KUK News & Events

Phase 2 Online Kannada Kali Launch and Phase 3 Registration

ಮೊದಲನೇ ಹಂತದ ಆನಲೈನ್ ತರಗತಿಗಳ ಯಶಸ್ವೀ ಆರಂಭದ ನಂತರ ಮೊನ್ನೆ ರವಿವಾರ ಕನ್ನಡಿಗರುಯುಕೆ ಕನ್ನಡ ಕಲಿ ತಂಡವು ತನ್ನ ಎರಡನೇ ಹಂತದ ಆನ್ಲೈನ್ ಕನ್ನಡ ಕಲಿ ಶಿಬಿರವನ್ನು ಕನ್ನಡ ಅಕಾಡೆಮಿ ಜೊತೆಗೂಡಿ ಉದ್ಘಾಟನೆ ಮಾಡಿತು. ಈ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಶ್ರೀ ಮತ್ತೂರು ನಂದಕುಮಾರ್ ಉಪಸ್ಥಿತರಿದ್ದರು. “ಕನ್ನಡ ಕಲಿ”ಯ ಬಗ್ಗೆ ಆಸಕ್ತಿಯನ್ನು ತೋರಿ ನಮ್ಮೊಂದಿಗೆ ಸೆರಿಕೊಂಡಿದ್ದ ಹಲವಾರು ಕನ್ನಡಯುಕೆನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರು ಮಾತನಾಡುತ್ತಾ ಸುಮಾರು ನಲವತ್ತು ವರ್ಷಗಳ ಹಿಂದೆ ತಾವು ಮೊದಮೊದಲು ಯುಕೆಗೆ ಬಂದಾಗ ಆದು ಅನುಭವಗಳನ್ನು ಮೆಲುಕು ಹಾಕಿದರು. ಅದರೊಂದಿಗೆ ಭವನದಲ್ಲಿ ಕನ್ನಡವನ್ನು ಕಲಿಸಲು ಮಾಡಿದ ಪ್ರಯತ್ನಗಳ ಬಗ್ಗೆ ತಿಳಿಸುತ್ತಾ ಅದು ಕಾರಣಾಂತರಗಳಿಂದ ನಿಂತುಹೋದುದ್ದರ ಬಗ್ಗೆ ವಿಶಾದವನ್ನು ವ್ಯೆಕ್ತಪಡಿಸುವುದರ ಮೂಲಕ, ಕನ್ನಡವನ್ನು ಕಲಿಸಲು ಮುಂದೆ ಬಂದಲ್ಲಿ ಭವನದ ಕಡೆಯಿಂದ ಎಲ್ಲಾ ವಿಧವಾದ ಸಹಾಯ ಮತ್ತು ಸಹಕಾರವನ್ನು ಒದಗಿಸಿದ ಕೊಡುವುದಾಗಿ ಭರವಸೆಯನ್ನಿತ್ತರು.
ಕನ್ನಡ ಅಕಾಡೆಮಿಯ ಅಧ್ಯಕ್ಷರಾದ ಶಿವ ಗೌಡೆರ್ ಅವರು ಪೋಷಕರ ಹಾಗೂ ಶಿಕ್ಷಕರ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಟ್ಟು, ಅಕಾಡೆಮಿ ಜೊತೆಗೂಡಿ ಕನ್ನಡ ಕಲಿಯನ್ನು ಮನೆ ಮನೆಗಳಿಗೆ ತಲುಪಿಸೋಣ ಎಂದು ಆಶಿಸಿದರು.

ಈಗಾಗಲೇ ಮೂರನೇ ಹಂತದ ತರಗತಿಗೆ ನೋಂದಣಿ ಫಾರಂ ನನ್ನು ತೆರೆದಿಡಲಾಗಿದ್ದು, ಪೋಷಕರು ನೋಂದಾಯಿಸಲು ಆಸಕ್ತಿ ಇದ್ದಲ್ಲಿ, ಕೆಳಗಿನ ಗೂಗಲ್ ಫಾರಂ ಮೂಲಕ ನೋಂದಾಯಿಸತಕ್ಕದ್ದು.

https://docs.google.com/forms/d/e/1FAIpQLSciS8XL2M2BxgQPc3ZCAHf16SXhIfR-kAmX3A9w0xcuEtdcWQ/viewform?usp=sf_link

Leave a Reply

Your email address will not be published. Required fields are marked *