KUK News & Events

ಭಾವ ಸಂಗಮ – ಕರ್ನಾಟಕ ಶಾಸ್ತ್ರೀಯ, ಭಾವಗೀತೆ, ಜಾನಪದ ಸೊಗಡಿನ ಮಧುರ ಸಂಗಮ

ಸ್ನೇಹಿತರೇ, 

ಯುಕೆ ಕನ್ನಡಿಗರಿಗಾಗಿ ನಮ್ಮ ಮುಂಬರುವ ಆನ್ ಲೈನ್ ಕಾರ್ಯಕ್ರಮ ಭಾವ ಸಂಗಮ!

ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ಶ್ರೀಮತಿ ನಂದಿನಿ ರಾವ್ ಹಾಗೂ ಭಾವ ಸಂಗೀತದಿಂದ ಖ್ಯಾತಿ ಪಡೆದ ಶ್ರೀ ಗಣೇಶ್ ದೇಸಾಯಿ ನಮ್ಮೆಲ್ಲ ಯುಕೆ ಕನ್ನಡಿಗರನ್ನು ಸಂಗೀತದ ಸುಮಧುರ ಲೋಕಕ್ಕೆ ಕರೆದೊಯ್ಯಲಿದ್ದಾರೆ. 

ಖ್ಯಾತ ನಿರೂಪಕಿ ಹಾಗೂ ರೇಡಿಯೋ ಜಾಕಿ ಎಂದೇ ಪ್ರಸಿದ್ಧರಾದ ಶ್ರೀಮತಿ ರೂಪ ಗುರರಾಜ್ ಅವರು, ಶಾಸ್ತ್ರೀಯ ಸಂಗೀತ, ಭಕ್ತಿಗೀತೆ, ಭಾವಗೀತೆ, ಜಾನಪದ ಹಾಗೂ ಸಾಹಿತ್ಯದ ಬಗ್ಗೆ ಸುಂದರವಾದ ಕಾರ್ಯಕ್ರಮದ ನಿರೂಪಣೆಯೊಂದಿಗೆ ಯುಕೆ ಕನ್ನಡಿಗರಿಗೆ ಸಂಗೀತದ ರಸದೌತಣ ನೀಡಲು ಸಜ್ಜಾಗುತ್ತಿದ್ದಾರೆ. 

ನೀವೆಲ್ಲಾ, ಬರ್ತೀರಲ್ವಾ? 

೨೫ ಮೇ ೨೦೨೦, ೧೧ ಘಂಟೆ ಲಂಡನ್ ಸಮಯ, ಮಧ್ಯಾಹ್ನ ೩.೩೦ ಘಂಟೆ ಭಾರತದ ಸಮಯ

ಆನ್ ಲೈನ್ ಜೂಮ್ ಕಾನ್ಫರೆನ್ಸ್ ಮೂಲಕ ಜೊತೆಗೂಡಿ. 

Join Zoom Meeting

https://us02web.zoom.us/j/86911313679?pwd=bCtYN1NPc2hDVUlQMHhnYVAxWVNZQT09

Meeting ID: 869 1131 3679

Password: KUK2020 

ಬನ್ನಿ, ಎಲ್ಲರೂ ಜೊತೆಗೂಡಿ!

ಕನ್ನಡಿಗರುಯುಕೆ 

Leave a Reply

Your email address will not be published. Required fields are marked *