KUK Local Chapters

ಕನ್ನಡದ ಸಂಸ್ಕೃತಿ ಸಿರಿ- ಜಾತ್ರೆ ಯುಕೆಯಲ್ಲಿ ಕನ್ನಡದ ರಥಯಾತ್ರೆ

ಎಲ್ಲರಿಗೂ ನಮಸ್ಕಾರ

 ನಿಮಗೆಲ್ಲರಿಗೂ ತಿಳಿದಂತೆ ಕಳೆದಬಾರಿ ಕನ್ನಡನಾಡಿನ ಹೊಸವರ್ಷದ ಆಗಮನದ
ಸಾಂಪ್ರದಾಯಿಕತೆಯ ಸಂಕೆತವಾದ “ಯುಗಾದಿ” ಹಬ್ಬವನ್ನು ಯುಕೆಯಲ್ಲಿ ನೆಲಸಿರುವ ತಮ್ಮೆಲ್ಲರೊಂದಿಗೆ ವಿಜ್ರಂಭಣೆಯಿಂದ ಆಚರಿಸುವ ಕನಸನ್ನೂ ಹೂತ್ತುಕೂಂಡು ಕನ್ನಡಿಗರು ಯುುಕೆ‌ ತಂಡ ತಮ್ಮ ಮುಂದೆ ಬಂದು ನಿಂತಾಗ
ತೋರಿದ ಪ್ರೀತಿ,ಆದರ ಮತ್ತು ಸಹಕಾರ ಆ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣವಾಯಿತು ಅದಕ್ಕಕೆ ನನ್ನ ಮತ್ತು “ಕನ್ನಡಿಗರು ಯುಕೆ”ತಂಡದ ಪರವಾಗಿ ಹೃದಯಾಂತರಾಳದಿಂದ ಧನ್ಯವಾದಗಳು.
ಅದೆ ರೀತಿಯಾಗಿ, ಸ್ನೇಹಿತರೆ ಮತ್ತೊಮ್ಮೆ “ಕನ್ನಡಿಗರು ಯುಕೆ” ತಂಡ ಹೊಸದೊಂದು ಕಾರ್ಯಕ್ರಮದ ರೂಪರೇಷುವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಮುಂದೆ ಬಂದು ನಿಂತಿದೆ. ಆದರೆ ಈ ಬಾರಿ ಬರೆ ಹಬ್ಬವನ್ನು ಆಚರಿಸುವುದಕ್ಕಲ್ಲಾ ಬದಲಾಗಿ “ಕನ್ನಡದ ಸಂಸ್ಕೃತಿ ಸಿರಿ”ಯ ತೇರನ್ನು ತಮ್ಮೆಲ್ಲರೊಂದಿಗೆ ಸೆರಿಕೊಂಡು ಒಟ್ಟಾಗಿ ಎಳೆಯುವುದರ ಮೂಲಕ ಕನ್ನಡದ ಜಾತ್ರಾ ಮಹೋತ್ಸವವನ್ನು ಸಾಹಿತ್ಯ, ಸಂಗೀತ ಹಾಗೂ ನಾಟಕವನ್ನು ಪ್ರಸ್ತೂತ ಪಡಿಸುವುದರ ಮೂಲಕ ಯುನೈಟೆಡ್ ಕಿಂಗಡಮ್ನಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆಯ ಬೆಳವಣೆಗೆಗೆ ತಮ್ಮ ಕಿರಿದಾದ ಸೇವೆಯನ್ನು ಸಲ್ಲಿಸಲು.

 

ಈ ಕನ್ನಡದ ಜಾತ್ರೆಯ ಕೆಂದ್ರಬಿಂದು “ಡಾ.ಚಂದ್ರಶೇಖರ ಕಂಬಾರ” ಅವರು ರಚಿಸಿರುವ, “ಕೆ.ವಿ ನಾಗರಾಜುಮೂರ್ತಿಯವರ” ನಿರ್ದೇಶನದಲ್ಲಿ “ಪ್ರಯೋಗರಂಗ” ತಂಡ ಶರಣರ ಕಾಲಘಟ್ಟದ ವಿವಿಧ ವೈಚಾರಿಕತೆಯ ಆಯಾಮಗಳನ್ನು ತಿಳಿಸಿಕೊಡುವ ನಾಟಕ “ಶಿವರಾತ್ರಿ” ಯನ್ನು ಪ್ರಸ್ತೂತ ಪಡಿಸಲಿದೆ. ಅದರೂಂದಿಗೆ “ಕನ್ನಡ ಕೋಗಿಲೆ” ಕಾರ್ಯಕ್ರಮದ ಖ್ಯಾತಿಯ “ಸವಿತಾ ಗಣೇಶ”ರವರು ತಮ್ಮ ಮಧುರ ಕಂಠದಿಂದ ರಂಜಿಸಲಿದ್ದಾರೆ, ಜೊತೆಗೆ ಸ್ಥಳಿಯ ಕಲಾವಿದರಾದ “ರಂಜನಿ ವೈನತೇಯ” ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮವು ಆಯೂಜೀಸಲಾಗಿದೆ. ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯ ಬಿಂದು, ಕನ್ನಡಿಗರು ಯುಕೆಯ ಅಂಗಳದಲ್ಲರಳಿದ “ಕನ್ನಡ ಕಲಿ” ಯ ಸಾಂಕೆತಿಕವಾದ ಮತ್ತು ತಮ್ಮ ಮುಂಬರುವ ಚಿತ್ರದಲ್ಲಿನ ಒಂದು ಹಾಡನ್ನು, ನಮ್ಮೆಲ್ಲರ ಅಚ್ಚು ಮೆಚ್ಚಿನ ಮೇಷ್ಟ್ರಾದಂತ “ಡಾ.ನಾಗತಿಹಳ್ಳಿ ಚಂದ್ರಶೇಖರ” ಸರ್ ಅವರು ಬಿಡುಗಡೆಗೊಳಿಸಲಿದ್ದಾರೆ. ಕೊನೆಯಲ್ಲಿ ಈ ಕನ್ನಡದ ಜಾತ್ರೆಗೆ ಇನ್ನೂ ಹೆಚ್ಚಿನ ಮೆರಗನ್ನು ತಂದುಕೊಡುವುದರ ಸಲುವಾಗಿ “ಪ್ರವೀಣ ಸ್ವರೂಪ್” ಮತ್ತು “ಶೀವರಾಜ ನಟರಾಜ್” ನೆತೃತ್ವದಲ್ಲಿ ಅವರ ತಂಡವು ಹೂಸ ಬಗೆಯ ಕಾರ್ನಾಟಿಕ್ ಸಂಗೀತದ ಮಿಶ್ರಣ (ಫ್ಯೊಜನ್) ಪ್ರಸ್ತೊತ ಪಡಿಸಿ ಮನರಂಜಿಸಲಿದ್ದಾರೆ. ಇದೆಲ್ಲದರೊಂದಿಗೆ ರುಚಿಕರವಾದ ಊಟ ಉಪಚಾರವಂತು ಎಂದಿನಂತೆ ಈ ಬಾರಿಯು ಇದ್ದೆ ಇದೆ. ಇನ್ನೇನಿದ್ದರು ಕನ್ನಡಿಗರು ಯುಕೆ ತಂಡ ಆ ಶುಭದಿನದ ಬರುವಿಕೆಗಾಗಿ ಮತ್ತು ತಮ್ಮೆಲ್ಲರನ್ನು ಮತ್ತೊಮ್ಮೆ ಭೇಟಿಯಾಗುವುದಕ್ಕಾಗಿ ತುದಿಗಾಲಿನ ಮೇಲೆ ನಿಂತು ಕಾಯುತ್ತಿದೆ. ತಾವೆಲ್ಲರೂ ಬಂದೆ ಬರುತ್ತಿರಿ ಎನ್ನವ ಭರವಸೆ ಮತ್ತು ಧನ್ಯವಾದಗಳೊಂದಿಗೆ…
-ಗೋವರ್ಧನ್ ಗಿರಿ ಜೋಷಿ

Leave a Reply

Your email address will not be published. Required fields are marked *