾಷೆಯಲ್ಲಿ ಜಗತ್ತಿನ ಬೇರೆಬೇರೆ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಅಲ್ಲಿರುವ ಸ್ವಾರಸ್ಯಕರವಾದ ಸಂಗತಿಗಳನ್ನು, ವಿಶೇಷತೆಗಳನ್ನು ಮತ್ತು ಚಿತ್ರವಿಚಿತ್ರವಾಗಿರುವಂತ ಕುತೂಹಲಕರ ವಿಷಯಗಳನ್ನು ಬರಹದ ಮೂಲಕ ಕಥೆಗಳನ್ನಾಗಿಸಿ, ಚಿತ್ರಗಳಲ್ಲಿ ‌ಇಳಿಸಿ ವೀಡಿಯೊಗಳು ಮೂಲಕ “ಕನ್ನಡದಲ್ಲೆ ಜಗತ್ತನ್ನು ಸುತ್ತೋಣ,ಕನ್ನಡದಲ್ಲೆ ಜಗತ್ತನ್ನು ನೋಡೋಣ ಮತ್ತು ಕನ್ನಡದಲ್ಲಿಯೆ ಜಗತ್ತನ್ನು ತೀಳಿಯೋಣ” ಎನ್ನುವ ಒಂದು ಮುನ್ನುಡಿಯೊಂದಿಗೆ ವಿಭಿನ್ನವಾದ ಅಭೀರುಚಿಗಳನ್ನು ಹೊಂದಿರುವ ಮತ್ತು ಒಂದು ಒಳ್ಳೆಯ ಸದುದ್ದೇಶವನ್ನು ಇಟ್ಟುಕೊಂಡಿರುವ ಯುವ ತಂಡವೊಂದು “ಕನ್ನಡ.ಟ್ರಾವೇಲ್ಸ್‌” ಅನ್ನುವ ಜಾಲತಾಣವನ್ನು ಇತ್ತೀಚೆಗೆ ಹುಟ್ಟುಹಾಕಿದೆ. ಆ ಒಂದು ಜಾಲತಾಣ ಆರಂಭವಾಗಿ ನೂರು ದಿನಗಳನ್ನು ಪೋರೈಸಿದ ಸಂದರ್ಭದಲ್ಲಿ ಅದರ ಸಂಸ್ಥಾಪಕರುಗಳಾಗಿ  ನೆತೃತ್ವವನ್ನು ವಹಿಸಿಕೊಂಡಿರುವ ಶ್ರೀಯುತ ಸುನೀಲ್ ಪಾಟೀಲ್ ಹಾಗೂ ಶ್ರೀ ರಾಜೇಶ್ ಶೆಟ್ಟಿಯವರನ್ನು ಮಾತನಾಡಿಸುವ ಅವಕಾಶ ಕಳೆದ ಶನಿವಾರ(೧೩-ಮಾರ್ಚ-೨೦೨೧) ದಂದು ನನಗೆ “ಕನ್ನಡಿಗರು ಯುಕೆ” ಅರ್ಪಿಸುವ “ಕಾಫಿ ಜೊತೆ ಮಾತುಕತೆ” ಕಾರ್ಯಕ್ರಮದಲ್ಲಿ ಒದಗಿಬಂತು.
ಕಾರ್ಯಕ್ರಮದಲ್ಲಿ ಮಾತಾನಾಡಿಸುತ್ತ ಅವರ ಹಿನ್ನೆಲೆಯನ್ನು ತಿಳಿದುಕೊಳ್ಳುವ ಕುತೂಹಲದೊಂದಿಗೆ ಪ್ರಶ್ನಿಸಿದಾಗ ತಿಳಿದು ಬಂದಿದ್ದು ಸುನೀಲ್ ಅವರು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಿಂದ ಬಂದವರಾಗಿದ್ದರೆ ರಾಜೇಶ ಅವರು ಜೈನ ಕಾಶಿ, ತುಳುನಾಡು ಭೂತಾರಾಧನೆಯ ಬೀಡು, “ಆಳ್ವಾಸ್‌ ವಿರಾಸತ್” ಮತ್ತು “ನುಡಿಸಿರಿ”ಗೆ ಪ್ರಸಿದ್ಧಿಯಾದ ಮೂಡುಬಿದಿರೆ ತಾಲ್ಲೂಕಿನವರು. ಒಬ್ಬರು ಊರೂರು ಅಲೆದಾಡುವ ಅಭೀರುಚಿಯುಳ್ಳವರಾದರೆ ಮತ್ತೊಬ್ಬರು ವಿಭಿನ್ನವಾದ ಕತೆಗಳಿಗಾಗಿ ಓದು ಬರೆಯುವುದರಲ್ಲಿ ಅಭೀರುಚಿಯನ್ನು ಹೊಂದಿ ಅದರಲ್ಲಿ ತೋಡಗಿಕೊಂಡವರು. ಇಂತಹ ಎರಡು ವಿಭಿನ್ನ ಅಭೀರುಚಿಯುಳ್ಳವರು ಕಾರಣಾಂತರಗಳಿಂದ ಫೆಸ್‌ಬುಕ ಮುಖಾಂತರ ಒಬ್ಬರಿಗೊಬ್ಬರು ಪರಿಚಯವಾಗಿ ಇಂದು “ಕನ್ನಡ.ಟ್ರಾವೆಲ್ಸ್” ನ ಆರಂಭಕ್ಕೆ ನಾಂದಿ ಹಾಡಿದ್ದಾರೆ.
ಇಲ್ಲಿ ಸ್ವಾರಸ್ಯಕರ ಸಂಗತಿಯೆಂದರೆ ಒಂದುಕಾಲದಲ್ಲಿ ಕೈಲಿದ್ದ ಕೆಲಸವನ್ನು ಬಿಟ್ಟು ಜೇಬಲ್ಲಿದ್ದ ದುಡ್ಡೆಲ್ಲಾ ಖಾಲಿಯಾಗುವವರೆಗೂ ದೇಶವಿದೇಶಗಳೆಲ್ಲಾ ಸುತ್ತಿ ಆ ಸುತ್ತಾಟದಲ್ಲಿ ಪರಿಚಯವಾದವರಲ್ಲೊಬ್ಬರನ್ನು ಇಷ್ಟಪಟ್ಟು ಸಹಧರ್ಮಿಣಿಯಾಗಿ ಸ್ವಿಕರಿಸಿ ಅವರು ಸಹಯೋಗದೊಂದಿಗೆ ಹೊಸತನ್ನೆನಾದರು ಮಾಡಬೇಕೆನ್ನು ಅತೀವ ಹುಮ್ಮಸ್ಸಿನ ವ್ಯಕ್ತಿ ಒಂದೆಡೆಯಾದರೆ, ಆ ಸ್ವಾರಸ್ಯಕರ ಘಟನೆಗಳನ್ನು ಬರಹದ ರೂಪಕ್ಕೆ ಇಳಿಸಿ ಆ ಬರಹವನ್ನು ಓದಿ ಆಕರ್ಷಿತರಾಗಿ ಆ ಜೋಡಿಯೊಂದಿಗೆ ಸ್ನೇಹ ಸಂಪಾದಿಸಿ ಇಂದು ಆ ಸ್ನೇಹದ ಬುನಾದಿಯ ಮೇಲೆ ತಮ್ಮ ಅಭೀರುಚಿಯನ್ನು ಮೇಳೈಸಿ ಬೆನ್ನೆಲುಬಾಗಿ ನಿಂತಿರುವವರು ‌ಇನ್ನೊಬ್ಬರು (ಮುದ್ರಣ ಮಾಧ್ಯಮದಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿರುವ ರಾಜೇಶ ಶೆಟ್ಟಿಯವರು) ಎಂದು ಹೆಳುವುದೆ ಖುಷಿಕೊಡುವ ಸಂಗತಿ.
ಒಂದೆಡೆ ಕನ್ನಡದ ಮೇಲಿನ ಅಭಿಮಾನ, ಇನ್ನೊಂದೆಡೆ ಸುತ್ತಾಟದ ಅಭಿರುಚಿಯೊಂದಿಗಿನ ಪಯಣ ಮತ್ತೊಂದೆಡೆ ಆ ಪಯಣದಲ್ಲಿನ ಅನುಭವಗಳನ್ನು, ಅಚ್ಚರಿ ಗಳನ್ನು ವಿಭಿನ್ನವಾಗಿ ಬರಹಕ್ಕೆ ಇಳಿಸಿ ಕನ್ನಡದಲ್ಲಿ ಕತೆಯಾಗಿಸುವ ತವಕ ಕಾತುರ, ಒಟ್ಟಿನಲ್ಲಿ ಕನ್ನಡಿಗರನ್ನು ಬಡೆದೆಬ್ಬಿಸಿ ಅವರಲ್ಲಿ ಅಡಗಿರುವ ಓದುಗ ಮತ್ತು ಬರಹಗಾರ ಅಥವಾ ಕಥೆಗಾರನನ್ನು ಹೊರಗೆಳಯಬೆಕೆಂಬ ಹಂಬಲದೊಂದಿಗೆ “ಕನ್ನಡ.ಟ್ರಾವೆಲ್ಸ್” ೧೦೦ ದಿನಗಳನ್ನು ಪೂರೈಸಿ ಮುಂದಡಿಯಿಟ್ಟಿದೆ.
ಸಾಧಕರಲ್ಲಿ ಒಬ್ಬರಾದ ಶ್ರೀ ಕ್ಯಾಪ್ಟನ್‌ ಗೋಪಿನಾಥ್, ಮತ್ತೊಬ್ಬರಾದ ಶ್ರೀ ಗೀರಶ್ ರಾವ್‌ ಹತ್ವಾರ್ (ಜೋಗಿ) ಹಾಗೂ “ಕನ್ನಡ ಪ್ರಭದ” ಸಂಪಾದಕರಾದ ಶ್ರೀ ರವೀಂದ್ರ ಹೆಗಡೆಯವರು ಜಾಲತಾಣಕ್ಕೆ ಚಾಲನೆಯನ್ನು ನೀಡಿ ಬೆನ್ನು ತಟ್ಟಿದ್ದರೆ, ಶಾಲಾಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳು, ಯುವಕ ಯುವತಿಯರು, ಮನೆಯಲ್ಲಿಯೆ ಇರುವ ಗೃಹಿಣಿಯರು, ಹಿಂದೆ ಇಂಗ್ಲಿಷ್‌ನಲ್ಲಿ ಸಮಾಜೀಕ ಜಾಲತಾಣಗಳಲ್ಲಿ ಬರೆದು ಹಂಚಿಕೊಳ್ಳುತ್ತಿದ್ದವರು ಇಂದು ಕನ್ನಡದಲ್ಲಿ ತಮ್ಮ ತಮ್ಮ ಪಯಣದ ಅನುಭವಗಳನ್ನು ಕನ್ನಡದಲ್ಲಿ ಬರೆದು ಹಂಚಿಕೊಳ್ಳುವುದರ ಮೂಲಕ ಕನ್ನಡ.ಟ್ರಾವೆಲ್ಸ್‌ನ ಬೆನ್ನೆಲುಬಾಗಿ ನಿಂತು ಪೋಷಿಸುತ್ತಿದ್ದಾರೆ ಎಂದು ಹೆಳಿಕೊಳ್ಳಲು ಅಭೀಮಾನ ಮತ್ತು ಖುಷಿ ಎಂದೆನಿಸುತ್ತದೆ. ಮುಂಬರುವ ದಿನಗಳಲ್ಲಿ ವಿದೇಶಗಳಲ್ಲಿರುವ ಇನ್ನೂ ಹೆಚ್ಚಿನ ಕನ್ನಡ ಸಂಘಸಂಸ್ಥೆಗಳನ್ನು ಮುಟ್ಟಿ ಅಲ್ಲಿ ನೆಲೆಸಿರುವ ಕನ್ನಡಿಗರ ಮತ್ತು ಅವರ ಪಯಣದ ಅನುಭವಗಳನ್ನು , ಅವರು ನೆಲೆಸಿರುವ ನಾಡಿನ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ವಿಶೇಷ ಹಾಗೂ ಆಕರ್ಷಕ ಸಂಗತಿಗಳು ಬಗ್ಗೆ ಬರೆದು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುವ ಯೋಜನೆಗಳನ್ನು ಕನ್ನಡ.ಟ್ರಾವೆಲ್ಸ್ ತಂಡ ಹಾಕಿಕೊಂಡಿದೆ ಅದರ ಭಾಗವಾಗಿ ಕನ್ನಡಿಗರು ಯುಕೆ ತಂಡದೊಂದಿಗೆ ನಿರತ ಸಂಪರ್ಕದಲ್ಲಿದೆ.
“ಕನ್ನಡಿಗರು ಯುಕೆ” ತಂಡ ಯುನೈಟೆಡ್ ಕಿಂಗ್ಡಮ್‌ನಾಧ್ಯಂತ ನೆಲೆಸಿರುವ ಕನ್ನಡಿಗರನ್ನು ಒಂದೆ ಸೂರಿನೆಡೆಗೆ ತಂದು ಅವರಿಗೆ ಒಂದು ವೆದಿಕೆಯನ್ನು ಸೃಷ್ಟಿಸಿ ಆ ವೆದಿಕೆಯ ಮೂಲಕ ಆಂಗ್ಲನಾಡಿನ ಉದಯೊನ್ಮುಖ ಪ್ರತಿಬೆಗಳನ್ನು ಹೊರತರವ ಸತತ ಪ್ರಯತ್ನ ಮಾಡುತ್ತಿದೆ. ಅದರೊಟ್ಟಿಗೆ ನೂರಾರು ಮಕ್ಕಳಿಗೆ “ಕನ್ನಡ ಕಲಿ” ಕಾರ್ಯಕ್ರಮದ ಮೂಲಕ ಉಚಿತವಾಗಿ ಕನ್ನಡವನ್ನು ಕಲಿಸುವ ಕಾಯಕಕ್ಕೆ ಕೈ ಹಾಕಿ ಯಶಸ್ವಿಯಾಗಿ ನಾಲ್ಕು ಹಂತಗಳನ್ನು ಈಗಾಗಲೆ ಆರಂಭಿಸಿದೆ. ಮುಂದುವರಿದು ವಿಶ್ವದ ಏಕೈಕ ಅಪ್ಲಿಕೇಶನ್ ‌ಬೆಸ್ಡ್‌  ಕನ್ನಡ ರೇಡಿಯೋ ಸ್ಟೇಷನ್ ಆಗಿರುವ “ನಮ್ಮ ರೇಡಿಯೋ”ದ ಸಹಯೋಗದೊಂದಿಗೆ ಯುಕೆ ಕನ್ನಡಿಗರಿಗಾಗಿ ಪ್ರತಿ ಭಾನುವಾರ(೬ ರಿಂದ ೭ ಗಂಟೆಯವರೆಗೆ) ಒಂದು ಗಂಟೆಯ “ವಾಟ್ಸ್‌ಪ್‌ ಯುಕೆ” ಅನ್ನುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಜೋತೆಗೆ ಕನ್ನಡ ನಾಡಿನ ಉದಯೊನ್ಮುಖ ಪ್ರತಿಭಗಳನ್ನು ಯುಕೆ ಅಂಗಳಕ್ಕೆ ಪರಿಚಯಿಸುವತ್ತ ಪ್ರಯತ್ನವಂತು ಯಾವಾಗಲು ನಡಿಯುತ್ತಿದೆ. ಪ್ರಯತ್ನದ ಅಂಗವಾಗಿ “ಕಾಫಿ ಜೋತೆ ಮಾತುಕತೆ”ಯ ಸಂಚಿಕೆಯಲ್ಲಿ “ಕನ್ನಡ.ಟ್ರಾವೆಲ್ಸ್‌”ಅನ್ನು ಅರಿತುಕೊಳ್ಳುವ ಮತ್ತು ಪರಿಚಯಿಸುವ ಪ್ರಯತ್ನವನ್ನು ಮಾಡಿದೆ. ಕೊನೆಯದಾಗಿ ಮುಗಿಸುವ ಮುನ್ನ “ಕನ್ನಡ.ಟ್ರಾವೆಲ್ಸ್”ನ ಸುನೀಲ್ ಪಾಟೀಲ್, ರಾಜೇಶ ಶೆಟ್ಟಿ ಹಾಗೂ ಅವರ ತಂಡಕ್ಕೆ ಮತ್ತು “ವಾಟ್ಸ‌ಪ್ ಯುಕೆ” ಕಾರ್ಯಕ್ರಮದ ರೇಡಿಯೋ ಜಾಕಿಗಳಾದ ಗಿರೀಶ್ ಮತ್ತು ರಶ್ಮಿಯವರಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಯಶಸ್ಸು ಸಿಗಲಿ ಎಂದು “ಕನ್ನಡಿಗರು ಯುಕೆ” ಮತ್ತು “ಕನ್ನಡ ಕಲಿ” ತಂಡದ ಪರವಾಗಿ ವಿಶೇಷವಾಗಿ ಹಾರೈಸುತ್ತೆನೆ.
-ಗೋವರ್ಧನ ಗಿರಿ ಜೋಷಿ
Visit Kannada.Travel for more information

Leave a Reply

Your email address will not be published.