KUK Local Chapters

ಕನ್ನಡ ರಾಜ್ಯೋತ್ಸವ ಆಮಂತ್ರಣ – ಗೋವರ್ಧನ ಗಿರಿ ಜೋಷಿ

ನಮಸ್ಕಾರ ಸ್ನೇಹಿತರೇ…!!
ಮೊದಲಿಗೆ ಎಲ್ಲರಿಗೂ ಇತ್ತಿಚಿಗೆ ಆಚರಿಸಿದ ಸರ್ವಶ್ರೇಷ್ಠ ಹಬ್ಬಗಳಲ್ಲೊಂದಾದ, ನಮ್ಮ ನಾಡಹಬ್ಬವೆಂದೆ ಪ್ರಖ್ಯಾತವಾದ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು..!!. ಎಂದಿನದಕ್ಕಿಂತಲು ತುಸು ಹೆಚ್ಚಿನ ಕೆಲಸದ ಒತ್ತಡದೊಂದಿಗೆ ಶುರುವಾದ ಕಳೆದವಾರ, ಶುಕ್ರವಾರ ಬಂದುದ್ದುರ ಅರವಿಗೆ ಬಾರದಷ್ಟರಮಟ್ಟಿಗೆ ಆವರಿಸಿಕೊಂಡು, ಕೇಲಸದಲ್ಲಿನ ಸಮಸ್ಯೆಗಳೊಂದಿಗೆ ಸೆಣಸಿ ಅವುಗಳನ್ನು ಮಣಿಸಿ ಬಗೆಹರಿಸುವುದು ಒಂದುಕಡೆಯಾದರೆ, ಮನಸ್ಸಿನ ಮೂಲೆಯಲ್ಲಿ ಅಡಗಿ ಕುಳಿತ ಸಣ್ಣ ಸಣ್ಣ ಆಸೆ ಆಕಾಂಕ್ಷೆಗಳಿಗೆ ಅಕ್ಷರಗಳಿಂದ ಬಣ್ಣಗಳನ್ನು ಬಳೆದು ವರ್ಣರಂಜಿತ ಸಾಲುಗಳಾಗಿ ಬರಮಾಡಿಕೊಂಡು ಅದರಿಂದ ಮನದ ಬಯಕೆಯನ್ನು ಇಡೆರಿಸಿಕೊಳ್ಳುವ ಹೊತ್ತಿಗೆ, ಮಡದಿಯಿಂದ ಮಾರುದ್ದದ ಪ್ರಶ್ನೆಗಳೂಂದಿಗೆ ದೂರು,ಮಗನೊಂದಿಗಿನ ಹರಿದು ಹಂಚಿದಂತಾದ ಮಾತುಗಳ ಚೂರು, ಮಗಳು ತನ್ನ ಕಿರುಚಾಟವನ್ನು ಕೆಳಿಸಿಕೊಳ್ಳವವರಾರು ಎನ್ನುವ ತಕರಾರುಗಳೊಂದಿಗೆ ಈ ವಾರ ಇನ್ನೇನು ಮುಗಿಯಿತು ಎನ್ನವಷ್ಟರಲ್ಲಿ ನೆನಪಿಗೆ ಬಂದದ್ದು ಈ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಅದರ ತಯಾರಿಯ ಸಂಭ್ರಮ ಸಡಗರ.
 ಕಳೆದ ವಾರ ಕನ್ನಡಿಗರು ಯುಕೆ ತಂಡದ ಆಯೋಜನಾ ಸಮಿತಿಯ ಸದಸ್ಯರೆಲ್ಲಾ ಕಾರ್ಯಕ್ರಮ ದ ಸಭಾಂಗಣಕ್ಕೆ ಭೆಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಮುಂದಿನ ತಯಾರಿಗಳ ಬಗ್ಗೆ, ವಿವಿಧ ತಂಡಗಳನ್ನು ರಚಿಸುವುದರ ಬಗ್ಗೆ ಚರ್ಚೆಯನ್ನು ನಡಿಸಲಾಯಿತು. ಈ ಬಾರಿಯ ಕಾರ್ಯಕ್ರಮದ ವಿಶೇಷತೆಗೆ ಅನುಗುಣವಾಗಿ, ಬರುವ ಜನಸಂದಣಿಯನ್ನು ಗಮನದಲ್ಲಿರಿಸಿಕೊಂಡು ಅತ್ಯೆಂತ ವಿಶಾಲ ಹಾಗೂ ವಾಹನಗಳ ನಿಲುಗಡೆಗೆ ಸಮರ್ಪಕ ವ್ಯವಸ್ಥೆಯುಳ್ಳ “ಹ್ಯಾರೋ” ನ “ಬೈರೊನ್ ಹಾಲ”ನ್ನು ಆಯ್ದುಕೊಳ್ಳಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಕಾರ್ಯಕ್ರಮದ ದಿನದ ವ್ಯವಸ್ಥೆಯನ್ನು ನೊಡಿಕೊಳ್ಳಲು ಬೆಕಾಗುವ ವಿವಿಧ ತಂಡಗಳನ್ನು ರಚಿಸುವ ಮತ್ತು ಅವುಗಳ ಜವಾಬ್ದಾರಿಯ ರೊಪರೇಷುವನ ಸಿದ್ಧಪಡಿಸುವ ಕಾರ್ಯ ಈಗಾಗಲೆ ಭರದಿಂದ ಸಾಗಿದೆ.
ಅದರೊಂದಿಗೆ ಈ ಬಾರಿಯ ಕಾರ್ಯಕ್ರಮದ ವಿಶೇಷತೆಯಂದರೆ “ಕನ್ನಡಿಗರು ಯುಕೆ” ತಂಡ ಯಶಸ್ವಿಯಾಗಿ ತನ್ನ ಹದಿನೈದನೆ ವರ್ಷದ ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಯೋಜಿಸುತ್ತಿರುವುದು, ಹಾಗಾಗಿ ಕಾರ್ಯಕ್ರದ ಅಂಗವಾಗಿ ಈ ಬಾರಿ ವಿಭಿನ್ನ ರೀತಿಯಲ್ಲಿ ತಮ್ಮೆಲ್ಲರನ್ನು ಮನರಂಜಿಸಲು, ಹಲವಾರು ವಿವಿಧ ಬಗೆಯ ವಿನೂತನ ಪ್ರಯೋಗಗಳೊಂದಿಗೆ ಕನ್ನಡಿಗರು ಯುಕೆ ತಂಡ, ಕರ್ನಾಟಕದ ದಾವಣೆಗೆರೆಯ “ಚಿರಂತನ” ತಂಡದವರ ಸಹಯೋಗದೊಂದಿಗೆ “ಲಾಲಿತ್ಯ” ಎನ್ನುವ ಪರಿಕಲ್ಪನೆಯಡಿ, ಕನ್ನಡ ನಾಡಿನ ಕವಿ, ಕಾವ್ಯ ಪರಂಪರೆಯನ್ನು ಯುಕೆ ನೀವಾಸಿಗಳಾದ ಕನ್ನಡಿಗರಿಗೆ ಪರಿಚಯಿಸುವ ಹಾಗೂ ಪಸರಿಸುವ ಕಾರ್ಯಕ್ಕೆ ಮುಂದಾಗಿದೆ.
ಎಂದಿನಂತೆ ಈ ಬಾರಿಯು ಸ್ಥಳಿಯ ಕಲಾವಿದರನ್ನು ಪ್ರೋತ್ಸಾಹಿಸುತ್ತ, ಹಲವಾರು ಹಳ್ಳಿಯ ಆಟಗಳನ್ನು ಆಯೋಜಿಸುತ್ತಾ ವಿಶಿಷ್ಠ ರೀತಿಯಲ್ಲಿ ಮಕ್ಕಳಿಂದ ಹಿಡಿದು ಅಬಾಲವೃದ್ಧರಾದಿಯಾಗಿ ಎಲ್ಲರನ್ನು ಮನರಂಜಿಸಲು ಸರ್ವಸಿದ್ದತೆಯನ್ನು ಮಾಡಿಕೊಂಡಿರುವ ತಂಡವು ತುದಿಗಾಲಿನಮೇಲೆ ನವಂಬರ್ ೯ ನೇ ತಾರಿಕಿನ ಬರುವಿಕೆಗಾಗಿ ಕಾದು ನಿಂತಿದೆ. ಜೊತೆಗೆ ಅಂಜಲಿ ಶಾನಭೊಗ ರವರ ಮಧುರವಾದ ಸ್ಯಾಕ್ಸೊಫೊನ್ ವಾದನವನ್ನು ಸಂಗೀತ ಪ್ರೀಯರಿಗಾಗಿ ಆಯೋಜಿಸಲಾಗಿದೆ. ಸಾಗರೊಪಾದಿಯಲ್ಲಿ ಬರುವ ಕನ್ನಡದ ಕಟ್ಟಾಳುಗಳಾದ ತಮ್ಮೆಲ್ಲರ ಉತ್ಸಾಹವನ್ನು ಎತ್ತಿಹಿಡಿಯಲು ಆಹ್ಲಾದಕರವಾದ ಪಾನೀಯ ಮತ್ತು ಶುಚಿ ರುಚಿಯಾದ ಉಟ ಉಪಚಾರವನ್ನು “ಶಿವಳ್ಳಿ ಕ್ಯಾಟರರ್ಸ” ಅವರಿಂದ ಎರ್ಪಡಿಸಲಾಗಿದೆ. ಇನ್ನೆನಾದರು ಉಳಿದಿದ್ದರೆ ಅದು ಬಕಪಕ್ಷಿಯಂತೆ ನವಂಬರ್ ೯ ನೇ ತಾರಿಕಿನ ಬರುವಿಕೆಗಾಗಿ ಕಾದುಕುಳಿತಿರುವುದು ಮಾತ್ರ.
ಇಷ್ಟೆಲ್ಲಾ ತುಮುಲುಗಳ ನಡುವೆ ಎಷ್ಟೊ ದಿನಗಳಾದಮೆಲೆ ಹಳೆಯ ಒಂದು ಸುಂದರವಾದ ಭಾವ ಮಿಶ್ರಿತ ಜಾನಪದ ಶೈಲಿಯ, ಕನ್ನಡಿಗರಿಗೆಲ್ಲಾ ತುಂಬ ಚಿರಪರಿಚಿತವಾದಂತ ಮತ್ತು ಪ್ರಖ್ಯಾತಿಯನ್ನು ಗಳಿಸಿದ “ಮೂಡಲ ಮನೆ” ದಾರವಾಹಿಯ ಸುಂದರವಾದ  ಶಿರ್ಷಿಕೆ ಗೀತೆ

“ರೆಂಬೆ ಕೊಂಬಿಮ್ಯಾಲ ಗೂಡು ಕಟ್ಟಿದಾವ ರೆಕ್ಕೆ ಬಲಿತ ಹಕ್ಕಿ, ಗೂಡಿನ್ಯಾಗ ಮಲಗ್ಯಾವ ಮರಿಹಕ್ಕಿ…ದೂರ ದೇಶದಾ ವಲಸಿಗ ಹಕ್ಕಿಗೂ ಐತಿ ಜಾಗ, ಓಳಗ ಬನ್ನಿರಿ… ನೀವು ನಮ್ಮ ಬಳಗ…”ಎನ್ನವ ಡಾ.ಚಂದ್ರಶೇಖರ ಕಂಬಾರರ ಈ ಸಾಲುಗಳು ಸಂಗೀತಾ ಕಟ್ಟಿಯವರ ಸುಮಧುರ ಕಂಠದಲ್ಲಿ ಕೆಳುವ ಸೌಭಾಗ್ಯ ಒದಗಿಬಂದು,ನನಗೆ ಅನಿಸಿದ್ದು ಈ ಗೀತೆ ಇವತ್ತಿನ ಸಂದರ್ಭಕ್ಕೆ ಮತ್ತು ನಮ್ಮ ಈ ೧೫ನೇ ವರ್ಷದ ಕನ್ನಡ ರಾಜ್ಯೋತ್ಸವದ ಈ ಆಮಂತ್ರಣ ಸಂದೇಶಕ್ಕೆ ತುಂಬಾ ಪ್ರಸ್ತೂತ. ಹಾಗಾಗಿ ನಾವು ನೀವೆಲ್ಲರು ಸೆರಿ ಒಂದು ಸುಂದರವಾದ ಜೇನಿನ ಗೂಡಿನಂತೆ ಕನ್ನಡದ ಗೂಡನ್ನ ಕಟ್ಟುವುದರ ಮೂಲಕ ಈ ಬಾರಿಯ ಕನ್ನಡನಾಡಿನ ಹಬ್ಬವನ್ನು ಎಲ್ಲರೊಂದಿಗೆ ಸೆರಿ ಆಚರಿಸಲು, ಮತ್ತೊಮ್ಮೆ ಮೊಗದೊಮ್ಮೆ ಯುಕೆ ನೀವಾಸಿಗಳಾದ ಎಲ್ಲಾ ಕನ್ನಡಿಗರಿಗೂ ಮತ್ತವರ ಸ್ನೇಹಿತರೆಲ್ಲರಿಗೂ, ಅವರ ಕುಟುಂಬ ಪರಿವಾರದವರೊಂದಿಗೆ ಹೆಚ್ಚಿನ ಸಂಖೆಯಲ್ಲಿ ಆಗಮಿಸಲು ಹೃದಯ ಪೂರ್ವಕ ಆಮಂತ್ರಣವನ್ನು ಕೋರುತ್ತಾ “ಕನ್ನಡಿಗರು ಯುಕೆ” ತಂಡದ ಪರವಾಗಿ…

-ಗೋವರ್ಧನ ಗಿರಿ ಜೋಷಿ

Leave a Reply

Your email address will not be published. Required fields are marked *