KUK Local Chapters KUK News & Events

ಜೀವ ಉಳಿಸಿದ್ದೇವೆ, ಜೀವನ ಉಳಿಸಬೇಕಿದೆ – ಸಂಸದ ಶ್ರೀ ಪ್ರತಾಪ್ ಸಿಂಹ

ನಮಸ್ಕಾರ ಸ್ನೇಹಿತರೇ,

ಕಳೆದ ಎರಡು ತಿಂಗಳಿನಿಂದ ಮಹಾ ಮಾರಿ ಕರೋನಾದಿಂದ ತಪ್ಪಿಸಿಕೊಳ್ಳಲು ಹರ ಸಾಹಾಸ ಪಡುತ್ತ ಗೃಹ ಬಂಧನದಲ್ಲಿ ನಮ್ಮನ್ನು ನಾವು ಕಟ್ಟಿಹಾಕಿಕೊಂಡು ಸಮಯ ದೂಡುತ್ತಿದ್ದೇವೆ. ಸಣ್ಣ ಸಣ್ಣದಾಗಿರುತ್ತಿದ್ದ ಸವಾಲುಗಳು ಇಂತಹ ಪರಿಕ್ಷಾ ಸಮಯದಲ್ಲಿ ಸ್ವಲ್ಪದೊಡ್ಡದಾಗಿ ಬೆಳೆದಂತೆ ಕಂಡರೂ ಅವುಗಳು ಇಂದಲ್ಲಾ ನಾಳೆ ಯಥಾಸ್ಥಿತಿಗೆ ಮರಳುತ್ತವೆ ಎನ್ನುವ ಆಶಾಭಾವನೆಯೊಂದಿಗೆ ಬಹುತೇಕ ಎಲ್ಲರೂ ಜೀವನ್ನು ಸಾಗಿಸುತ್ತಿದ್ದೇವೆ.

ಈ ಎಲ್ಲಾ ಜಂಜಾಟಗಳ ಮದ್ಯ ಕನ್ನಡಿಗರು ಯುಕೆ ತಂಡ ಸಂಕಷ್ಟದ ಸಮಯದಲ್ಲಿ ಸಾದ್ಯವಾದಷ್ಟು ಯುಕೆಯಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರನ್ನು ಒಂದೆ ಸೂರಿನಡಿಯಲ್ಲಿ ತರುವ ಪ್ರಯತ್ನ ಮಾಡುವುದರೊಂದಿಗೆ ಸತತವಾಗಿ ರಾಜ್ಯ ಮತ್ತು ಕೆಂದ್ರ ಸರ್ಕಾರದೊಂದಿಗಿನ ಸಂಪರ್ಕ ಬೆಳೆಸುವ ಮತ್ತು ಘಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ಮಾದರಿ ಯುವ ನೇತಾರರೊಂದಿಗಿನ ಸಂವಾದ ಕಾರ್ಯಕ್ರಮಗಳನ್ನು ಎರ್ಪಡಿಸುತ್ತಿದೆ. ಅದರ ಭಾಗವಾಗಿ ೧೬-೦೫-೨೦೨೦ ರಂದು ತಂತ್ರಜ್ಞಾನದ ಸಹಾಯ ಮತ್ತು ಕನ್ನಡ ಬಳಗ ಯುಕೆ (ಕೆಬಿಯುಕೆ) ಹಾಗೂ ಕರುನಾಡ ಅನಿವಾಸಿ ಹಿಂದೂಗಳ ಒಕ್ಕೂಟ(ಕಹೋ) ತಂಡಗಳ ಸಹಯೋಗದೊಂದಿಗೆ ಕೊಡಗು-ಮೈಸೂರು ಕ್ಷೇತ್ರದ ಸಂಸದರು, ಯುವ ನೇತಾರರು ಹಾಗೂ ಯುವಕರ ಕಣ್ಮಿಣಿಯಾದ ಶ್ರೀಯುತ ಪ್ರತಾಪ್ ಸಿಂಹ ಅವರೊಂದಿಗೆ ಸಂವಾದ ವನ್ನು ಯುಕೆ ನಿವಾಸಿಗಳಾದ ಎಲ್ಲಾ ಕನ್ನಡಿಗರಿಗಾಗಿ ಎರ್ಪಡಿಸಲಾಗಿತ್ತು. ಮೊದಲನೇಯದಾಗಿ ಅತ್ಯೆಂತ ಖುಷಿ ಕೊಟ್ಟಂತ ಸಂಗತಿ ಎಂದರೆ ಕಾರ್ಯಕ್ರಮಕ್ಕೆ ಯುಕೆ ನಿವಾಸಿ ಕನ್ನಡಿಗರಿಂದ ದೊರೆತ ಪ್ರತಿಕ್ರಿಯೆ, ಎರಡನೇಯದು ಯುಕೆಯಲ್ಲಿ ಹರಿದು ಹಂಚಿಹೋದಂತಾಗಿರುವ ಕನ್ನಡ ಸಂಘ ಸಂಸ್ಥೆಗಳು ಒಗ್ಗೂಡುವ ಪ್ರಯತ್ನ ಮಾಡುತ್ತಿರುವುದು ಹಾಗೂ ಮೂರನೇಯದು ಮತ್ತು ವೀಶೆಷವಾದದ್ದು ಪ್ರತಾಪ ಸಿಂಹ ಅವರ ನಿರ್ಗಳವಾದ ಮತ್ತು ಪ್ರೇರಣಾ ಭರಿತ ಮಾತುಗಳು ಅದರೊಂದಿಗೆ ಶ್ರೀ ರವೀಂದ್ರ ಜೋಶಿಯವರ ನೀರೂಪಣೆ ಊಟದ ಜೋತೆಗಿನ ಉಪ್ಪಿನಕಾಯಿಯಂತೆ ಸ್ವಾದಿಷ್ಟಕರವಾಗಿದ್ದದ್ದು.

ರೂಢಿಯಂತೆ ಪ್ರತಾಪ್ ಸಿಂಹ ಅವರು ತಮ್ಮ ಪ್ರೋತ್ಸಾಹ ಭರಿತ ಧಾಟಿಯಲ್ಲಿ ಹಿಂದೆ ಹಿರಿಯರು ತಿಳಿಸಿಕೊಟ್ಟ ಜೀವನ ಶೈಲಿಯ ಸೂಚಕದಂತಿರುವ “ಕಾಲ್ತೋಳ್ಕೊಂಡು ಒಳಗೆ ನಡಿ ಕೈ ತೋಳೆದುಕೊಂಡು ಊಟಮಾಡಿ” ಎನ್ನುವ ನುಡಿಗಳನ್ನು ಪ್ರಸ್ತಾಪಿಸುವುದರೊಂದಿಗೆ ಶುರುಮಾಡಿ ತಮ್ಮ ೧೩ ವರ್ಷಗಳ ಪತ್ರಕರ್ತನ ಸುದೀರ್ಘ ಜೀವನ ಹೇಗೆ ರಾಜಕೀಯದ ಜೀವನದೆಡೆಗೆ ಸೆಳೆದುಕೊಂಡು ಬಂದಿತು ಹಾಗೂ ಅದರೊಂದಿಗೆ ವಿಶ್ವೇಶ್ವರ ಭಟ್ಟರವರ ಮಾರ್ಗದರ್ಶನ, ಸಚಿವ ಸೋಮಣ್ಣನವರ ಸಹಕಾರ ವಿವರವಾಗಿ ಹಂಚಿಕೊಂಡರು. ಈ ಮದ್ಯ ಯುಕೆ ಕನ್ನಡಿಗರು ಕೇಳಿದ ಪ್ರಶ್ನೆಗಳಿಗೆ ತಾವು ಮಾಡಿದ ಕೆಲಸಗಳ ಮೂಲಕ ಉದಾಹರಣಿಕರಿಸುತ್ತ ಕೆಂದ್ರ ಸರ್ಕಾರದ ಕೊಡುಗೆಗಳಾದ ಉಡಾನ್ ಯೋಜನೆಯ ಮೂಲಕ ವಾಯು ಸಂಚಾರ ಮತ್ತು ಸಂಪರ್ಕದಲ್ಲಾದ ಬದಲಾವಣೆಗಳು , ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ದಿಯಲ್ಲಾದ ಪ್ರಗತಿ, ಬೆಂಗಳೂರು-ಮೈಸೂರು ಹತ್ತು ಪಥಗಳ ಹೆದ್ದಾರಿ ಯೋಜನೆಯ ಪ್ರಗತಿಯ ಬಗ್ಗೆ ತಿಳಿಸಿ ಕೊಡುವುದರೊಂದಿಗೆ ಸತತವಾಗಿ ಎರಡು ಬಾರಿ ಎಕೈಕವಾಗಿ ತಮ್ಮನ್ನು ಸಂಸದರನ್ನಾಗಿ ಮಾಡಿದ ಕೊಡಗು-ಮೈಸೂರು ಕ್ಷೇತ್ರದ ಜನತೆ ತೋರಿದ ಪ್ರೀತಿ ವಿಸ್ವಾಸಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಕನ್ನಡಿಗ ಸಂತೋಷ್ ಪಾಟೀಲ್ ಮಾತನಾಡಿ ಭಾರತೀಯ ರಾಯಭಾರಿ ಕಛೇರಿಯೊಂದಿಗಿನ ಹಾಗೂ ಇತರೆ ೩೦೦ಕ್ಕೂ ಹೆಚ್ಚು ಭಾರತೀಯ ಸಂಘ ಸಂಸ್ಥೆಗಳೊಂದಿಗಿನ ಅವರ ನಿಕಟ ಸಂಪರ್ಕ ಮತ್ತು ಮಾಡುತ್ತಿರುವ ಸಹಾಯ ಹಾಗೂ ಸೇವೆಗಳ ವಿವರವನ್ನು ಅಂಕಿ ಅಂಶಗಳ ಮೂಲಕ ಹಂಚಿಕೊಂಂಡರು. ಮುಂದುವರಿದು ಡಬ್ಲಿನ್ ಹಾಗೂ ಐರ್ಲೆಂಡ್ ಕನ್ನಡ ಸಂಘದ ವತಿಯಿಂದ ಸುರೇಶ್ ಅವರು ಮಾತನಾಡಿ ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಕನ್ನಡಿಗರೊಬ್ಬರನ್ನು ತುರ್ತುಪರಿಸ್ಥಿತಿಯಿಂದಾಗಿ ೨೪-೪೮ ಗಂಟೆ ಯೊಳಗೆ ಎಲ್ಲಾ ವ್ಯವಸ್ಥೆಯನ್ನು ಮಾಡುವಲ್ಲಿ ಪಟ್ಟ ಶ್ರಮ ಯುಕೆ ಕನ್ನಡ ಸಂಸ್ಥೆ ಹಾಗೂ ಭಾರತೀಯ ರಾಯಭಾರಿ ಮತ್ತು ಸರ್ಕಾರದಿಂದ ಒದಗಿಬಂದ ತ್ವರಿತ ಪ್ರತಿಕ್ರಿಯಿಂದಾಗಿ ಕಳೆದವಾರ #ವಂದೇ ಭಾರತ್ ಯೋಜನೆಯಡಿ ಕನ್ನಡಿಗರೊಬ್ಬರನ್ನು ಯಶಸ್ವಿಯಾಗಿ ತಾಯಿನಾಡಿಗೆ ಕಳಿಸಿ ಅವರ ಕುಟುಂಬದವರೊಂದಿಗೆ ದಿನಗಳನ್ನು ಕಳೆಯುವಂತಾಗಲು ಸಹಕರಿಸಿದ ಪ್ರತಾಪ್ ಸಿಂಹ ಹಾಗೂ ಅವರ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಸ್ವಿಂಡನ್ನಿನ ಕೌನ್ಸಿಲರಗಳು ಹಾಗೂ ಕನ್ನಡದವರೇ ಆದ ಸುರೇಶ್ ಘಟ್ಟಾಪುರ್, ರವಿ ವೆಂಕಟೇಶ್, ಹಾಗೂ ಕುಮಾರ್ ನಾಯಕ್ ಮತ್ತು ಕನ್ನಡ ಬಳಗದವತಿಯಿಂದ ಹಿರಿಯರಾದ ರಾಮಮೂರ್ತಿಯವರು ಸಂದರ್ಭೊಚಿತವಾದ ಪ್ರಶ್ನೆಗಳನ್ನು ಕೆಳುವುದರ ಮೂಲಕ ಮತ್ತಷ್ಟು ಮಾಹಿತಿಯನ್ನು ಪ್ರತಾಪ ಸಿಂಹ ಅವರ ಮಾತಿನ ಮೂಲಕ ಭಾಗವಹಿಸಿದವರಿಗೆ ಒದಗುವಂತೆ ಮಾಡಿದರು.ಒಟ್ಟಾರೆಯಾಗಿ ಲಾಕಡೌನ್ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಅವರು ತಮ್ಮ ಪತ್ರಕರ್ತನ ಶೈಲಿಯಲ್ಲಿ ” ಜೀವ ಉಳಿಸಿದ್ದೆವೆ, ಜೀವನ ಉಳಿಸಬೆಕಿದೆ” ಎಂದು ಚುಟುಕಾಗಿ ಹೆಳುವುದರೊಂದಿಗೆ ಈಗ ಮಾಡಿರುವುದಕ್ಕಿಂತ ಹೆಚ್ಚಿನದನ್ನು ಮುಂದೆ ಮಾಡಬೇಕಿದೆ ಎಂದು ಸೂಕ್ಷ್ಮವಾಗಿ ತಿಳಿಸಿಕೊಡುವುದರ ಮುಖೇನ ಮೈಸೂರುನ್ನು ಎಲ್ಲಾ ವಿಧದಲ್ಲಿ ಅಭಿವೃದ್ಧಿ ಪಡಿಸಲು ಪಣತೊಟ್ಟಿದ್ದು ಹೂಡಿಕೆದಾರರು ನೆರವಾಗಿ ಅವರನ್ನು ಸಂಪರ್ಕಿಸಿದಲ್ಲಿ ತಾವೆ ಮುಂದೆನಿಂತು ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆಯನ್ನು ನೀಡಿದರು. “ಕೆಬಿಯುಕೆ”ಯ ವತಿಯಿಂದ ಸ್ನೇಹಾ ಕುಲ್ಕರ್ಣಿ, “ಕಹೋ”ದ ವತಿಯಿಂದ ಚೆತನಾ ಭಟ್ ಹಾಗೂ “ಕನ್ನಡಿಗರು ಯುಕೆ” ವತಿಯಿಂದ ಗಣಪತಿ ಭಟ್ ಮಾತನಾಡಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಶ್ರೀ ರವಿಂದ್ರ ಜೋಶಿಯವರ ವಂದನಾರ್ಪಣೆಯೊಂದಿಗೆ, ಪ್ರತಾಪ ಸಿಂಹ ಅವರು ಕೊನೆಯದಾಗಿ ಭಾರತಿಯರು ಮತ್ತು ಕನ್ನಡಿಗರು ಎಲ್ಲೆ ಇರಲಿ ಮೋದಿ ಮತ್ತು ಯಡಿಯೂರಪ್ಪಾಜೀ ಅವರ ಸರ್ಕಾರ ಜನತೆಯ ಸುರಕ್ಷತೆಯ ದೃಷ್ಟಿಯಿಂದ ಬೆಕಾದ ಎಲ್ಲಾ ರೀತಿಯ ಸಹಾಯ ಸಹಕಾರವನ್ನು ಮಾಡಲು ಕಂಕಣ ಬದ್ಧವಾಗಿದೆ ಎಂದು ಅಭಯ ಹಸ್ತವನ್ನು ನೀಡುವುದರ ಮೂಲಕ ಸಂವಾದಕ್ಕೆ ತೆರೆ ಎಳೆಯಲಾಯಿತು.

ಧನ್ಯವಾದಗಳೊಂದಿಗೆ

-ಗೋವರ್ಧನ ಗಿರಿ ಜೋಷಿ

Leave a Reply

Your email address will not be published. Required fields are marked *