KUK News & Events

ಕನ್ನಡ ಕಲಿ ಶಿಕ್ಷಕರ ವೃಂದದೊಂದಿಗೆ ಪ್ರೊಫೆಸರ್ ಕೃಷ್ಣೇಗೌಡರ ಸಂವಾದ

ಎಲ್ಲರೂ ಕನ್ನಡವನ್ನು ಕೇಳಿದ್ದಿರಾ, ಕನ್ನಡದ ಬಗ್ಗೆ ಕೇಳಿದ್ದಿರಾ, ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಕೇಳಿದ್ದಿರಾ ಆದರೆ ಯಾವತ್ತಾದರೂ ಕನ್ನಡವೇ ಮಾತಾಡುವುದನ್ನು ಇಲ್ಲಾ ಕನ್ನಡ ವಿಶ್ವವಿದ್ಯಾಲಯವೆ ಬಂದು ನಿಮ್ಮನ್ನು ಮಾತಾನಾಡಿಸಿದಂತ ಅನುಭವ ವೆನಾದರು ಯಾರಿಗಾದರು ಆಗಿದ್ದಿದೆಯಾ…?? ಅಂತಹ ವಿರಳಾತಿವಿರಳ ಅನುಭವಕ್ಕೆ ನಾಂದಿಯಾದದ್ದು “ಕನ್ನಡ ಕಲಿ” ಶಿಕ್ಷಕ ಶಿಕ್ಷಕಿಯರ ಬಹು ಮುಖ್ಯವಾದ ಅತಿಥಿಯೊಂದಿಗಿನ ಸಂವಾದ ದ ಕಾರ್ಯಕ್ರಮ. ಏನಿದು ಇಷ್ಟೊಂದು ಉತ್ಪ್ರೇಕ್ಷೆಯಾಗಿ ಮಾತಾನಾಡುತ್ತಿದ್ದೆನೆ ಎಂದಿರಾ? ಖಂಡಿತವಾಗಿಯು ಇಲ್ಲಾ ಎಂದು ನನ್ನ ಭಾವನೆ.

ಎಂದಿನಂತೆ ಕನ್ನಡಿಗರು ಯುಕೆ ತಂಡ ಆಯೋಜಿಸಿದ್ದ ಸಂವಾದದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಹ್ವಾನಿತರಾಗಿ ಬಂದದ್ದು ಕನ್ನಡದ ಉಪನ್ಯಾಸಕರು, ಚತುರ ಮಾತುಗಾರರು, ಹಾಸ್ಯ ಭಾಷಣಕಾರರು, ಹಿರಿಯ ಕನ್ನಡದ ವಿದ್ವಾಂಸರು ಆದ ಪ್ರೋಫೆಸರ ಶ್ರೀ ಕೃಷ್ಣೆಗೌಡ ರವರು. ಕನ್ನಡ ಮಾದ್ಯಮದಲ್ಲಿ ಶಿಕ್ಷಣವನ್ನು ಪಡೆದು, ಕನ್ನಡ ನಾಡಿನಲ್ಲಿ ಜೀವನವನ್ನು ರೂಪಿಸಿಕೊಂಡು,ಕೆಲವು ವರ್ಷಗಳ ಮಟ್ಟಿಗೆ ಇಲ್ಲಿಗೆ ಅತಿಥಿಯಾಗಿ ಬಂದಿರುವ ನಾನು ಮತ್ತು ನನ್ನ ಕನ್ನಡದ ಮೆಲಿನ ಪ್ರೀತಿ ವ್ಯಾಮೋಹ ಹೊರಹಾಕುವ ಅಕ್ಷರಗಳಿಂದ ಇಲ್ಲಿ ಪೋಣಿಸಿದ ನುಡಿಗಳು ಮತ್ತು ವಾಕ್ಯಗಳು ಅವರಿಗಿರುವ ಅನುಭವ ಮತ್ತು ಜ್ಞಾನ ಸಂಪತ್ತನ್ನು ಮೀರಿಸುವಷ್ಟು ಉತ್ಪ್ರೇಕ್ಷೆಯಾಗಿರಲಾರವು ಎನ್ನುವುದು ನನ್ನ ಖಡಾಖಂಡಿತವಾದ ನಂಬಿಕೆ.

ಸಂವಾದ ದ ಕಾರ್ಯಕ್ರಮವಾದುದರಿಂದ ಮತ್ತು ಅತಿಥಿಗಳ ಬಗ್ಗೆ ಅಷ್ಟೊಂದಾಗಿ ಪರಿಚಯವನ್ನು ಮಾಡಿಕೊಡುವ ಅವಶ್ಯಕತೆ ಇಲ್ಲದಿದ್ದುದರಿಂದ (ಚಿರಪರಿಚಿತರಾದುದ್ದರಿಂದ), ಕೆಯುಕೆ ತಂಡದ ಮುಖ್ಯಸ್ಥರಾದ ವಿನಯ್ ರಾವ್ ಅವರು ಸಾಂಪ್ರದಾಯಿಕ ವಾಗಿ ಸರಳ ಹಾಗು ಸುಂದರ ಕಿರು ಪರಿಚಯ ನೀಡುವುದರೊಂದಿಗೆ ಶ್ರೀ ಕೃಷ್ಣೆಗೌಡ ಅವರನ್ನು ಕಾರ್ಯಕ್ರಮಕ್ಕೆ ಆದರದಿಂದ ಬರಮಾಡಿಕೊಂಡು “ಕನ್ನಡ ಕಲಿ” ಶಿಕ್ಷಕ ಶಿಕ್ಷಕಿಯರನ್ನು ಉದ್ದೇಶಿಸಿ ಮಾತನಾಡಲು ಕೆಳಿಕೊಂಡರು.

ತಮ್ಮ ಆಕರ್ಷಕವಾದ ಮಾತಿನ ಶೈಲಿಯೊಂದಿಗೆ ಮಾತನಾಡಲು ಪ್ರಾರಂಭಿಸಿದ ಶ್ರೀ ಕೃಷ್ಣೆ ಗೌಡ ಅವರು ಮೊದಲು ಸಂವಾದದ ವೇದಿಕೆಯನ್ನು ಸಜ್ಜುಗೊಳಿಸುವುದಕ್ಕಾಗಿ ಕೆಲುವು ಮಾತುಗಳನ್ನಾಡುವುದಾಗಿ ಘೋಷಿಸಿ, ಕನ್ನಡದ ಹಳೆಯ ವಿದ್ವಾಂಸರಲ್ಲಿ ಒಬ್ಬರಾದ ಶ್ರೀ ಬೆನೆಗಲ್ ರಾಮರಾವ್ ಅವರ ಒಂದು ಕನ್ನಡದ ಬಗೆಗಿನ ಪದ್ಯವಾದ

ಕನ್ನಡವು ಉಳಿದೆನಗೆ ಅನ್ಯ
ಜೀವನವಿಲ್ಲಾ…
ಕನ್ನಡವೆ ಎನ್ನುಸಿರು ಪೆಟ್ಟನ್ನ
ತಾಯಿ…
ಕನ್ನಡವೆ ಧನ ಧಾನ್ಯ,ಕನ್ನಡವೆ
ಮನೆ ಮಾನ್ಯ…
ಕನ್ನಡವೆ ಎನಗಾಯ್ತು, ಕಣ್ಣು –
ಕಿವಿ ಬಾಯಿ…

ಎಂದು ಉಲ್ಲೇಖಿಸಿವುದರೊಂದಿಗೆ ಕನ್ನಡದ ಸಾರಸತ್ವ ಲೋಕಕ್ಕೆ ವಿದ್ವಾಂಸರ ಮತ್ತು ಕಲಾವಿದರ ಕೊಡುಗೆಯನ್ನು ಸ್ಮರಿಸುತ್ತ ಕನ್ನಡದ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ರಾದುದ್ದರಿಂದ ಕನ್ನಡ ಎಂದಾಗಲೆಲ್ಲಾ ಅವರಿಗೆ ಒಂದು ವಿಶೇಷವಾದ ಶಕ್ತಿ ಮತ್ತು ಆವೇಶ ಬರುವುದಾಗಿ ತಿಳಿಸಿದರು. ಮುಂದುವರಿದು ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತ, ವ್ಯಕ್ತ ಮತ್ತು ಅವ್ಯಕ್ತಕ್ಕೆ ಮನುಷ್ಯನ ದೇಹ,ಬುದ್ಧಿ ಮತ್ತು ಮನಸ್ಸನ್ನು ಉದಾಹಾರಿಸುತ್ತ, ಇಂದು ಮನುಷ್ಯ ಮನಸ್ಸಿನಿಂದ ಕಡಿಮೆ ಮತ್ತು ಬುದ್ಧಿಯಿಂದ ಹೆಚ್ಚು ಹೆಚ್ಚು ಭೌದ್ದೀಕವಾಗಿ ವ್ಯವಹರಿಸುತ್ತಿರುವುದರಿಂದ, ಬುದ್ಧಿಯ ಬಲದ ಮೆಲೆಯೆ ಎಲ್ಲವನ್ನು ತಿರ್ಮಾನಿಸುತ್ತಿರುವುದರಿಂದ ಮನುಷ್ಯ ಅನ್ನುವುದಕ್ಕಿಂತ ಹೆಚ್ಚಾಗಿ “ಬುದ್ಧಿಷ್ಯ” ಇಲ್ಲಾ “ಬುದ್ಧಿವಾ” ಎಂದು ಕರಿಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ವಾಸ್ತವೀಕತೆ ಮತ್ತು ವಾತಾವರಣದಿಂದ ದೂರವಾದಾಗಲೆ ಅದರ ಮೇಲೆ ಪ್ರೀತಿ ವ್ಯಾಮೋಹ ಮತ್ತು ಸೆಳೆತ ಹೆಚ್ಚಾಗುವುದು ಹಾಗಾಗಿ ದೂರದ ಆಂಗ್ಲನಾಡಿನಲ್ಲಿ ನೆಲೆಸಿರುವ ನಮಗೆ ಕನ್ನಡದ ಬಗೆಗಿನ ಒಲವು ಮತ್ತು ಸೆಳೆತ ಕ್ರಮೇಣವಾಗಿ ಹೆಚ್ಚಾಗುವುದು, ನಮ್ಮ ಮನದೊಳಗೆ ಪ್ರಶ್ನೆಗಳು ಮೂಡುವುದು ಹಾಗು ಆ ಪ್ರಶ್ನೆಗಳು ನಮ್ಮತನವನ್ನು ಎಡೆಬಿಡದೆ ಪ್ರಶ್ನಿಸಿ ಎಡಬಿಡಂಗಿಗಳ ಹಾಗೆ ನಮ್ಮನ್ನು ನಾವು ಭಾವಿಸಿಕೊಳ್ಳುವಂತೆ ಮಾಡುವುದರ ಫಲಿತಾಂಶವೆ ನಾವು ನಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಲು ಪ್ರೇರೆಪಿಸುವುದೆಂದು ಅಭಿಪ್ರಾಯಪಟ್ಟು, ಬಹುಮುಖ್ಯವಾಗಿ ಮಕ್ಕಳಿಗೆ ಕನ್ನಡ ಕಲಿಸುವುದು ಮಕ್ಕಳಿಗಾಗಿ ಅಲ್ಲಾ ಅದು ನಮಗಾಗಿ ಎಂದು ತಿಳಿಸಿಕೊಟ್ಟರು.
ತದನಂತರ ಅವರು ತಮ್ಮ ಆಸ್ಟ್ರೇಲಿಯಾ ಪ್ರವಾಸದಲ್ಲಿಯಾದ ಒಂದು ಸೊಗಸಾದ ಅನುಭವವನ್ನು ಹಂಚಿಕೊಳ್ಳುತ್ತಾ ಅಲ್ಲಿನ ಒಂದು ಕಾರ್ಯಕ್ರಮದಲ್ಲಿ ಕೀಟ್ಲೆಗೆ ಹೆಸರುವಾಸಿಯಾದಂತ ತಂಡದಿಂದ ಕವಿ ಕುವೆಂಪು ಅವರು ಹೇಳಿದ “ಎಲ್ಲಾದರು ಇರು…ಎಂತಾದರು ಇರು… ಎಂದೆಂದಿಗೂ ನೀ ಕನ್ನಡವಾಗಿರು…” ಎನ್ನುವುದು ತಾತ್ವಿಕವಾಗಿ ಸತ್ಯ ಎನ್ನುವುದು ಒಪ್ಪಿಕೊಳ್ಳುವುದಾದರೆ…ನಮಗೆ ಮತ್ತು ನಿಮಗೆ ಅನ್ಯಭಾಷಿಕರು ಕರ್ನಾಟಕಕ್ಕೆ ಬಂದು ನೆಲೆಸಿ ಅನ್ಯಭಾಷಿಕರಾಗಿ ಉಳಿದರೆ ತಪ್ಪೇನು…? ಅವರನ್ನು ಕನ್ನಡ ಕಲಿಯಲೆಬೇಕು ಎನ್ನುವ ಒತ್ತಾಯ ಎಷ್ಟರ ಮಟ್ಟಿಗೆ ಸಮಂಜಸ…? ಎಂದು ತೂರಿಬಂದ ಸವಾಲಿನ ಪ್ರಶ್ನೆಗೆ ಅವರು ಕೊಟ್ಟ ವಿವರರಣೆಯನ್ನು ಹಂಚಿಕೊಳ್ಳುತ್ತಾ ಭಾಷೆಗೆ ಎರಡು ಆಯಾಮಗಳಿರುತ್ತವೆಯಂದು ಅದರಲ್ಲಿ “ಸಂವಹನ”ವೆ ಮುಖ್ಯವೆಂದಾದಲ್ಲಿ ಯಾವ ಭಾಷಯಲ್ಲಾದರು ಸರಿ ಅದರಿಂದ ಏನು ತೊಂದರೆಯಿಲ್ಲಾ ಆದರೆ ಭಾಷೆಯನ್ನು ಬಳಸುವ ವಾತಾವರಣದಲ್ಲಿ ನೆಲೆಸಿ ಮತ್ತು ಅದರ ವಾಸ್ತವಿಕ ನೆಲೆಗಟ್ಟಿನಲ್ಲಿ ಹೇಳುವುದಾದರೆ ಅಂತಹ ಒಂದು ಭಾಷೆ ಅದರದೆ ಆದ ಆಚಾರ, ವಿಚಾರ, ಕಲೆ ಮತ್ತು ಸಂಸ್ಕೃತಿಯನ್ನು ಸಾವಿರಾರು ವರ್ಷಗಳ ಇತಿಹಾಸವನ್ನು ಜ್ಞಾನ ಸಂಪತ್ತಾಗಿ ಹೊಂದಿರುತ್ತದೆ. ಆ ಮಟ್ಟಿಗೆ ಹೆಳುವುದಾದರೆ ಕನ್ನಡಕ್ಕೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ, ಅದು ಬೆಳೆದು ಬಂದ ದಾರಿ, ಕಲೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೊಂದಿದೆ ಹಾಗಾಗಿ ಅಂತಹ‌ವಾತವರಣದಲ್ಲಿ ಬದುಕು ಕಟ್ಟಿಕೊಳ್ಳುವುದೆ ಆದರೆ ಆ ಭಾಷೆಯನ್ನು ಕೆವಲ ಸಂವಹನಕ್ಕಾಗಿಯೆ ಅಲ್ಲ ಆ ಭಾಷೆಯಲ್ಲಿ ಅಡಗಿರುವ ಜ್ಞಾನಸಂಪತ್ತನ್ನು ಅರಿಯಲು ಮತ್ತು ಅದು ವ್ಯಕ್ತಪಡಿಸುವ ಭಾವನೆಯನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಲು ಕನ್ನಡ ಭಾಷೆಗಳನ್ನು ಕಲಿಯುವುದು ‌ಒಳಿತು ಎಂದು ವಿವರಿಸಿದರು.

ಹಿಂದೆ ಆಂಗ್ಲರು ಭಾರತಕ್ಕೆ ಬಂದಾಗ ನಮ್ಮಲ್ಲಿ ಸಾಕ್ಷಾರತೆಯನ್ನು ಪ್ರಶ್ನಿಸಿ, ಅಕ್ಷರ‌ಗಳ ಅರಿವು ಇಲ್ಲದಿದ್ದರೆ, ಓದಲು ಬರೆಯಲು ಬಾರದಿದ್ದರೆ ಅಜ್ಞಾನಿಗಳೆಂದು,‌ಜ್ಞಾನಸಂಪತ್ತೆ ಇಲ್ಲವೆಂದು ಪದೆ ಪದೆ ಹೆಳಿದ್ದರಿಂದ ಮತ್ತು ಅವರು ನಮ್ಮನ್ನು ಆಳುತ್ತಿದ್ದರಿಂದ ನಾವು ನಂಬುವಂತಾಗಿ ಭಾರತದಲ್ಲಿದ್ದ ಮೌಕಿಕ ಜ್ಞಾನದ ಸಂಪತ್ತನ್ನು ನಿಧಾನವಾಗಿ ಕಡೆಗಣಿಸಲಾಯಿತು ಎಂದು ಹೆಳುತ್ತ ಈ ಕೆಳಗಿನ ಉದಾಹರಣೆಗಳನಿತ್ತರು. ಉದಾಹರಣೆಗೆ ಸಾವಿರ ವರ್ಷಗಳ ಹಿಂದೆಯೆ ಸಾಕ್ಷಾರತೆ ಅಕ್ಷರ ಜ್ಞಾನ ವಿಲ್ಲದಿದ್ದರು ಚಿನ್ನ, ಬೆಳ್ಳಿ, ತಾಮ್ರ ಮುಂತಾದ ಲೋಹಗಳನ್ನು ಸಂಸ್ಕರಿಸುವ ವಿದ್ಯೆ ಮತ್ತು ಬಳಕೆಯ ವಿಧಾನ ದ ಬಗ್ಗೆ ಪ್ರಸ್ತಾಪವಿದೆ ಅಂದರೆ ಅದರ ಬಗ್ಗೆ ಭಾರತಕ್ಕೆ ಗೊತ್ತಿತ್ತು ಆದರೆ ಇಂದಿನ ಕೆಮಿಸ್ಟ್ರಿ ಮಾತ್ರ ಭಾರತದಲ್ಲಿ ಇರಲಿಲ್ಲಾ ಅಥವಾ ಗೊತ್ತಿರಲಿಲ್ಲಾ ಅಷ್ಟೆ. ಹಾಗೆಂದ ಮಾತ್ರಕ್ಕೆ ಚಿನ್ನ,ಬೆಳ್ಳಿ,ತಾಮ್ರ ಮುಂತಾದ ಲೋಹಗಳು ಕೆಮಿಸ್ಟ್ರಿ ಬಂದಾದ ಮೇಲೆಯೆ ಹುಟ್ಟಿಕೊಂಡದ್ದಾಗಲಿ ಬೆಳಕಿಗೆ ಬಂದಿದ್ದಾಗಿ ಅಲ್ಲವಲ್ಲಾ…?? ಇನ್ನೊಂದು ಉದಾಹರಣೆ ಕೊಡುವುದಾದರೆ, ಬೆಲೂರು ಹಳೆಬೀಡಿನ ಶಿಲ್ಪಶಾಸ್ತ್ರವನ್ನು ಮತ್ತು ಅಜಂತಾ ಎಲ್ಲೋರಾನ ಕೆತ್ತಿದ ವಿಧಾನವನ್ನು ನಾವು ಎಲ್ಲೂ ಬರಿದಿಟ್ಟಿಲ್ಲ ಆದರು ಜನರಿಗೆ ಅಂತಹ ದೊಡ್ಡದಾದಂತ ಅದ್ಭುತಗಳನ್ನು ನಿರ್ಮಾಣ ಮಾಡುವ ಶಕ್ತಿ ಬರವಣಿಗೆಯನ್ನು ಕಾಣದೆಯು ಭಾರತೀಯರಿಗೆ ಗೂತ್ತಿತ್ತು ಎಂದು ಖಡಾಖಂಡಿತವಾಗಿ ಹೆಳಬಹುದು ಎಂದು ತಿಳಿಸಿದರು. ಆದರೆ ಬಗ್ಗೆ ಹೆಚ್ಚು ವಿವರಿಸುತ್ತಾ ಹೋದರೆ ಹತ್ತಾರು ಘಂಟೆಗಳು ಸಾಲದು ಹಾಗಾಗಿ ಎಲ್ಲೊ ಒಂದು ಕಡೆ ಇದನ್ನು ನಿಲ್ಲಿಸಿ ಬೇಕು ಎಂದು ಅದನ್ನು ಅಲ್ಲಿಗೆ ಮೊಟಕುಗೊಳಿಸಿದರು.

ಯುಕೆ ಯಲ್ಲಿ ನೆಲೆಸಿರುವ ಕನ್ನಡಿಗರ ಬಹುದೊಡ್ಡ ಸಮಸ್ಯೆಯೆಂದರೆ, ಇಂದು ಪ್ರಪಂಚದಾದ್ಯಂತ ವ್ಯಾಪಾರ ವಹಿವಾಟುಗಳು ಅತಿಹೆಚ್ಚು ಆಂಗ್ಲಭಾಷೆಯಲ್ಲಿ ನಡೆಯುವುದರಿಂದ ಮತ್ತು ಒಂದುರೀತಿಯ ಆಕ್ರಮಣಕಾರಿ ಮನೋಭಾವವನ್ನು ಅದು ಹೊಂದಿರುವುದರಿಂದ, ಇಂದು ಯಜಮಾನ ಭಾಷೆಯಾಗಿರುವ ಆಂಗ್ಲ ಭಾಷೆಯ ಉಗಮಸ್ಥಾನದಲ್ಲಿದ್ದು ದಿನನಿತ್ಯದ ವ್ಯವಹಾರಗಳನ್ನು ಆಂಗ್ಲಭಾಷೆಯಲ್ಲಿ ಮಾಡುತ್ತ ನಮ್ಮ ಮಕ್ಕಳಿಗೆ ನಮ್ಮ ಭಾಷೆಯನ್ನು ಕಲಿಸುವುದು ಸುಲಭ ಸಾಧ್ಯವಾದ ಮಾತಲ್ಲ ಏಕೆಂದರೆ ಹೊರದೇಶದಲ್ಲಿನ ಮಕ್ಕಳು ನಮ್ಮ ಮಕ್ಕಳ ಹಾಗೆ ಭಾವುಕರಾಗಿರುದಿಲ್ಲಾ, ತುಂಬಾ ಪ್ರಾಯೋಗಿಕವಾಗಿ ಮತ್ತು ಬೌದ್ಧಿಕತೆಗೆ ಒತ್ತುಕೊಟ್ಟು ಬೆಳಿಸುವುದರಿಂದ ಎಲ್ಲವನ್ನು ವಿಚಾರಿಸಿ, ಪ್ರಶ್ನಿಸಿ ಒಪ್ಪಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಂಡಿರುತ್ತಾರೆ. ಹಾಗಾಗಿ ನಮ್ಮ ಮಕ್ಕಳಿಗೆ ಈಗ ನಾವು ಕನ್ನಡ ಕಲಿಸಲು ಹೊರೆಟಿರುವುದು ನಮಗಿರುವ ಭಾವಾನಾತ್ಮಕ ಕಾರಣಗಳಿಂದಾಗಿ ಎಂದು ಅಭಿಪ್ರಾಯಪಟ್ಟು ಅಲ್ಲಿಗೆ ತಮ್ಮ ಮಾತುಗಳನ್ನು ಮುಗಿಸಿ ಸಂವಾದ ಕ್ಕೆ ಅನುವು ಮಾಡಿಕೊಟ್ಟರು.

“ಕನ್ನಡ ಕಲಿ” ವೇಲ್ಸ್ ನ ಶಿಕ್ಷಕಿಯರಾದ “ರೇಖಾ ಗಿರೀಶ್” ಅವರು ಪಠ್ಯ ಪುಸ್ತಕವಾದ “ಸ್ವರಬಲ್ಲ – ೧” ರಲ್ಲಿ ಇರುವ ಪಾಠಗಳ ಇಂಗ್ಲಿಷ್ ಅನುವಾದ ಪುಸ್ತಕದಲ್ಲಿದ್ದಿದ್ದರೆ ಕಲಿಸುವವರಿಗೆ ಇನ್ನೂ ಹೆಚ್ಚಿ ಅನೂಕೂಲವಾಗುತ್ತಿತ್ತೆನೋ ಎಂದು ತಮ್ಮ ಪ್ರಶ್ನೆಯನ್ನು ಕೃಷ್ಣೆ ಗೌಡರ ಮುಂದಿಟ್ಟು, ಅವರು ಅಭಿಪ್ರಾಯ ಮತ್ತು ಸಲಹೆಯನ್ನು ಹಂಚಿಕೊಳ್ಳುವಂತೆ ಕೇಳಿಕೊಂಡರು.ಅದಕ್ಕೆ ಉತ್ತರಿಸುತ್ತಾ ಕೃಷ್ಣೆ ಗೌಡ ಅವರು ಮಕ್ಕಳಿಗೆ ಮೊದಲು ಭಾಷೆಯನ್ನು ಕಾವ್ಯಾತ್ಮಕವಾಗಿ ಲಯ,ಲಾಲಿತ್ಯ ಮತ್ತು ಸೊಗಸನ್ನು ಕಲಿಸಿ ಅದನ್ನು ಅನುಭವಿಸುವ ಹಾಗೆ ಮಾಡಿದರೆ ಅದು ಕಲಿಯಲು ಮಕ್ಕಳಿಗೆ ಸುಲಭವಾಗುತ್ತದೆ ನಂತರದಲ್ಲಿ ಅನುವಾದ ಬೆಕಾದಲ್ಲಿ ಶಿಕ್ಷಕರೆ ಅದನ್ನು ಮಕ್ಕಳಿಗೆ ತಿಳಿಸಿಕೊಟ್ಟರೆ ಸೂಕ್ತ ಎಂದು, ಇಲ್ಲವಾದಲ್ಲಿ ಒಂದು ವೇಳೆ ನೇರವಾಗಿ ಅನುವಾದವ ಪುಸ್ತಕದಲ್ಲಿ ಸಿಕ್ಕಿಬಿಟ್ಟರೆ ಮಕ್ಕಳ ಗಮನ ಅರ್ಥ ಮತ್ತು ಅನುವಾದದ ಕಡೆಗೆ ಹೋಗಿ ಅವರ ಭಾಷಾ ಕಲಿಕೆಗೆ ಹಿನ್ನಡೆಯಾಗಬಹುದು ಎಂದು ಅಭಿಪ್ರಾಯಪಟ್ಟರು. ಇನ್ನೊಬ್ಬ ಶಿಕ್ಷಕಿ “ಸ್ಮೀತಾ” ಅವರು ತಮ್ಮ ಪ್ರಶ್ನೆಯ ಮುಖಾಂತರ ದಿನನಿತ್ಯದ ಲ್ಲಿ ಇಂಗ್ಲಿಷ್ ಪದಗಳು ಬಳಕೆ ಹೆಚ್ಚಾಗುತ್ತಿದು ಮತ್ತು ಕನ್ನಡ ಬಳಿಸುವಿಕೆ ಕಡಿಮೆಯಾಗುವುದರಿಂದ ಅದು ಹೇಗೆ ಆಕರ್ಷಕವಾಗಿ ಭಾಷೆಯನ್ನು ಮಕ್ಕಳಿಗೆ ಕಲಿಸಿಕೊಡಲು ಸಾಧ್ಯ…? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸುತ್ತಾ, ಕೃಷ್ಣೆ ಗೌಡ ಅವರು ಭಾಷೆಯಲ್ಲಿ ಹೆಚ್ಚು ಹೆಚ್ಚು ಸ್ಪಸ್ಟತೆಯನ್ನು ಅಪೆಕ್ಷಿಸಿದಷ್ಟು ಅಷ್ಟೆ ಅದರ ಬೆಳವಣಿಗೆಯು ಕುಂಠಿತವಾಗುತ್ತದೆ ಹಾಗಾಗಿ ಭಾಷೆಯನ್ನು ಕಲಿಸುವಾಗ ಸ್ಥಳಿಯಭಾಷೆಯನ್ನು ಗಮನದಲ್ಲಿಟ್ಟುಕೊಂಡು ಅದರ ಮಿಶ್ರಣದೊಂದಿಗೆ ಕಲಿಸಿದ್ದೆ ಆದಲ್ಲಿ ಬಹು ಬೆಗನೆ ಮಕ್ಕಳು ಭಾಷೆಯನ್ನು ಕಲಿಯಬಹುದು ಹಾಗೊಮ್ಮೆ ಕಲಿತರೆ ಅವರಾಗಿಯೆ ಬೆಕಾದ ಅಕ್ಷರ ಮತ್ತು ಅರ್ಥಗಳನ್ನು ಹುಡಿಕಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು. ಮತ್ತೊಬ್ಬ ಶಿಕ್ಷಕಿಯರಾದ “ಶ್ವೇತಾ ಗುರುನಾಥ” ಅವರು ಪ್ರಶ್ನಯನ್ನು ಕೆಳುತ್ತಾ ಇಂದು ಕನ್ನಡ ಕಲಿಯುವ ವಾತಾವರಣ ಕಲುಷಿತವಾಗಿದ್ದು ಹಳ್ಳಿ ಹಳ್ಳಿಗಳಲ್ಲಿ ಎಲ್ಲರೂ ಇಂಗ್ಲೀಷ್ ಭಾಷೆಗೆ ಮೊರೆಹೋಗುತ್ತಿರುವಾಗ, ಕನ್ನಡವನ್ನು ಉಳಿಸಿ ಬೆಳೆಸುವ ಬಗೆಯಾದರು ಹೇಗೆ ಎಂದು ಕೆಳಿದರು.ಕೃಷ್ಣೆಗೌಡರವರು ಅದಕ್ಕೆ ಉತ್ತರಿಸುತ್ತಾ, ಇಂದು ನಮ್ಮೆಲ್ಲರಿಗೆ ಒಂದು ಬಡತನ ಕಾಡುತ್ತಿದೆ ಅದೆನೆಂದರೆ ಸುಮಾರು ಐವತ್ತು ವರ್ಷಗಳ ಹಿಂದೆ ಹಳ್ಳಿಯಲ್ಲಿ ಬಡತನವೆನೆಂದೆ ಗೊತ್ತಿರಲಿಲ್ಲ ಹಾಗಾಗಿ ಒಂದು ಗಾದೆ ಮಾತು ಚಾಲ್ತಿಯಲ್ಲಿತ್ತು ಅದೆನೆಂದರೆ “ಬಿಸಿ ಮುದ್ದೆ ಬಸ್ಸಾರು, ಹೊಳೆ ಮಳ್ಳು,ಹೊಂಗೆ ನೆಳ್ಳೂ, ಸಗ್ಗ ಸುಳ್ಳು” ಎಂದು ಇಷ್ಟಿದ್ದರೆ ಸ್ವರ್ಗಸಮಾನವಾದಂತ ಸುಖ ಹೊಂದಬಹುದು ಹಾಗಾಗಿ ಬಡತನವೆ ತಿಳಿಯದ ಹಳ್ಳಿಗಳಲಿಂದು ಪ್ರತಿಯೊಂದನ್ನು ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ಅಳಿದು ತೂಗಿ ನಮಗೆ‌ ಎನೂ ಸಿಗುತ್ತೆ ಅನ್ನುವ ಜಾಡ್ಯ ದೊಂದಿಗೆ ವ್ಯವಹರಿಸುತ್ತಿರುವುದರಿಂದ ನಮ್ಮ ಮಕ್ಕಳಿಗೆ ನಾವು ಕನ್ನಡ ಎನ್ನುವುದು ಒಂದು ಜ್ಞಾನ ಸಂಪತ್ತು ಅದನ್ನು ಕಲಿಯುವುದರಿಂದ ಒಂದು ಸುಂದರವಾದ ಭಾಷೆಯನ್ನು ಮತ್ತು ಅದರ ಶ್ರೀಮಂತವಾದ ಸಂಸ್ಕೃತಿಯನ್ನು ಅರಿಯಲು ಅನೂಕವಾಗುದು ಎಂದು‌ಹೇಳಿಕೊಡಬೇಕಷ್ಟೆ ಎಂದು ತಿಳಿಸಿದರು. ಇನ್ನೊಬ್ಬ ಶಿಕ್ಷಕಿ “ವೆದಮಾತ” ಅವರು ಕನ್ನಡ ಕಲಿಸುವುದನ್ನು ಹೇಗೆ ಹೆಚ್ಚು ಆಕರ್ಷಕವಾಗಿ ಮಾಡಬಹುದು ಮತ್ತು ಯಾವ ಯಾವ ಸಾಧನೆಗಳನ್ನು ಅಳವಡಿಸಿಕೊಳ್ಳಬಹುದು…? ಎನ್ನುವ ಪ್ರಶ್ನೆ ಗೆ ಅವರು ಉತ್ತರಿಸುತ್ತಾ ಮೊದಲು ನಾವು ಮಕ್ಕಳಿಗೆ ಭಾಷೆಯನ್ನು ಅಂದ ಛಂದವನ್ನು ಸೇವಿಸುವುದನ್ನು ಹೇಗೆ ಎಂದು ಸುಂದರವಾದ ಪದ್ಯಗಳನ್ನು, ಭಾವಗೀತೆಗಳನ್ನು ಉಪಯೋಗಿಸಿಕೊಂಡು, ತಂತ್ರಜ್ಞಾನವನ್ನು ಬಳಿಸಿಕೊಂಡು ಕಲಿಸುವ ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸಿದರು. ನಮ್ಮ ಮತ್ತೊಬ್ಬ ಶಿಕ್ಷಕರಾದ ಲೋಹಿತ್ ಅವರು ನಾವು ನಮ್ಮ ಮುಂದಿನ ಪೀಳಿಗೆಗೆ ಏನನ್ನು ಕಲಿಸಬೇಕು ಮತ್ತು ಹೇಗೆ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಹಕರಿಸಬೇಕು ಎನ್ನುವ ಪ್ರಶ್ನೆ, ಉತ್ತರಿಸುತ್ತ ನಾವು ಸಧ್ಯದ ಮಟ್ಟಿಗೆ ನಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಬಗ್ಗೆಯಷ್ಟೆ ಯೋಚಿಸಿ ಮತ್ತು ಅವರಿಗೆ ಇದೊಂದು ಜ್ಞಾನಸಂಪತ್ತು ಇದರಿಂದ ನಿಮ್ಮ ಜ್ಞಾನವೃದ್ಧಿಯಾಗುತ್ತದೆ ಎಂದು ತಿಳಿಸಿಕೊಟ್ಟು ಮುಂದಿನ ಪೀಳಿಗೆಗೆ ಸಾಗಿಸುವ ಭಾರವನ್ನು ಮತ್ತು ನಿರ್ಧಾರವನ್ನು ಅವರಿಗೆ ಬಿಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. “ಪ್ರತಿಭಾ ರಾಮಚಂದ್ರನ್” ಅವರು ಸ್ವರಬಲ್ಲ-೧ ಪಠ್ಯಪುಸ್ತಕವನ್ನು ಬಳಸಿಕೊಂಡು ೪ ರಿಂದ ೫ ವರ್ಷದ ಮಕ್ಕಳಿಗೆ ಕಲಿಸಿಕೊಡುವುದು ಒಂದು ರೀತಿಯಲ್ಲಿ ಕಷ್ಟಕರವಾಗಿದೆ ಹಾಗಾಗಿ ಏನಾದರು ಸಲಹೆ ಇದೆಯೆ ಎನ್ನುವ ಪ್ರಶ್ನೆ ಗೆ ಉತ್ತರಿಸುತ್ತಾ ಮೊದಲು ಮಕ್ಕಳಿಗೆ ಕನ್ನಡ ಕಲಿಯುವ ಮತ್ತು ಕಲಿತ ಅಕ್ಷರಗಳಾಗಲಿ, ಪಂದ್ಯಗಳಿಗಾಗಿ ಅವುಗಳನ್ನು ಅನುಭವಿಸಿ ಸಂತಸ ವ್ಯಕ್ತಪಡಿಸುವದನ್ನು ಕಲಿಸಿದಲ್ಲಿ ಮುಂದೆ ತಾನಾಗಿಯೆ ಭಾವಾರ್ಥ ಮುಂತಾದವುಗಳನ್ನು ಕಲಿಯಬಹುದು ಹಾಗಾಗಿ ಈ ವಯಸ್ಸಿನ ಮಕ್ಕಳಿಗೆ ಪಠ್ಯಕ್ರಮಗಳು ಕೊಟ್ಟು ನಿಟ್ಟಾಗಿ ಪಾಲಿಸಬೆಕೆಂಬ ನಿಯಮವಿಲ್ಲದಿದ್ದರೆ ಒಳಿತು ಎಂದು ಸಲೆಯೆಯನ್ನು ನೀಡಿದರು.ಕೊನೆಯದಾಗಿ ಇನ್ನೊಬ್ಬ ಶಿಕ್ಷಕಿ “ಅಶ್ವಿನಿ” ಯವರು ಮಕ್ಕಳ ಕಲಿಕೆಯಲ್ಲಿ ಪಾಲಕರ ಕೊಡುಗೆ ಅಪಾರವಾಗಿರುವುದರಿಂದ, ಪಾಲಕರನ್ನು ಹುರಿದುಂಬಿಸಿ ಹೆಚ್ಚಿನ ಸಹಕಾರವನ್ನು ಪಡೆದು ಯಶಸ್ವಿಯಾಗಲು ಎನಾದರು ಸಲಹೆಗಳನ್ನು ಸೂಚಿಸುವಂತೆ ಕೆಳಿಕೊಂಡರು. ಅದಕ್ಕೆ ಉತ್ತರಿಸುತ್ತಾ ,ಮೊದಲು ನಾವು ಬುದ್ಧಿ ಹೇಳಬೇಕಾಗಿರುವುದು ತಂದೆ ತಾಯಿಯರಿಗೆ. ಎಕೆಂದರೆ ಇವರು ಒಂದು ರೀತಿಯಲ್ಲಿ ವಿಧ್ಯಾಭ್ಯಾಸದಲ್ಲಿನ ಲಾಭವನ್ನು ರಕ್ತದ ರುಚಿಯನ್ನು ನೊಡಿದ ಹುಲಿಯಂತೆ ಇವರು ಸಹ ನೊಡಿದ್ದಾರೆ ಹಾಗಾಗಿ ಅವರು ಎನನ್ನು ಕಲಿತರೆ ಎಷ್ಟನ್ನು ಬಾಚಿಕೊಳ್ಳಬಹುದು ಮತ್ತು ಅದಕ್ಕಾಗಿ ಎಷ್ಟು ಬೆಕಾದರು ಹಣ ಸುರಿಯುವ ಜಾಯಮಾನಕ್ಕೆ ಬಿದ್ದುಬಿಟ್ಟಿದ್ದಾರೆ. ಹಾಗಾಗಿ ಪಾಲಕರ ಆಕಾಂಕ್ಷೆಯೆ ಸ್ವಚ್ಚವಾಗಿಲ್ಲದಿರುವಾಗ ಅವರು ಮಕ್ಕಳಿಗೆ ಕೊಡುವ ವಿಧ್ಯಯು ನೀತಿಯಾಗಲಿ ಇಲ್ಲಾ ಸ್ವಚ್ಚವಾಗಲಿ ಇರುವುದಿಲ್ಲಾ ಎಂದು ಅಭಿಪ್ರಾಯಪಟ್ಟರು.ಹಾಗಾಗಿ ತಂದೆ ತಾಯಿಗಳಿಗೆ ಮೊದಲು ಬುದ್ದಿ ಹೇಳುವುದು ಅತ್ಯೆಗತ್ಯ ಹಾಗೂ ಓದುಬರಿಯುವುದು ಕೇವಲ ದುಡ್ಡು ಮಾಡಲಿಕ್ಕಲ್ಲ ಅದರಿಂದ ಮನವನ್ನೂ ಕೂಡ ಸಂತೋಷ ಪಡಿಸಿಕೊಳ್ಳಬಹುದು ಎಂದು ಸಾಧ್ಯವಾದ ಎಲ್ಲಾ ಸಮಯ ಸಂದರ್ಭ ಹಾಗೂ ವೇದಿಕೆಗಳಲ್ಲಿ ಮತ್ತೆ ಮತ್ತೆ ಇಂತಹ ದುರಾಸೆದಾಯಕ ಆಸೆಗಳನ್ನು ಪ್ರಶ್ನಿಸುತ್ತ ಮತ್ತು ಖಂಡಿಸುತ್ತಾ ಪಾಲಿಕೆ ಪೋಷಕರಿಗೆ ಬುದ್ಧಿ ಹೇಳುವ ಪ್ರಯತ್ನವನ್ನು ಮಾಡಿ ಎಂದು ಸಲಹೆಯನ್ನಿತ್ತರು.ಇನ್ನುಳಿದ ಶಿಕ್ಷಕ ಶಿಕ್ಷಕಿಯರ ಉಳಿದ ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತ, ಸಲಹೆಗಳನ್ನು ಪಡೆಯುವುದರ ಮೂಲಕ ಸಂವಾದದ ಕಾರ್ಯಕ್ರಮಕ್ಕೆ ಮೆರಗನ್ನು ತಂದು ಕೊಟ್ಟರು.

ಕೊನೆಯಲ್ಲಿ ಗಣಪತಿ ಭಟ್ ಹಾಗೂ ರಾಜೇಶ್ ಅವರು ಇಂತಹದೊಂದು ಮಹೋನ್ನತವಾದ ಕೆಲಸಕ್ಕೆ ಕೈಹಾಕಿರುವ ಕೆಯುಕೆ ತಂಡಕ್ಕೆ ಸಹಕರಿಸುತ್ತಿರುವ ಎಲ್ಲಾ ಪೋಷಕರಿಗೂ ಮತ್ತು ಅದಕ್ಕೆ ಕೈ ಜೋಡಿಸಿರುವ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೂ ಹಾಗೂ ಯುಕೆ ಯಲ್ಲಿ ನೆಲೆಸಿರುವ ಎಲ್ಲಾ ಕನ್ನಡದ ಮನಸ್ಸುಗಳಿಗೆ ಅಭಿನಂದನೆಗಳನ್ನು ತಿಳಿಸುವುದರೊಂದಿಗೆ ಈ ಸಂವಾದದ ಕಾರ್ಯಕ್ರಮವನ್ನು ಹೆಮ್ಮೆಯಿಂದ ಮುಕ್ತಾಯಗೊಳಿಸಲಾಯಿತು.

ಧನ್ಯವಾದಗಳೊಂದಿಗೆ …

-ಗೋವರ್ಧನ ಗಿರಿ ಜೋಷಿ.

Leave a Reply

Your email address will not be published. Required fields are marked *