KUK Local Chapters

೫ ನೇ ವಾರ್ಷಿಕೋತ್ಸವ ಸಂಭ್ರಮವನ್ನ ಅರ್ಥಪೂರ್ಣವಾಗಿ ವಿಶೇಷ ರೀತಿಯಲ್ಲಿ ಯು. ಕೆ ಕನ್ನಡಿಗರೊಂದಿಗೆ ಆಚರಿಸಿದ ನಮ್ಮ್ ರೇಡಿಯೋ ತಂಡ

ತಮ್ಮ ೫ನೆ ವರ್ಷದ ವಾರ್ಷಿಕೋತ್ಸವ ಸಮಯದಲ್ಲಿ, ವಿಶ್ವ ಕನ್ನಡಿಗರಿಗೆ ,ಅದರಲ್ಲೂ ಕಳೆದ ೫ ವರ್ಷಗಳಿಂದ ವಿಶೇಷ ಬಾಂಧವ್ಯ ಹೊಂದಿರುವ ಯು. ಕೆ ಯ ಕನ್ನಡಿಗರಿಗೆ ಉಡುಗೊರೆಯನ್ನು ಕೊಡಲು ನಿರ್ಧರಿಸಿ , ಮನೋರಂಜನೆಯಷ್ಟೇ ಅಲ್ಲದೆ ಸಮಾಜ ಮುಖಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದರಲ್ಲಿ ಮನೆಮಾತಾಗಿರುವ ಕನ್ನಡಿಗರು ಯು. ಕೆ ಯ ಸಹಯೋಗದೊಂದಿಗೆ , ಯು ಕೆ ನಿವಾಸಿ ಕನ್ನಡಿಗರೇ ನಡೆಸಿಕೊಡುವ ವಿಶಿಷ್ಟ , ಹೊಚ್ಚ ಹೊಸ ಕಾರ್ಯಕ್ರಮ ‘ ವಾಟ್ಸ್ ಅಪ್ ! ಯುಕೆ ‘ ಯ ಉದ್ಘಾಟನಾ ಸಮಾರಂಭ ಬಹಳ ಅಚ್ಚುಕಟ್ಟಾಗಿ ಇಂದು ನೆರವೇರಿತು.

ಇದೇ ಚಾನೆಲ್ ನ RJ ರೂಪ ಗುರುರಾಜ್ ಅವರ ಅತ್ಯುತ್ತಮ ಕಾರ್ಯಕ್ರಮ ನಿರೋಪಣೆ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ಕೊಟ್ಟಿದ್ದಲ್ಲದೆ, ಇದೊಂದು ಆನ್ಲೈನ್ ಕಾರ್ಯಕ್ರಮ ಅನ್ನೋವುದನ್ನ ಮರೆಸುವಂತಿತ್ತು. ಗಣ್ಯರ ಮಾತು, ೫ ವರ್ಷಗಳ ಸುಧೀರ್ಘ ಪಯಣದಲ್ಲಿ ನಮ್ಮ್ ರೇಡಿಯೋ ನಡೆದು ಬಂಡ ದಾರಿ. ಹಾಗೂ ಆ ಪ್ರಯಾಣದ ಸಹ ಭಾಗಿಗಳಾದ ಎಲ್ಲಾ RJ ಮಿತ್ರರ ಅನಿಸಿಕೆ, ಅಭಿಪ್ರಾಯಗಳು ಎಲ್ಲರ ಮನಗೆದ್ದವು, ವಿಶೇಷ ವಿನ್ಯಾಸದಲ್ಲಿ ಪ್ರಸ್ತುತ ಪಡಿಸಿದ ಈ ಹೊಸಕಾರ್ಯಕ್ರಮದ ಭಿತ್ತಿ ಚಿತ್ರವು ಗಮನ ಸೆಳೆದಷ್ಟೇ, ಹೊಸ RJ ಗಿರೀಶ್ ಹಾಗೂ ರಶ್ಮಿ ಅವರ ಪರಿಚಯ ಕೂಡ ಅರ್ಥಪೂರ್ಣವಾಗಿತ್ತು..
ಹೊಸ ಭರವಸೆಯೊಂದಿಗೆ, ಪ್ರತಿ ವಾರಾಂತ್ಯ ಭಾನುವಾರ ಸಂಜೆ ೬-೭ ಗಂಟೆಗೆ ಪ್ರಸಾರವಾಗುವ “ವಾಟ್ಸ್ ಅಪ್ ಯು.ಕೆ ” ಕಾರ್ಯಕ್ರಮವನ್ನ ಸಂತೋಷದಿಂದ ಎದುರುನೋಡುವಂತೆ
ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದ ಕನ್ನಡಿಗರು ಯು.ಕೆ ಗೆ ಅಭಿನಂದಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

By Girish Prasad

Leave a Reply

Your email address will not be published. Required fields are marked *