KUK Local Chapters

ಸಜ್ಜನ ಸಲ್ಲಾಪ – Vividlipi Zoom Session

ನಮಸ್ಕಾರ ಸ್ನೇಹಿತರೆ…!!

ವಿಚಿತ್ರವಾದರು ವೀಶೆಷವಾದಂತ ಮತ್ತೊಂದು ವಾರಾಂತ್ಯಕ್ಕೆ ನಾವು ನೀವೆಲ್ಲರು ಸಾಕ್ಷಿಯಾಗುತ್ತಿದ್ದೆವೆಯೆನೊ ಎನ್ನುವುದು ನನ್ನ ಅನಿಸಿಕೆ. ಕರೋನಾ ಎಂಬ ಕಂಟಕಪ್ರಾಯವಾದ ಮತ್ತು ಸಂಕಟಪ್ರದಾಯಕವೂ ಆದ ವಿಶೇಷ ಅತಿಥಿಯ ಆಗಮನದಿಂದಾಗಿ ವಿಶ್ವದಾದ್ಯಂತ ಸಾವು ನೋವುಗಳು, ದುಃಖ ದುಮ್ಮಾನಗಳು ಒಂದಡೆಯಾದರೆ, ಇನ್ನೊಂದೆಡೆ ಸಂತ್ರಸ್ತರಿಗೆ ಸಹಾಯ ಸಹಕಾರ, ಸಮಾಜ ಸೇವೆ ಮಾಡುವ ನೆಪದಲ್ಲಿ, ರಾಜಕೀಯ ಲಾಭ ನಷ್ಟಗಳು, ಧರ್ಮ ಜಾತಿಯಾದಾರಿತ ಓತ ಪ್ರೇತದಿಂದೊಡಗೂಡಿದ ಅನೇಕ ಹೇಳಿಕೆಗಳು, ಸುದ್ದಿ ಸಾರಾಂಶಗಳು ಯತೆಚ್ಛವಾಗಿ ಮಾದ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಾ ಪದೆ ಪದೆ ಬೆಡವೆಂದರು ಕಣ್ಣಿಗೆ ರಾಚುತ್ತ ಹೇಸಿಗೆ ಹುಟ್ಟುವಷ್ಟರ ಮಟ್ಟಿಗೆ ನಮ್ಮ ನಿಮ್ಮೆಲ್ಲರನ್ನು ಆವರಿಸಿಕೊಂಡಿವೆ ಎಂದರೆ ತಪ್ಪಾಗಲಾರದೆನೊ. ಅದರ ಪರಿಣಾಮ “ದಿನಾ ಸಾಯಿವವರಿಗೆ ಅಳುವವರಾರು” ಎನ್ನುವಂತಹ ಮನಸ್ಥಿತಿಯತ್ತ ಮನಸ್ಸಿನ ಯೋಚನಾ ಲಹರಿ ಸಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಕರೋನಾ ಎಂಬ ಶಬ್ದ ಕಿವಿಗೆ ಬಿದ್ದರೆ ಕೆಕ್ಕರಿಸಿಕೊಂಡು ನೋಡುವಂತಹ ಪರಸ್ಥಿತಿ ಮನೆಯಲ್ಲಿ ಹಾಗೂ ಮನಸ್ಸಿನಲ್ಲಿ ನಿರ್ಮಾಣವಾಗಿದ್ದರೆ ಅತಿಶಯೋಕ್ತಿಯೆನಲ್ಲ.
ಇಂತಹ ಕಠಿಣ ಹಾಗೂ ವಿಷಮ ಪರಸ್ಥಿತಿಯೊಂದಿಗೆ ನಾಲ್ಕುವಾರಗಳನ್ನು (೧೬-ಮಾರ್ಚ ನಿಂದ ೧೨-ಎಪ್ರಿಲ್) ಕಳೆದು ಐದನೇಯ ವಾರಕ್ಕೆ ಪಾದಾರ್ಪಣೆ ಮಾಡುತ್ತಿದ್ದೆವೆ. ಈ ಕಳೆದ ನಾಲ್ಕುವಾರಗಳಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಅನೇಕ ಸವಾಲುಗಳನ್ನು ಹೊತ್ತುತಂದಿರುವ ಹೋಸ ಜೀವನ ಶೈಲಿ ಅನೇಕ ಹೊಸ ಪ್ರಯೋಗಗಳಿಗೆ ನಮ್ಮನ್ನು ತೆರೆದುಕೊಳ್ಳುವಂತೆ ಪ್ರೇರೆಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ನಾಡು ನುಡಿ ದೇಶ ಭಾಷೆಯ ಪ್ರತೀಕವಾಗಿ ಯುನೈಟೆಡ್ ಕಿಂಗ್ಡಮ್ನನಾದ್ಯಂತ ಗುರುತಿಸಿಕೊಂಡಿರುವ “ಕನ್ನಡಿಗರು ಯುಕೆ” ತಂಡ ಆನ್ಲೈನ್ ಮತ್ತ ನೇರ ಪ್ರಸಾರದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವತ್ತ ತನ್ನ ಚಿಂತನೆಯನ್ನು ನಡೆಸಿ ಸುಂದರ ಹಾಗೂ ಸಮಯೋಚಿತವಾದಂತ ಕಾರ್ಯಕ್ರಮ(“ಸಜ್ಜನ ಸಲ್ಲಾಪ”)ಕ್ಕೆ ಸಹಕರಿಸುವುದರ ಮೂಲಕ ಶುಭಾರಂಭವನ್ನು ಮಾಡಿದೆ.
 ಸಾಹಿತ್ಯ ಪ್ರಿಯರ ವಿನಂತಿ ಮೇರೆಗೆ ಕನ್ನಡ ಸಾರಸ್ವತ ಲೋಕದಲ್ಲಿ ‘ಹಂಪನಾ’ ಎಂದೇ ಚಿರಪರಿಚಿತರಾಗಿರುವ ಹಂ ಪ ನಾಗರಾಜಯ್ಯನವರು ಮುಖ್ಯ ಅತಿಥಿಗಳಾಗಿ ಮತ್ತು ಭಾಷಣಕಾರರಾಗಿ ಆನ್ಲೈನ್ ನಲ್ಲಿ ನಡಿಸಿಕೊಟ್ಟ ಕಾರ್ಯಕ್ರಮ ಮನೊಲ್ಲಾಸವನ್ನುಗೊಳಿಸಿತು. ಹಪನಾ ಅವರು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ, ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುವುದರ ಮೂಲಕ ತಮ್ಮ ಸುದೀರ್ಘವಾದಂತ ಜೀವನವನ್ನು ಕನ್ನಡ ನಾಡು ನುಡಿ ಭಾಷೆಗಾಗಿ ಸಮರ್ಪಿಸಿದವರಲ್ಲಿ ಒಬ್ಬರು.ಅಂತಃವರ ಅನುಭವದ ನುಡಿಗಳನ್ನು ಕೆಳುವುದೆ ಸಾಹಿತ್ಯಾಸಕ್ತರಿಗೆ ಒಂದುರೀತಿಯಲ್ಲಿ ಹಬ್ಬ.
ಪ್ರೊ. ಹಂಪನಾ ಅವರು  ತಮ್ಮ ಜೀವನದ ಹಾಸ್ಯ ಪ್ರಸಂಗಗಳನ್ನು “ಸಜ್ಜನ ಸಲ್ಲಾಪ” ಕಾರ್ಯಕ್ರಮದ ಮೂಲಕ ಜೂಮ್ ಅಪ್ಲಿಕೇಶನ್ ನೆರವಿನೊಂದಿಗೆ ಸೆರಿಕೊಂಡಿದ್ದ ೬೦ ಕ್ಕೂ ಹೆಚ್ಚು ಜನರೊಂದಿಗೆ ಮೆಲಕು ಹಾಕುತ್ತ ಅವುಗಳ ಸವಿಯನ್ನು ಹಂಚಿಕೊಂಡರು. ಮಾತನಾಡುತ್ತು ಅವರು ಅಂದಿನ ದಿಗ್ಗಜ ಕವಿ ಸಾಹಿತಿಗಳೊಂದಿಗಿನ ತಮ್ಮ ನಿಕಟ ಸಂಪರ್ಕ ಮತ್ತು ಒಡನಾಟಗಳನ್ನು ವಿವರಿಸುತ್ತ ಅವರ ಮದ್ಯದಲ್ಲಿ ಅನುಭವಕ್ಕೆ ಬಂದ ಹಾಸ್ಯ ಪ್ರಸಂಗಗಳನ್ನು ಎಲ್ಲರ ಮುಂದೆ ಬಿಚ್ಚಿಡುತ್ತಾ, ಅವುಗಳಲ್ಲಿ ಜಿ.ಪಿ.ರಾಜರತ್ನಂ ಅವರನ್ನು ನಾಯಿಮರಿ ಕವಿ ಎಂದು ಸಂಭೋದಿಸುತ್ತಿದ್ದುದ್ದನ್ನು, ಮಾಹಮಸ್ತಕಾಭೀಶೆಕದ ಪಾಸನ್ನು ಪಾಸು ಮಾಡುವಾಗ ಸಿಕ್ಕಿಬಿದ್ದು ಬುದ್ದಿಮಾತನ್ನು ಹೆಳಿಸಿಕೊಂಡ್ಡದ್ದನ್ನು, ತಮ್ಮ ಗುರುಗಳಿಗೆ ಅಡ್ಡ ಹೆಸರುಗಳನಿಟ್ಟು ತಮ್ಮ ತಮ್ಮಲ್ಲಿಯೆ ಕರೆದುಕೊಂಡು ಹಾಸ್ಯಮಾಡಿಕೊಳ್ಳುತ್ತಿದ್ದನ್ನು,   ಸಿದ್ದಯ್ಯ ಪುರಾಣಿಕರ ಹೂಸು ಹೊರಬಂದ ಪ್ರಸಂಗವನ್ನು, ಸ್ನೇಹಿತನ ಮಧುಚಂದ್ರಮಕ್ಕೆ ಮಾಡಿದ ಸಹಾಯವನ್ನು ವಿವರಿಸುವ ನೆಪದಲ್ಲಿ ಸ್ನೇಹಿತನ ಮಡದಿ ಅವರ ಸಂಸಾರದಲ್ಲಿ ತಂದುಹಾಕುವಂತೆ ಕಮಲಾ ಹಂಪನಾ ಅವರ ಮುಂದೆ ವ್ಯಕ್ತಪಡಿಸಿದ್ದಂತಹ.ಅನೇಕ ಸಂಗತಿಗಳನ್ನು ಹಂಚಿಕೊಂಡರು. ಅದರೊಂದಿಗೆ ಕವಿ ಪಂಪ ಬರೆದ ಪದ್ಯಗಳ ಕೆಲವು ಸಾಲುಗಳನ್ನು ಆಯ್ದು ಸಂದರ್ಭಕ್ಕೆ ತಕ್ಕಂತೆ ಅವುಗಳು ಕೊಡುವ ವಿಭಿನ್ನ ಹಾಗು ವಿವಿಧಾರ್ಥಗಳ ವಿವರಣೆಯನ್ನು ಕೊಡುವುದರ ಮೂಲಕ ಒಂದುವರೆ ಗಂಟೆಗಳ ಕಾಲ ಕನ್ನಡ ಸಾಹಿತಿಗಳ ಹಾಗೂ ಸಾಹಿತ್ಯದ ಸೊಬಗನ್ನು ವಿವರಿಸುವುದರೊಂದಿಗೆ ಕೊನೆಯಲ್ಲಿ ವಿಶಿಷ್ಟ ವಾದಂತಹ ಒಂದು ಸ್ಪರ್ದಾತ್ಮಕ ಪರಿಕ್ಷೆಯ (ಭೂಮಿಯ ನಕ್ಷೆಯನ್ನು ಹರಿದು ಅದನ್ನು ಮತ್ತೆ ಜೋಡಿಸುವ ಸ್ಪರ್ದೆಯಲ್ಲಿ ೧೨ ವರ್ಷದ ಬಾಲಕಿಯು ತೋರಿದ ಜಾಣ್ಮೆಯನ್ನು ಇವತ್ತಿನ ಸನ್ನಿವೇಶಕ್ಕೆ ಥಳಕು ಹಾಕುತ್ತ, ಎಲ್ಲಿಯವರಗೆ ಮನುಷ್ಯ ಬದಲಾಗುವುದಿಲ್ಲವೋ,ಇತರ ಜೀವಿ ಜಂತುಗಳೆಡೆಗಿನ ತನ್ನ ಚಿಂತನೆಯನ್ನು ಸರಿಪಡಿಸಿಕೊಳ್ಳುವುದಿಲ್ಲವೂ ಅಲ್ಲಿಯವರೆಗೆ ಕರೋನಾದಂತಹ ಸಮಸ್ಯಗಳು ಬರುವುದರಲ್ಲಿ ಆಶ್ಚರ್ಯಪಡಬೆಕಾಗಿಲ್ಲ ಎನ್ನುವಂತಹ) ಅನುಭವದ ಮಾತುಗಳನ್ನು ಹಂಚಿಕೊಳ್ಳುವುದರೊಂದಿಗೆ ಮುಕ್ತಾಯ ಗೊಳಿಸಿದರು. ಒಟ್ಟಾರೆಯಾಗಿ ಇಂತಹ ಕ್ಲಿಷ್ಠಕರ ಸನ್ನಿವೇಷದಲ್ಲಿಯು “ಸಜ್ಜನ ಸಲ್ಲಾಪ” ಕಾರ್ಯಕ್ರಮದ ಮೂಲಕ ಸೆರಿದ್ದವರ ದಿನವನ್ನು ವಿಶಿಷ್ಟ ವಾಗಿಸುವಲ್ಲಿ ಕಾರ್ಯಕ್ರಮದ ಆಯೋಜನೆಯ ಸಂಪೂರ್ಣ ಹೋಣೆಯನ್ನು ಹೊತ್ತ
“ವಿವಿಧಲಿಪಿ”ಸಂಸ್ಥೆ ಆಂಗ್ಲನಾಡಿನಲ್ಲಿ ನೆಲೆಸಿದ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತೆಂದು ಹೆಳಲು ಹೆಮ್ಮೆಯನಿಸುತ್ತದೆ.
ಧನ್ಯವಾದಗಳೊಂದಿಗೆ…
-ಗೋವರ್ಧನ ಗಿರಿ ಜೋಷಿ.

Leave a Reply

Your email address will not be published. Required fields are marked *