KUK News & Events

ಕನ್ನಡಿಗರುಯುಕೆಯ ೧೫ನೇ ವಾರ್ಷಿಕ ವರ್ಧಂತಿ – ಕನ್ನಡ ರಾಜ್ಯೋತ್ಸವ ೨೦೧೯

ಇದೇ ನವೆಂಬರ್ ೯ ಶನಿವಾರದಂದು, ಲಂಡನ್ ಹ್ಯಾರೋನಲ್ಲಿ ಕನ್ನಡಿಗರುಯುಕೆಯ ೧೫ನೇ ವರ್ಷದ ಕನ್ನಡ ರಾಜ್ಯೋತ್ಸವ “ಲಾಲಿತ್ಯ – ಕನ್ನಡ ಕವಿ ಕಾವ್ಯ ಪರಂಪರೆಯ ಸಂಭ್ರಮ” ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದು ನಿರೀಕ್ಷೆಗೂ ಮೀರಿ ಆಗಮಿಸಿದ್ದ ಎಲ್ಲ ಕನ್ನಡಿಗರಿಂದ ಪ್ರಶಂಸಿಲ್ಪಟ್ಟಿತು. ಈ ಯಶಸ್ಸಿನ ಮೊದಲ ಕಾರಣ, ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕನ್ನಡ ನಾಡಿನ ಹಳ್ಳಿ ಆಟಗಳನ್ನು ಆಡಿ ಆನಂದಿಸಿ, ಕರ್ನಾಟಕ ಸವಿರುಚಿಯ ಊಟವನ್ನು ಸವಿದು, ನಡೆದ ಎಲ್ಲ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಮನಸಾರೆ ಸಂಭ್ರಮಿಸಿ, ಕಲಾವಿದರಿಗೂ, ಕನ್ನಡಿಗರುಯುಕೆಗೂ ಪ್ರೋತ್ಸಾಹ ನೀಡಿದ ಆಂಗ್ಲನಾಡಿನ ಕನ್ನಡಿಗರಿಗೆ ಕನ್ನಡಿಗರುಯುಕೆಯು ಅತ್ಯಂತ ಚಿರಋಣಿಯಾಗಿರುತ್ತದೆ.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕನ್ನಡಕಲಿ ಮಕ್ಕಳಿಗೆ ಪ್ರಮಾಣಪತ್ರಗಳನ್ನು ಪ್ರಧಾನ ಮಾಡಿ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಪಸರಿಕೆಗೆ ಕನ್ನಡಿಗರುಯುಕೆ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹದ ಮಾತುಗಳನ್ನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀಯತ ಕೆ.ಮುರಳೀಧರ ಅವರಿಗೆ ಕನ್ನಡಿಗರುಯುಕೆಯ ಪರವಾಗಿ ನಮನಗಳು, ತುಂಬು ಹೃದಯದ ಧನ್ಯವಾದಗಳು. ಇವರೊಂದಿಗೆ ಪ್ರಸ್ತುತರಾಗಿದ್ದು, ಕನ್ನಡಿಗರುಯುಕೆಯ ೧೫ನೇ ವರ್ಷದ ಸ್ಮರಣ ಸಂಚಿಕೆಯ ಉದ್ಘಾಟನೆ/ಬಿಡುಗಡೆಯಲ್ಲಿ ಪಾಲ್ಗೊಂಡ ಇತರ ಗಣ್ಯ ಅತಿಥಿಗಳಾದ ಭಾರತೀಯ ಹೈ ಕಮಿಶನ್ನಿನ ಕೌನ್ಸೆಲ್ಲರ್ ಶ್ರೀಮತಿ ಯಮುನ ಎಸ್ ವಿ, ಲಾಂಬೆತ್ ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್, ಕೌನ್ಸಿಲ್ಲರಾದ ಶ್ರೀ ಸುರೇಶ ಗಟ್ಟಾಪುರ್ ಹಾಗೂ ಡಾ. ಕುಮಾರ್ ನಾಯ್ಕ್ ಇವರೆಲ್ಲರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
ಈ ಸಮಾರಂಭಕ್ಕೆ ಕಲಾವಿದ ಅತಿಥಿಯಾಗಿ ಆಗಮಿಸಿ ತಮ್ಮ ಚಿತ್ರರಂಗದ ಅನುಭವ, ಶಂಕರ್ ನಾಗ್ ಅವರೊಂದಿನ ಒಡನಾಟದ ಸ್ವಾರಸ್ಯಕರ ಪ್ರಸಂಗಗಳನ್ನು ನಮ್ಮೊಂದಿಗೆ ಹಂಚಿಕೊಂಡ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಕ್ರೇಜಿ ಕರ್ನಲ್ ಶ್ರೀ ರಮೇಶ್ ಭಟ್ ಅವರಿಗೂ ಕನ್ನಡಿಗರುಯುಕೆ ಹಾಗೂ ಆಂಗ್ಲನಾಡಿನ ಕನ್ನಡಿಗರಿಂದ ಹೃತ್ಪೂರ್ವಕ ಧನ್ಯವಾದಗಳು.
ಈ ಕಾರ್ಯಕ್ರಮದ ಯಶಸ್ಸಿಗೆ ಕನ್ನಡಿಗರುಯುಕೆಯ ಕಾರ್ಯಕರ್ತರಷ್ಟೇ ಸಮನಾಗಿ ಶ್ರಮಿಸಿ, ಕಾರ್ಯಕ್ರಮದ ಪ್ರಸ್ತುತಿಗೆ ಸಿದ್ಧತೆಗಳನ್ನು ಮಾಡಲು ಹಗಲಿರುಳು ದುಡಿದು, ಕವಿ ಕಾವ್ಯ ಪ್ರರಂಪರೆ ಹಳೆಗನ್ನಡದಿಂದ ನವ್ಯ ಕನ್ನಡದ ವರೆಗೆ ಬೆಳೆದು ಬಂದ ರೀತಿಯನ್ನು ತಮ್ಮ ಕಲಾವಿದರಿಂದ ನೃತ್ಯರೂಪಕಗಳ ಮೂಲಕ ಪ್ರದರ್ಶಿಸಿ, ನಿರೂಪಿಸಿ, ಕನ್ನಡಿಗರುಯುಕೆಯ ೧೫ನೇ ವಾರ್ಷಿಕ ವರ್ಧಂತಿಯ ಪ್ರಮುಖ ಆಕರ್ಷಣೆಯ ಕಾರ್ಯಕ್ರಮವನ್ನು ಎಲ್ಲ ಪ್ರೇಕ್ಷಕರು ಮೆಚ್ಚಿ ತಲೆದೂಗುವಂತೆ ಪ್ರಸ್ತುತ ಪಡಿಸಿದ ದಾವಣಗೆರೆಯ “ಚಿರಂತನ” ತಂಡಕ್ಕೂ, ಅದರ ಕಲಾವಿದರಿಗೂ, ದೀಪ ಎನ್ ರಾವ್, ಮಾಧವ್  ಮತ್ತು ಅಲಕಾನಂದ ಇವರೆಲ್ಲರಿಗೂ ಕನ್ನಡಿಗರುಕೆಯು ತುಂಬಾ ಅಭಾರಿಯಾಗಿರುತ್ತದೆ. ಎಲ್ಲರಿಗೂ ಮನದಾಳದ ಧನ್ಯವಾದಗಳು.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ, ಎಲ್ಲರ ಮನಸೂರೆಗೊಂಡ ಅಂಜಲಿ ಶ್ಯಾನ್ ಭೋಗ್ ಅವರ ಸ್ಯಾಕ್ಸೋಫೋನ್ ವಾದನ. ತಮ್ಮ ಮನಮೋಹಕ ಸಂಗೀತವಾದನದಿಂದ ಎಲ್ಲರ ಮನರಂಜಿಸಿ, ಪ್ರೇಕ್ಷಕರು ಕುಣಿಯುವಂತ ಮಾಡಿದ ಈ ಕಲಾವಿದೆಗೆ ನಮ್ಮ ನಲ್ಮೆಯ ಕೃತಜ್ಞತೆಗಳು. ಸ್ಯಾಕ್ಸೋಫೋನ್ ವಾದನದ ಜೊತೆ ತಮ್ಮ ಸುಮಧುರ ಕಂಠದಿಂದ ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಿದ ಶ್ರೀದೇವಿ ಮತ್ತು ವಿಜೇಂದ್ರ ದಂಪತಿಗಳಿಗೆ ಹೃತ್ಪೂರ್ವಕ ಧನ್ಯವಾದಳು. ಪಕ್ಕವಾದ್ಯಗಳಿಂದ ಈ ಕಲಾವಿದರಿಗೆ ಸಹಯೋಗ ನೀಡಿದ ಮುಖೇಶ್ ಹಾಗೂ ಗಣೇಶ್ ಅವರಿಗೂ ನಮ್ಮ ಧನ್ಯವಾದಗಳು.
ತನ್ನ ಆಕರ್ಷಕ ಶೈಲಿಯಿಂದ ಕಾರ್ಯಕ್ರಮ ನಿರೂಪಣೆ ಮಾಡಿ ಪ್ರೇಕ್ಷಕರ ಗಮನವನ್ನು ಸೆರೆಹಿಡಿದಿಟ್ಟ , ಉದಯ ಟಿವಿ ಯ ನಿರೂಪಕಿ ಅನುಶಾ ಗೌಡ ಅವರಿಗೂ, ಮೊದಲ ಭಾಗದ ನಿರೂಪಣೆಯನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ ಶುಭ ಸಚಿನ್ ಅವರಿಗೂ ಕನ್ನಡಿಗರುಯುಕೆಯ ಹೃತ್ಪೂರ್ವಕ ಧನ್ಯವಾದಗಳು.

ಸೊಗಸಾಗಿ ಕಲಾಪ್ರದರ್ಶನ ಮಾಡಿದ ಸ್ಥಳೀಯ ಪ್ರತಿಭೆಗಳಿಗೂ ಮತ್ತು ಕನ್ನಡ ಕಲಿ ಮಕ್ಕಳಿಗೂ ನಮ್ಮ ಅನಂತ ಕೃತಜ್ಞತೆಗಳು. ೧೫ನೇ ವಾರ್ಷಿಕ ವರ್ಧಂತಿಯ ಸ್ಮರಣ ಸಂಚಿಕೆ “ಸ್ನೇಹಯಾನ” ದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಡಾ ಮುರಲಿ ಹತ್ವಾರ್ ಹಾಗು ಸಹ ಸಂಪಾದಕರಾದ ಶ್ರೀನಿವಾಸ್ ಮಹೇಂದ್ರಕರ್ ಅವರಿಗೂ ನಾವು ತುಂಬಾ ಅಭಾರಿ. “ಸ್ನೇಹಯಾನ” ದ ಪ್ರಕಟಣೆಯಲ್ಲಿ ವಿಶೇಷ ಉಲ್ಲೇಖ ಮುಖ್ಯ ಪಾತ್ರ ವಹಿಸಿದ ಮೈಸೂರಿನ ಶ್ರೀ ರವೀಂದ್ರ ಜೋಶಿಯವರಿಗೆ ಸಲ್ಲತಕ್ಕದ್ದು. ಇದಲ್ಲದೆ ಸಂಚಿಕೆಯ ಮುಖಪುಟ ವಿನ್ಯಾಸಕರಾದ ಶ್ರೀ ಸತೀಶ್ ರಾವ್ ಅವರಿಗೆ ನಮ್ಮ ವಿಶೇಷ ವಂದನೆಗಳು. ಈ ಸಂಚಿಕೆಯ ಸಂಕಲನಕ್ಕೂ, ಮುದ್ರಣಕ್ಕೂ ಹಗಲಿರುಳು ಶ್ರಮಿಸಿದ ಅವರಿಗೂ ಅವರ ಸಿಬ್ಬಂದಿ ವರ್ಗಕ್ಕೂ ಕನ್ನಡಿಗರುಯುಕೆ ಚಿರಋಣಿಯಾಗಿರುತ್ತದೆ.

ಸ್ವಾದಿಷ್ಟಕರ ಭೋಜನ ಹಾಗು ತಿಂಡಿ ತಿನಿಸುಗಳಿಂದ ಪ್ರೇಕ್ಷಕರ ಶಹಬಾಸ್ ಗಿರಿಯನ್ನು ಗಳಿಸಿದ ಶಿವಳ್ಳಿ ರೆಸ್ಟೋರೆಂಟ್ ಅವರಿಗೂ, ಧಾವಣಿ ವ್ಯವಸ್ಥೆ ಒದಗಿಸಿದ ಜಾಸ್ ಡಿಜಿಟಲ್ ಅವರಿಗೂ ನಮ್ಮ ಅನಂತ ಧನ್ಯವಾದಗಳು.
ನಮ್ಮ ಈ ಕಾ ರ್ಯಕ್ರಮ ಪ್ರಾಯೋಜಕರಾದ Freedom Mortgages, SBI, HDFC, Air India, media partner Namm Radio, Ranjinis Kitchen ಇವರೆಲ್ಲರಿಗೂ ನಮ್ಮ ಕೃತಜ್ಞತೆಗಳು. ಅಂತೆಯೇ “ಸ್ನೇಹಯಾನ” ದ ಪ್ರಾಯೋಜಕರಾದ Moor Park Specialist Dental Care, Skylink, Fastway Worldwide Express,Octavez, VR Mortgage Solutions, Freedom Circle, The Lambeth Basaveshwara Foundation, Silverside Protection & Mortgages, Voyage Experia Holidays LLP, Mystic Pillars, Reliable Quality ConsultingUK Ltd, Ranjinis Kitchen, Canopy Kaapi, Shivalli, Sangeetha , Matrix Square properties, SBI UK, Air India, Vivdlipi, Selfi Mummy & Google Daddy ಇವರೆಲ್ಲರಿಗೂ ಕನ್ನಡಿಗರುಯುಕೆಯ ಧನ್ಯವಾದಗಳು. ಇದಲ್ಲದೇ ನಮ್ಮ ಕಾರ್ಯಕ್ರಮದಲ್ಲಿ ಸ್ಟಾಲ್ ಇಡುವದರ ಮೂಲಕ ಪ್ರಾಯೋಜಕತ್ವ ನೀಡಿದ ಮೇಘನಾ ಆಚಾರ್ಯ, ಪ್ರೆಸಿಡೆನ್ಸಿಯಲ್ ಟವರ್ಸ್, ಸರದಾರ್ ಹೋಮ್ಸ್, ಸರ್ ಝಮೀನ್, DilSe Tours ಹಾಗೂ ಆಮ್ ವೆ ಇವರಿಗೂ ಧನ್ಯವಾದಗಳು

ನಮ್ಮ ಎಲ್ಲ ಕಾರ್ಯಕ್ರಮಗಳ ಬೆನ್ನೆಲುಬಾಗಿ ನಿಂತು ಶ್ರಮಿಸಿದ ಎಲ್ಲ ಸ್ವಯಂಸೇವಕರಿಗೂ ನಾವು ಎಂದಿಗೂ ಚಿರಋಣಿಯಾಗಿರುತ್ತೇವೆ. ಈ ಕಾರ್ಯಕ್ರಮದ ಮಧುರ ಕ್ಷಣಗಳನ್ನು ಸೆರೆಹಿಡಿದು ನಮಗೆಲ್ಲ ನೆನಪುಗಳ ಛಾಯಾಚಿತ್ರಗಳನ್ನು ನೀಡಿದ Clicks Creative Studio ದ ವೇಣು ಭಾರದ್ವಾಜ್ ಆವರಿಗೂ, ವಿಡಿಯೋ ಪ್ರೊಡಕ್ಷನ್ ಕಂಪನಿ ಇನ್ಫರ್ನೋ ಸ್ವಿಚ್ ಫಿಲಂಸ್ ಹಾಗೂ ಆಸ್ಥಾ ಟಿವಿ ಲೈವ್ ವಿಡಿಯೋ, ವಸಂತ್ ವೊರ್ಲ್ಯಾ ಎಲ್ಈಡಿ ಮತ್ತು ಜಾಸ್ ಆಡಿಯೋ ಇವರಿಗೂ ಅನಂತ ಧನ್ಯವಾದಗಳು.

ಮತ್ತೊಮ್ಮೆ, ಕನ್ನಡ ಭಾಷೆ ಹಾಗು ಸಂಸ್ಕೃತಿಯನ್ನು ಆಂಗ್ಲನಾಡಿನಲ್ಲಿ ಬೆಳೆಸಿ ಪಸರಿಸುವುದಕ್ಕೆ ಕನ್ನಡಿಗರುಯುಕೆ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮ ಬೆಂಬಲ ಪ್ರೋತ್ಸಾಹ ನಮ್ಮ ಸ್ಪೂರ್ತಿ, ಅದಕ್ಕೆ ನಾವು ಎಂದೆಂದಿಗೂ ಚಿರಋಣಿ.

Leave a Reply

Your email address will not be published. Required fields are marked *