KUK Local Chapters

ಕನ್ನಡಿಗರುಯುಕೆ – ೧೫ ನೇ ರಾಜ್ಯೋತ್ಸವ

ನಮಸ್ಕಾರ ಸ್ನೇಹಿತರೆ…

ಎಷ್ಟುಬಾರಿ ಬರೆದರು ಮತ್ತೆ ಮತ್ತೆ ಬರೆಯಲೆ ಬೆಕು ಎಂದು ಹಟಕ್ಕೆ ದೂಡುವ ಮನಸ್ಥಿತಿ ಇಂದು ಮತ್ತೊಂದು ಬರವಣಿಗೆಯನ್ನು ತಮ್ಮ ಮುಂದಿರಿಸಲು ಅನುವು ಮಾಡಿ ಕೊಟ್ಟಿದೆ.

ಕನಸುಗಳನ್ನು ದಂಡಿಯಾಗಿ ಹೊತ್ತುಕೊಂಡು ಭಾವನೆಗಳ ಬಂಡಿಯನ್ನು ಆತುರಾತುರದಲ್ಲಿ ಹತ್ತಿಕೊಂಡು ಸ್ನೇಹಗಳ ಕೊಂಡಿಯನ್ನು ಹುಡುಕುತ್ತಾ ಅಂದೊಂದು ದಿನ ಅ-ಪರಿಚಿತ ನಾಡಿಗೆ, ಚಿರಪರಿಚಿತರೊಬ್ಬರು ಇಲ್ಲದೆ ಒಂದು ಮುಂಜಾನೆ ನಾನು ಲಂಡನ ನಗರದ ‘ಹಿತ್ರೋ” ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದೆ.

ಹೊಸ ಜನ, ಬದಲಿಯಾದ ಸ್ಥಳ, ಸಮಯದ ವ್ಯತ್ಯಾಸ ಎಲ್ಲವು ಸೇರಿಕೊಂಡು ಸಮಯದೊಂದಿಗೆ ಸ್ಪರ್ಧೆಗೆ ಬಿದ್ದವನಂತೆ ಕಛೇರಿಯ ಕೆಲಸಗಳ ಹಿಂದೆ ಓಡುತ್ತಾ ಅದಷ್ಟೆ ಜಗತ್ತೆನೊ ಎನ್ನುವ ಹಾಗೆ ಕಾಲವನ್ನು ಕಳಿಯುತ್ತಿದೆ. ಕ್ರಮೇಣವಾಗಿ ಹಲವು ತಿಂಗಳುಗಳು ಉರಳಿರಬಹುದು ಎಕತಾನತೆಯಿಂದ ಬೆಸತ್ತು ಹೊಸತನಕ್ಕಾಗಿ ತುಡಿಯುತ್ತಿದ್ದಾಗ, ಸರಿಯಾಗಿ ಒಂದು ವರ್ಷದ ಹಿಂದೆ ಎಂದಿನಂತೆ ಒಂದು ದಿನ ಸಹದ್ಯೋಗಿಯೂಂದಿಗೆ ಹರಟುತ್ತಿದ್ದಾಗ, ಚರ್ಚೆಗೆ ಬಂದದ್ದೆ ಕನ್ನಡಿಗರುಯುಕೆ ಯ ೨೦೧೮ ರ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ. ಅದೃಷ್ಟವಶಾತ ಅಂದು ಆ ಕಾರ್ಯಕ್ರಮಕ್ಕೆ ಹೊಗುವ ಮನಸ್ಸು ಮಾಡಿದ್ದರ ಪರಿಣಾಮ ಇಂದು ಈ ಅಪರಿಚಿತ ನಾಡಿನಲ್ಲಿ ನನ್ನ ಮುಖ ಕೆಲವರಿಗೆ ಚಿರಪರಿಚಿತವಾಗಿದ್ದಲ್ಲದೆ ಹೊಸ ಸ್ನೇಹಿತರನ್ನು ಘಳಿಸಿ ಕೊಳ್ಳಲು ಅವಕಾಶ ಮಾಡಿ ಕೊಟ್ಟಿತು. ಅಲ್ಲಿಂದ ಶುರುವಾಗಿ ಕಳೆದ ಒಂದು ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಮತ್ತೆ ಮರಳಿ ಭೇಟಿ, ಆ ಆತ್ಮೀಯತೆ, ಆದರ,ಪ್ರೀತಿ ವಿಶ್ವಾಸ ಸದಾ ನನ್ನನ್ನು ಮತ್ತೊಂದು ಕಾರ್ಯಕ್ರಮದ ಬರುವಿಕೆಗಾಗಿ ತುದಿಗಾಲಿನ ಮೇಲೆ ನಿಂತು ಕಾದುಕೊಂಡಿರುವಂತೆ ಮಾಡಿರುವುದು ಸುಳ್ಳಲ್ಲ.

ಎಂದಿನಂತೆ ಕನ್ನಡಿಗರು ಯುಕೆ ತಂಡದ ಮತ್ತೂಂದು ಕಾರ್ಯಕ್ರಮ, ತನ್ನ ಹದಿನೈದನೆ ವರ್ಷದ ಕನ್ನಡ ರಾಜ್ಯೋತ್ಸವದ ಹಬ್ಬವನ್ನು ಇದೇ ನವೆಂಬರ್ ೯ನೇ ತಾರಿಕಿನಂದು ಲಂಡನ್ನ ನಗರದ ಹ್ಯಾರೋ ನ ಬೈರೂನ್ ಹಾಲ್ ನಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಸ್ಥಳೀಯ ಕಲಾವಿದರ ಕಲೆಯ ಪ್ರದರ್ಶನದೊಂದಿಗೆ ನಿಧಾನ ಗತಿಯಲ್ಲಿ ಶುರುವಾದ ಕಾರ್ಯಕ್ರಮ ಹೊತ್ತು ಕಳಿಯುತ್ತಿದ್ದಂತೆ ರಂಗೇರಲು ಪ್ರಾರಂಭಿಸಿತು. ಇದಕ್ಕು ಮುನ್ನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಪ್ರತಿಯೊಬ್ಬರಿಗೂ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಅರಿಶಿಣ, ಕುಂಕುಮ, ಬಳೆ ಹಾಗೂ ಬಾಗಿಣ ಕೊಡುವುದರ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರೆ,ಗಂಡಸರಿಗೆ ಹಾರಗಳನ್ನು ಹಾಕುವುದರ ಮೂಲಕ ಹಾಗೂ ಮಕ್ಕಳಿಗೆ ಮಣಿಕಟ್ಟು (ವೃಷ್ಟ ಬ್ಯಾಂಡ) ಕಟ್ಟುವುದರ ಮೂಲಕ ಈ ಬಾರಿ ವಿಭಿನ್ನ ರಿತಿಯಲ್ಲಿ ‌ಎಲ್ಲರನ್ನು ಬರಮಾಡಿಕೊಳ್ಳಲಾಯಿತು.

ಅಲ್ಲಿಂದ ಶುರುವಾದ ಕಾರ್ಯಕ್ರಮದ ಸೊಬಗು ಮುಂದೆ ಕನ್ನಡ ಕವಿ ಕಾವ್ಯ ಪರಂಪರೆಯನ್ನು ಪರಿಚಯಿಸುವ ಹಾಗೂ ಪ್ರತಿಬಿಂಬಿಸುವ ಕಲಾ ಪ್ರದರ್ಶನವನ್ನು (ಗ್ಯಾಲರಿಯನ್ನು) ಎರ್ಪಡಿಸಲಾಗಿತ್ತು. ಅದರೂಂದಿಗೆ ಹಲವಾರು ವಿವಿಧ ಬಗೆಯ ಹಳ್ಳಿಯ ಆಟಗಳ ಮಳಿಗೆಗಳನ್ನು ಆಯೂಜಿಸಲಾಗಿತ್ತು. ಅತಿಥಿಗಳಾದಿಯಾಗಿ ಬಂದ ಪ್ರತಿಯೊಬ್ಬರು ಆಟಗಳನ್ನಾಡುವುದರ ಮೂಲಕ ತಮ್ಮ ಬಾಲ್ಯದ ದಿನಗಳಿಗೆ ಮರಳಿ ಸಂತಸದಿಂದ ತೆಲಾಡಿದರು.

ಮುಂದುವರಿದು ತಂಡದ ಪರವಾಗಿ ಶಿವಳ್ಳಿ ಕ್ಯಾಟರರ್ಸ ತಯಾರಿಸಿದ್ದ ರುಚಿಕಟ್ಟಾದ ಭೋಜನವನ್ನು ಸ್ಥಳಿಯ ಪ್ರತಿಭೆಗಳ ಪ್ರದರ್ಶಿಸಿದ ಹಾಡು, ನೃತ್ಯಗಳೊಂದಿಗೆ ಸವಿಯುತ್ತಾ, ದೂರ ದೂರದ ಪ್ರದೇಶಗಳಿಂದ ಬಂದು ಮತ್ತು ಆಟಗಳನ್ನು ಆಡುವುದರ ಮೂಲಕ ಆದ ದಣಿವನ್ನು ಆರಿಸಿಕೂಳ್ಳುತ್ತ ವಿದ್ಯೂಕ್ತವಾಗಿ ಚಾಲನೆಯಾದ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸಡಗರದಿಂದ ಭಾಗಿಯಾದರು.

ಕನ್ನಡಿಗರುಯುಕೆ ತಂಡದ ಕಾರ್ಯಕಾರಿ ಸಮಿತಿಯ ಪರವಾಗಿ ಶ್ರೀ ಅನೀಲ್ ಕೊಂಡಬೆಟ್ಟುರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳಿಗೂ, ಕಲಾವಿದರಿಗೂ, ಪ್ರಾಯೋಜಕರಿಗು ಹಾಗೂ ನೆರೆದಿದ್ದ ಎಲ್ಲಾ ಕನ್ನಡಿಗರಿಗೂ ಸ್ವಾಗತವನ್ನು ಕೋರಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಸಿದ್ದ ಶ್ರೀಯುತ ಡಾ.ಕೆ.ಮುರಳಿದರ್ (ಕಾರ್ಯದರ್ಶಿಗಳು, ಕನ್ನಡ ಅಬಿವೃದ್ಧಿ ಪ್ರಾದಿಕಾರ) ಶ್ರೀ ರಮೇಶ ಭಟ್ಟ(ಕಲಾವಿದರು),ಕುಮಾರಿ ಅಂಜಲಿ ಶಾನಭೋಗ್(ಕಲಾವಿದರು) ಹಾಗೂ ಕನ್ನಡಿಗರುಯುಕೆ ತಂಡದ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರು ಸೆರಿಕೊಂಡು ಜೋತಿ ಬೆಳಗಿಸಿ, ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಗುಚ್ಛಗಳನ್ನು ಅರ್ಪಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನಿಡಿದರು

ಡಾ.ಕೆ.ಜಯಲಕ್ಷ್ಮೀ ಜೀತೆಂದ್ರ ಅವರು ಗಣೇಶ ಸ್ತುತಿಯನ್ನು ಪ್ರಸ್ತೂತ ಪಡಿಸುವುದರ ಮೂಲಕ ವಿಘ್ನ ನೀವಾರಕನನ್ನು ಪ್ರಾರ್ಥಿಸಿ, ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲೊಂದಾದ “ಸ್ನೇಹಯಾನ” ಹೊತ್ತಿಗೆಯ ಬಿಡುಗಡೆಗೆ ಅನುವು ಮಾಡಿಕೊಟ್ಟರು.

ಡಾ.ಮುರಳಿ ಹತ್ವಾರ್ (ಸ್ನೇಹಯಾನ ಹೊತ್ತಿಗೆಯ ಸಂಪಾದಕರು) ಪ್ರಾಸ್ತಾವಿಕ ಮಾತುಗಳನ್ನಾಡಿ, ಕನ್ನಡಿಗರುಯುಕೆ ನಡೆದು ಬಂದ ದಾರಿ, ಅದರ ಆಗೂ ಹೋಗುಗಳ ನೆನಪನ್ನು ಮೆಲಕು ಹಾಕುತ್ತ, ಅದೆಲ್ಲವು ನಮ್ಮ ನಿಮ್ಮಲ್ಲರ ಸ್ನೇಹದ ಯಾನ ಮತ್ತು ಅದರ ನೆನಪಿನ ಮೆರವಣಿಗೆಯೆ ಈ ೧೫ ನೇ ವರ್ಷದ ಕಾರ್ಯಕ್ರಮವಾದ್ದರಿಂದ ಹೊತ್ತಿಗೆಗೆ “ಸ್ನೇಹಯಾನ” ಎಂದು ಶಿರ್ಷಿಕೆಯನ್ನು ಹಾಗೂ “ಇದು ನೆನಪುಗಳ ಮೆರವಣಿಗೆ…” ಎನ್ನುವ ಉಪ ಶಿರ್ಷಿಕೆಯೊಂದಿಗೆ ಹೊರತರಲಾಗಿದೆ ಎಂದು ತಿಳಿಸಿ ಕೊಟ್ಟರು. ಸಹ ಸಂಪಾದಕರಾದ ಶ್ರೀನಿವಾಸ ಮಹೇಂದ್ರಕರ್ ಅವರು ಮಾತನಾಡಿ ಈ ಅತ್ಯುತ್ತಮವಾದ ಅವಕಾಶವನ್ನು ಅವರಿಗೆ ಒದಗಿಸಿ ಕೊಟ್ಟದ್ದಕ್ಕಾಗಿ ಕನ್ನಡಿಗರು ಯಕೆ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದರು. ಆಡಳಿತ ಸಂಪಾದಕರಾದ ಗಣಪತಿ ಭಟ್ ಅವರು ಮಾತನಾಡಿ ಸ್ನೇಹಯಾನ ದ ಹಿಂದಿರುವ ಎಲ್ಲರ ಸಹಕಾರ ಹಾಗೂ ಶ್ರಮದ ಬಗ್ಗೆ ವಿವರಿಸುತ್ತ ಹೊತ್ತಿಗೆಯನ್ನು ಹೊರತರವಲ್ಲಿ ಅತ್ಯೆಂತ ಮಹತ್ತರವಾದ ಪಾತ್ರ ವಹಿಸಿದ ಸಂಪಾದಕ ಬಳಗ ಜೋತೆಗೆ ಮುದ್ರಣ ವ್ಯವಸ್ಥೆಯನ್ನ ಅತ್ಯೆಂತ ಕಾಳಜಿ ವಹಿಸಿ ನೊಡಿಕೊಂಡ ರವೀಂದ್ರ ಜೋಶಿ ಅವರಿಗೆ, ಮುಖಪುಟ ವಿನ್ಯಾಸವನ್ನು ವಹಿಸಿಕೊಂಡ ಸತೀಶ ರಾವ ಅವರಿಗೆ ಮತ್ತು ಹೊತ್ತಿಗೆಯನ್ನು ಹೊರತರಲು ಹೆಚ್ಚಿನ ರಿತಿಯಲ್ಲಿ ಸಹಕರಿಸಿದ ಡಾ. ನೀರಜ ಪಾಟೀಲ್ ಅವರಿಗೂ ಹಾಗೂ ಎಲ್ಲಾ ಪ್ರಾಯೂಜಕರಿಗೂ ಧನ್ಯವಾದಗಳನ್ನು ತಿಳಿಸಿ ನಿರೂಪಕರಿಗೆ ನೆರೆದ ಅತಿಥಿಗಳನ್ನು ವೆದಿಕೆಗೆ ಆಹ್ವಾನಿಸಲು ಅನುಮಾಡಿಕೊಟ್ಟರು.

ಅತಿಥಿಗಳಾದ ಶ್ರೀ ಡಾ.ಕೆ.ಮುರಳಿಧರ್, ಶ್ರೀರಮೇಶ ಭಟ್, ಕುಮಾರಿ ಅಂಜಲಿ ಶಾನಭೋಗ ಹಾಗೂ ಸ್ಥಳಿಯ ಅತಿಥಿಗಳಾದ ಶ್ರೀಮತಿ.ಯಮುನಾ.ಎಸ್. ವಿ (ಭಾರತೀಯ ಹೈಕಮೀಶನ್ನಿನ ಕೌನ್ಸೆಲ್ಲರ್), ಲಾಂಬೆತ್ ನ ಮಾಜಿ ಮೇಯರ್ ಡಾ.ನೀರಜ ಪಾಟೀಲ್ ಹಾಗೂ ಕನ್ನಡದವರೆ ಕೌನ್ಸಿಲರಗಳಾದ ಶ್ರೀ ಸುರೇಶ ಗಟ್ಟಾಪುರ ಮತ್ತು ಕುಮಾರ್ ನಾಯ್ಕ್ ಅವರು ಕೆಯುಕೆ ಯ ೧೫ ನೇ ವರ್ಷದ ಸ್ಮರಣೆ ಸಂಚಿಕೆ “ಸ್ನೇಹಯಾನ”ವನ್ನು ಬಿಡುಗಡೆ ಮಾಡಿದರು.

ಮುಂದುವರಿದು ಕಾರ್ಯಕ್ರಮದ ಮತ್ತೊಂದು ಆಕರ್ಷಕ ಕೆಂದ್ರಬಿಂದುವಾದ ಚಿರಂತನ ತಂಡ ಮತ್ತು ಅದರ ಕಲಾವಿದರಾದ ಡಾ.ಜಯಲಕ್ಷ್ಮಿ ಜೀತೆಂದ್ರ, ಕುಮಾರಿ ಸೃಜನಾ ಗಾಯತ್ರಿ, ಕುಮಾರಿ ಕಾವ್ಯ, ಶ್ರೀಮತಿ ಭಗವತಿ ಹೆಚ್.ವಿ, ಕುಮಾರಿ ಸಾಕ್ಷಿ ಜೈನ್, ಕುಮಾರಿ ರಿಷೀಕಾ ಗೌಡರ್ ಹಾಗೂ ಶ್ರೀಮತಿ ಶುಭಾನ್ಶಿ ಎನ್ ಅವರು “ಲಾಲಿತ್ಯ”ದ ಪರಿಕಲ್ಪನೆಯಡಿ ಕವಿ,ಕಾವ್ಯ ಪರಂಪರೆಯನ್ನು ಬಿಂಬಿಸು ಹಲವಾರು ನೃತ್ಯ ಪ್ರದರ್ಶನಗಳನ್ನು ಪ್ರದರ್ಶಿಸುವುದರ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಡಾ. ಕೆ ಮುರಳಿಧರ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕನ್ನಡ ಕಲಿ ಮಕ್ಕಳಿಗೆ ಅಭಿನಂದನಾ ಪತ್ರ ಗಳನ್ನು ವಿತರಿಸುವುದರ ಮೂಲಕ ಮಾತನಾಡಿ ಕೆಯುಕೆ ತಂಡದ ಅವಿರತ ಪ್ರಯತ್ನ, ಕನ್ನಡದ ಬೆಳವಣೆಗೆಗೆ ಹಾಗೂ ಪ್ರಸರಣೆಗೆ ಮಾಡುತ್ತಿರುವ ಕೆಲಸಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದಿಸಿದರು. ಅದೆ ರಿತಿಯಾಗಿ ಕಲಾವಿದ ಅತಿಥಿಯಾಗಿ ಆಗಮಿಸಿದ್ದ ಶ್ರೀ.ರಮೇಶ ಭಟ್ ಅವರು ಮಾತನಾಡಿ ಮಾತಿನ ಬಗೆಗಿನ ಮಹತ್ವ ಮತ್ತು ಮಾತುಗಳಿಂದ ತಮಗಾದ ಅನೂಕೂಲ ಹಾಗೂ ಅನಾನುಕೂಲವನ್ನು ಹಂಚಿಕೂಂಡರು. ಮುಂದುವರಿದು ಅಂದು ಕನ್ನಡ ಚಿತ್ರರಂಗ ಕಂಡ ಧೀಮಂತ ನಟ ಶಂಕರನಾಗ ರವರ ಜನ್ಮದಿನವಾದ್ದರಿಂದ ಅವರ ಮತ್ತು ತಮ್ಮ ನಡುವಿನ ಒಡನಾಟ ಹಾಗೂ ಶಂಕರನಾಗ ಅವರಿಗಿದ್ದ ಕನ್ನಡ ಚಿತ್ರರಂಗದ ಬಗೆಗಿದ್ದ ಕಾಳಜಿ ಮತ್ತು ಕಲಾರಂಗಕ್ಕೆ ರಂಗಶಂಕರದ ಕೊಡುಗೆಯನ್ನು ವಿವರಿಸಿದರು.

ನಂತರ ವೇದಿಕೆಯನ್ನೆರಿದ ಅಪ್ರತಿಮ ಕಲಾವಿದೆ, ಅಪರೂಪದ ಹಾಗೂ ವಿರಳಾತಿ ವಿರಳ ಸ್ಯಾಕ್ಸೋಫೂನ್ ಕಲಾವಿದರಲ್ಲೂಬ್ಬರಾದ ಕುಮಾರಿ ಅಂಜಲಿ ಶಾನಭೋಗ್ ರವರು ತಮ್ಮ ಮಧುರವಾದ ಹಾಗೂ ವೈವಿದ್ಯಮಯ ಸ್ಯಾಕ್ಸೋಫೂನ್ ವಾದನದಿಂದ ನೆರದಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿದಾಡುವಂತೆ ಮಾಡಿದರು. ಈ ಮದ್ಯ ವಿಶೇಷ ಅತಿಥಿ ಗಳಾಗಿ ಆಗಮಿಸಿದ ನಟಿ, ಕುಮಾರಿ ಮನ್ವಿತಾ ಹರೀಶ ಕಾಮತ್ ಅವರನ್ನು ಬರಮಾಡಿಕೊಂಡು ಅಭಿನಂದಿಸಲಾಯಿತು.

ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಹೊತ್ತಿದ್ದ ದೀಪಾ ರಾವ್, ಅನೂಷಾ ಗೌಡ ಹಾಗೂ ಶುಭಾ ಸಚಿನ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿ ಕೊಟ್ಟರು. ವಿರಾಮದ ವೆಳೆಯಲ್ಲಿ ಚಹ ದೊಂದಿಗೆ ಸವಿಯಲು ಲಘು ಉಪಹಾರ ಹಾಗೂ ಬೇಕರಿ ಐಟಮಗಳ ವ್ಯವಸ್ಥೆಯನ್ನು ರಂಜನಿ’ಸ್ ಕಿಚನರವರು ವಹಿಸಿಕೊಂಡಿದ್ದರು. ಕೆಯುಕೆ ತಂಡದ ಪರವಾಗಿ ರಮೇಶ ಮಾರೆಗುದ್ದಿಯವರು ವಂದನಾರ್ಪಣೆಯನ್ನು ಸಲ್ಲಿಸಿದರು. ಕೊನೆಯಲ್ಲಿ ಅಂಜಲಿ ಶಾನಭೋಗ್ ಅವರು ವಂದೆಮಾತರಂ ಗೀತೆಯನ್ನು ಸ್ಯಾಕ್ಸೋಫೂನ್ ನಲ್ಲಿ ನುಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ತೆರೆಯನ್ನೆಳೆದರು.

ಒಟ್ಟಾರೆಯಾಗಿ ಮತ್ತೊಂದು ಅಚ್ಚುಕಟ್ಟಾದ, ವಿನೂತನಶೈಲಿಯಲ್ಲಿ , ವಿಭಿನ್ನವಾಗಿ ಆಯೋಜಿಸಿದ ತನ್ನ ೧೫ ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು “ಕನ್ನಡಿಗರು ಯುಕೆ” ತಂಡ ಅತಿ ವಿಜ್ರಂಭಣೆಯಿಂದ ಆಚರಿಸುವುದರ ಮೂಲಕ ಕನ್ನಡದ ಬಗೆಗಿನ ತಮ್ಮ ಪ್ರೀತಿ ಹಾಗೂ ಕಾಳಜಿಯನ್ನು ಮತ್ತೂಮ್ಮೆ ಎತ್ತಿಹಿಡಿಯುವಲ್ಲಿ ಯಶಸ್ವಿಯಾಯಿತು.

ಇದೆಲ್ಲವನ್ನು ಆಯೋಜನಾ ಸಮಿತಿಯ ಸದೆಸ್ಯರಲ್ಲೊಬ್ಬರಾಗಿ ಅತಿ ಹತ್ತಿರದಿಂದ ನೊಡಿ ಆನಂದಿಸಿ, ಅನುಭವವನ್ನು ಪಡೆಯಲು ಅವಕಾಶವನ್ನು ಮಾಡಿಕೊಟ್ಟ ಕೆಯುಕೆ ತಂಡದ ಎಲ್ಲಾ ಪದಾದಿ ಕಾರಿಗಳಿಗೂ ನಾನು ಮತ್ತೊಮ್ಮೆ ಚಿರರುಣಿ…

ಧನ್ಯವಾದಗಳೂಂದಿಗೆ…

-ಗೋವರ್ಧನ ಗಿರಿ ಜೋಷಿ

ಛಾಯಾ ಚಿತ್ರಣ – ವೇಣು ಭರದ್ವಾಜ

Leave a Reply

Your email address will not be published. Required fields are marked *