KUK Local Chapters

ಪರೀಕ್ಷೆ

ಗೋವರ್ಧನ ಗಿರಿ ಜೋಷಿ
ನಮಸ್ಕಾರ ಸ್ನೇಹಿತರೆ…!!
ಈಗ ಸುಮಾರು ಬೆಳಗಿನ ಜಾವ ನಾಲ್ಕು ಘಂಟೆ ಸಮಯವಾಗಿರಬಹುದು, ತಾರಸಿಯ ತಲೆಯ ಮೇಲೆ “ತಾಟಕಿ”ಯ ಕಾಟದಂತೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಒಂದಡೆಯಾದರೆ ಹಿಂದೆ ವಿಧ್ಯಾರ್ಥಿಯ ಜೀವನದಲ್ಲಿ ಅನುಭವಿಸಿದ ಯಾತನೆಗಳನ್ನು ನೆನೆದು ಹಾರಿಹೋದ ನಿದ್ದೆ ಇನ್ನೊಂದು ಕಡೆ. ಇನ್ನೇನೂ  ಫೆಬ್ರವರಿ ಮುಗಿಯುತ್ತಾ ಬಂತು (ಇಲ್ಲಿ ಇಂಗ್ಲೆಂಡ್ ನಲ್ಲಿ ಚಳಿಗಾಲ ಮುಗಿಯುತ್ತಿದ್ದರೆ), ಅಲ್ಲಿ ಕೆಲವೆ ದಿನಗಳಲ್ಲಿ ಕರ್ನಾಟಕದಾದ್ಯಂತ ಹಾಗೂ ಭಾರತದ ಬಹುತೇಕ ರಾಜ್ಯಗಳಲ್ಲಿಯು ಕೂಡ ಈ ಬಾರಿಯ ಶೈಕ್ಷಣಿಕ ವರ್ಷದ ಪರೀಕ್ಷೆಯ ಆರಂಭವಾಗುವ ಕಾಲ.ಹಾಗಾಗಿ ಮತ್ತೊಮ್ಮೆ ನನ್ನ ಅನುಭವ ಮತ್ತು ಅನಿಸಿಕೆಯೊಂದಿಗೆ ಈ ಬರವಣಿಗೆಯ ಮೂಲಕ ಪರೀಕ್ಷೆ ಎನ್ನುವ ಸಂಕೀರ್ಣವಾದ ವಿಷಯದ ಸುತ್ತಮುತ್ತ ನನಗೆ ತಿಳಿದಷ್ಟು ಮತ್ತು ಅನುಭವಕ್ಕೆ ಬಂದಷ್ಟು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೆನೆ.
ಮೊದಲನೇಯದಾಗಿ ಪರಿಕ್ಷೆ ಎಂದರೇನು?ಯಾತಕ್ಕಾಗಿ ಬೇಕು ಮತ್ತು ಅವುಗಳನ್ನು ಎಕೆ ಎದುರಿಸಬೆಕು? ಅದರಿಂದಾಗುವ ಲಾಭ,ನಷ್ಟಗಳೇನು?  ಅದರ ಮಹತ್ವವೇನು? ಅದರ ಅವಶ್ಯಕತೆಯಷ್ಟು?ನಮ್ಮ ಜೀವನದಲ್ಲಿ ಯಶಸ್ವಿಯಾಗಲು ಶೈಕ್ಷಣಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಘಳಿಸಿ ಉತ್ತೀರ್ಣ ಆಗುವುದೊಂದೆ ದಾರಿಯಾ…? ಹಿಂದೆ ಯಾರು  ಅನುತ್ತೀರ್ನುಣರಾಗಿಲ್ಲವೆ? ಅನುತ್ತೀರ್ಣರಾದವರು ಎನಾದರು? ಹೀಗೆ ಒಮ್ಮೆ ಪರೀಕ್ಷೆಯ ಬಗ್ಗೆ ಯೋಚಿಸುತ್ತಾ ಹೊದಲ್ಲಿ ಇಂತಹಃ ಹಲವಾರು ಪ್ರಶ್ನೆಗಳು ಮನದಲ್ಲಿ ಸುಳಿದು ಹೋಗಬಹುದು. ಹಾಗಾಗಿ ನಮ್ಮನ್ನು ನಾವು ಮೊದಲು ಪರೀಕ್ಷೆಯೊಂದಿಗೆ ಪರಿಚಯಿಸಿಕೊಂಡು ಅದರೊಟ್ಟಿಗೆ ಚಿರಪರಿಚಿತವಾಗಿ,ಜೀವನದಲ್ಲಿ ಯಾವ ಯಾವ ಸಂದರ್ಭಗಳಲ್ಲಿ ಎತೆಂತಹಃ ಪರೀಕ್ಷೆಗಳಿಗೆ ಎಷ್ಟೆಷ್ಟು ಮಹತ್ವವನ್ನು ಕೊಡಬೆಕೆನ್ನುವುದನ್ನು ಅರಿತುಕೊಳ್ಳಬೆಕಾಗಿರುವುದು ಇಂದಿನ ಪರಿಸ್ಥಿತಿಗೆ ಅತ್ಯೆವಶ್ಯಕ ಎನ್ನುವುದ ನನ್ನ ಅಭಿಪ್ರಾಯ. ಎಕೆಂದರೆ ಮನುಷ್ಯನಾಗಿ ಹುಟ್ಟಿದ ಕ್ಷಣದಿಂದ ಪ್ರಕೃತಿದತ್ತವಾಗಿ ಪ್ರತಿದಿನ ಪ್ರತಿಕ್ಷಣ ಒಂದಲ್ಲಾ ಒಂದು ರೀತಿಯ ಪರೀಕ್ಷೆಗೆ ನಮ್ಮನ್ನು ನಾವು ಒಡ್ಡಿಕೊಂಡಿರುತ್ತೆವೆಯಾದರು ಯಾವತ್ತು ಅಂತಹಃ ಪರೀಕ್ಷಗಳಿಗೆ ಅಷ್ಟೊಂದ ಮಹತ್ವವನ್ನು ಕೊಡದ ಪರಿಣಾಮ ಅದರ ಫಲಿತಾಂಶಕ್ಕೆ ಅಷ್ಟಾಗಿ ಆತಂಕ ಪಡುವುದಾಗಲಿ, ಅಸಮಾಧಾನವಾಗಲಿ, ಅವಮಾನವಾಗಲಿ, ಅಂಜಿಕೆಯಾಗಲಿ ಅನುಭವಿಸುವುದಿಲ್ಲಾ ಆದರೆ ಕಾರಣಾಂತರಗಳಿಂದ ಶೈಕ್ಷಣಿಕ ಪರೀಕ್ಷೆಗಳಿಗೆ ಅಗತ್ಯಕಿಂತ ಹೆಚ್ಚಾದ ಮಹತ್ವವನ್ನು ಸೃಷ್ಟಿಸಿದ್ದಕ್ಕಾಗಿಯೋ ಅಥವಾ ನಾವಾಗಿಯೆ ಕೊಟ್ಟದಕ್ಕಾಗಿಯೊ ಎನೋ ಇಂದು ಶಿಕ್ಷಣ ಮೂಲಭೂತ ಅವಶ್ಯಕತೆಗಿಂತ ಹೆಚ್ಚಾಗಿ ಕೊಳ್ಳೆಬಾಕರ, ದರಿದ್ರ ದಲ್ಲಾಳಿಗಳ ವ್ಯವಹಾರದ ವಸ್ತುವಾಗಿ ವಿಜ್ರಂಭಿಸುವಂತಾಗಿರುವುದು ಮತ್ತು ಅದರ ಫಲಿತಾಂಶ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುವಷ್ಟರಮಟ್ಟಿಗೆ ಬೆಳೆದು ನಿಂತಿರುವುದು ಮಾತ್ರ ವಿಶಾದನೀಯ.
ಅಂದು ಕೇವಲ ಪ್ರತಿಶತ ೩೫% ಅಂಕಗಳನ್ನು ಪಡೆದರು ಆತ್ಮತೃಪ್ತಿಯಿಂದ ಅವರವರ ಅಭಿರುಚಿಗೆ ತಕ್ಕಂತೆ ಯಾವುದಾದರೊಂದು ಉದ್ಯೋಗವನ್ನು ಮಾಡಿಕೊಂಡು ಸಮಾಜದ ಸ್ವಾಸ್ಥ್ಯ ಕೆಡದಂತೆ ಸಂತ್ರೃಪ್ತಿಯ ಜೀವನ ನಡಿಸುತ್ತಿದ್ದರೆ ಇಂದು ಪ್ರತಿಶತ ೯೦% ರಿಂದ ೯೯% ಗಳವರೆಗೂ ಅಂಕಗಳನ್ನು ಪಡೆದರು ಆತ್ಮತೃಪ್ತಿಯು ಪಡದೆ ಸಂತೃಪ್ತಿಯನ್ನು ಹೊಂದದೆ ಅತೃಪ್ತತೆಯನ್ನು ಜೀವಮಾನವಿಡಿ ಉಳಿಸಿಕೊಂಡು ಬೆಳಿಸಿಕೊಂಡು ತಮ್ಮ ತಮ್ಮ ಜೀವನಗಳನ್ನು ಸಂತೃಪ್ತಿಗೊಳಿಸಿಕೊಳ್ಳಲಾಗದೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಬಿರುವಂತೆ ಮಾಡಿಕೊಳ್ಳುತ್ತಿರುವುದು ಮಾತ್ರ ಖೇದಕರ ಸಂಗತಿ ಹಾಗೂ ಅದರ ಕಾರಣಿಕರ್ತರು ಶಿಕ್ಷಕರಾಗಿಯೊ, ಪೋಷಕರಾಗಿಯೊ, ಸಹೋದರ ಸಹೋದರಿಯರಾಗಿಯೊ ಸಹಪಾಟಿಗಳಾಗಿಯೊ, ಸಹವರ್ತಿಗಳಾಗಿಯೊ ಅಥವಾ ಸಮಾಜದಲ್ಲೊಬ್ಬರಾಗಿಯೊ ನಾವು ನೀವಲ್ಲದೆ ಮತ್ತಾರು ಅಲ್ಲ.
ಈ ಮೂಲಕ ನನ್ನ ಎಲ್ಲಾ ಯುವ ಗೇಳೆಯ ಗೆಳತಿಯರಲ್ಲಿ ಕಳಕಳಿಯ ಮನವಿ, ಜೀವನ ಎನ್ನುವುದೊಂದು ಅದ್ಬುತ ಮತ್ತು ಅಚ್ಚರಿಗಳಿಂದ ತುಂಬಿದ ಪ್ರಯಾಣ ನೀವು ಕೇವಲ ಪ್ರಯಾಣಿಕರು ಮಾತ್ರ. ಹಾಗಾಗಿ ನಿಮ್ಮ ಗಮನ ಪ್ರಯಾಣವನ್ನು ಸುಸುತ್ರವಾಗಿ,ಯಶಸ್ವಿಯೊಂದಿಗೆ ಮುಗಿಸುವುದರತ್ತ ಇರಲಿಯೆ ಹೊರೆತು ಮೊಟಕು ಗೊಳಿಸುವುದರತ್ತ ಬೇಡ.ಜೀವನದಲ್ಲಿ ಪರೀಕ್ಷೆಗಳೆ ಹೊರೆತು ಪರೀಕ್ಷೆಯೆ ಜೀವನವಲ್ಲ. ಪ್ರಯಾಣದಲ್ಲಿ ನಾನಾ ಕಾರಣಗಳಿಂದ ಅಡಚಣೆಗಳಾಗಬಹುದು ಹಾಗಂತ ಪ್ರಯಾಣವನ್ನೆ ನಿಲ್ಲಿಸುವುದು ಅಸಮಂಜಸ, ಹತ್ತಿದ ಬಸ್ ಕೆಟ್ಟುನಿಂತರೆ ಸರಿಪಡಿಸಿಕೊಂಡು ಮುಂದೆ ಪ್ರಯಾಣಿಸುವುದರತ್ತ ಗಮನಕೊಡಿ. ಸರಿಪಡಿಸಲಾಗದು ಎಂದರೆ ರೈಲ್ವೆ ನಿಲ್ದಾಣದತ್ತ ಹೆಜ್ಜೆಯಿಡಿ, ರೈಲಿಗಾಗಿ ಕಾದುನೋಡಿ ಖಂಡಿತವಾಗಿಯು ನೀಮಗಾಗಿಯೊಂದು ಸೀಟು ಖಾಲಿ ಇದ್ದೆ ಇರುತ್ತದೆ ಅನ್ನುವ ಭರವಸೆಯೊಂದಿಗೆ ಹತ್ತಿ ನೋಡಿ, ಇಲ್ಲವೆಂದಾದರೆ ಆಗಲೂ ಎದೆಗುಂದಬೆಡಿ ಇನ್ನೂ ವಿಮಾನ ನಿಲ್ದಾಣವೊಂದು ಬಾಕಿ ಇದೆ ಎಂದು ಮರಿಯಬೆಡಿ. ಹಾಗೆ ಸುಮ್ಮನೆ ಒಮ್ಮೆ ಮೇಲೆ ಕಣ್ಣಾಹಿಸಿ ನೋಡಿ ನಿಮ್ಮ ಜೀವನದ ಪ್ರಯಾಣ
ಮತ್ತು ಅದರ ಯಶಸ್ಸಿನ ಆಕಾಶಕ್ಕೆ ನಿಮ್ಮನ್ನಲ್ಲದ ಹೊರೆತು ಪರೀಕ್ಷೆಯಿಂದಾಗಲಿ ಅಥವಾ ಬೇರೆ ಯಾರಿಂದಲು ಬೇಲಿ ಹಾಕಲು ಸಾಧ್ಯವಿಲ್ಲ ಎನ್ನುವುದು ಮಾತ್ರ ನನ್ನ ಅನುಭವದ ನುಡಿ…
ಶುಭ ಹಾರೈಕೆಗಳೊಂದಿಗೆ…
-ಗೋವರ್ಧನ ಗಿರಿ ಜೋಷಿ

Leave a Reply

Your email address will not be published. Required fields are marked *