KUK News & Events

ಕರ್ನಾಟಕ ಸಂಸ್ಕ್ರತಿ ಸಿರಿ | ನಾಟಕ.ಸಂಗೀತ.ಸಮ್ಮಿಲನ

ಸ್ನೇಹಿತರೇ,
ನಮಸ್ಕಾರ.
ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿವಾಣಿಯನ್ನು ಅನುಸರಿಸಿ ಕನ್ನಡಿಗರುಯುಕೆ ಸಂಸ್ಥೆಯು ನಿರಂತರವಾಗಿ ಯುನೈಟೆಡ್ ಕಿಂಗ್ಡಮ್ ನ ಕನ್ನಡಿಗರಿಗೆ “ಕನ್ನಡ ಕಲಿ” ಎಂಬ ಕನ್ನಡ ತರಬೇತಿ ಕಾರ್ಯಕ್ರಮವನ್ನು ಹಲವಾರು ಕೇಂದ್ರಗಳಲ್ಲಿ ನಡೆಸುತ್ತಿರುವದು ತಮಗೆಲ್ಲ ಗೊತ್ತೇ ಇದೆ.
ಬನ್ನಿ, ಲಂಡನ್ ನಲ್ಲಿ ಜೂಲೈ ೧೩, ಶನಿವಾರ ನಡೆಯಲಿರುವ ವಿಶೇಷ ಕರ್ನಾಟಕ ಸಂಸ್ಕ್ರತಿ ಸಿರಿ ಕಾರ್ಯಕ್ರಮವನ್ನು ಕನ್ನಡ ಪ್ರಾಧಿಕಾರದ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಆಚರಿಸೋಣ.
ನಮ್ಮ ಕರ್ನಾಟಕದ ಖ್ಯಾತ ನಾಟಕ ಕಲಾವಿದರು ಈ ಸಮಾರಂಭದಲ್ಲಿ “ಶರಣರು ಮತ್ತು ದಾಸರ” ವೈಭವದ ಬಗ್ಗೆ ಕನ್ನಡದ ಪ್ರಖ್ಯಾತ ಕಿರುತೆರೆ ಹಾಗೂ ಸಿನಿಮಾ ರಂಗದ ಶ್ರೀ ನಾಗರಾಜ ಮೂರ್ತಿ ಅವರ ನಿರ್ದೇಶನದಲ್ಲಿ ಅದ್ಭುತವಾದ ಕಲಾ ರಂಗದ ಪ್ರತಿಭೆಯನ್ನು ಪ್ರಸ್ತುತಪಡಿಸಲಿದ್ದಾರೆ. ಕನ್ನಡದ ಉಷಾ ಉತ್ತಪ್ಪ ಎಂದೇ ಖ್ಯಾತಿಗೊಂಡಿರುವ ಜಾನಪದ ಹಾಡುಗಾರ್ತಿ ಸವಿತಾ ನಮ್ಮೆಲ್ಲರನ್ನು ಮನೋರಂಜಿಸಲಿದ್ದಾರೆ. ಕನ್ನಡ ಕಲಿ ಸಾಧನೆಯ ಬಗ್ಗೆ ಇಲ್ಲಿ ನಡೆದಿರುವ ಸಾಧನೆ ಮತ್ತು ಸಾಧ್ಯತೆಯ ಕುರಿತು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊಫೆಸರ್ ಜಿ. ಸಿದ್ದರಾಮಯ್ಯ ಹಾಗೂ ಡಾ. ಕೆ. ಮುರಳೀಧರ್ ಅವರಿಂದ ಸಭಿಕರೊಂದಿಗೆ ಸಂವಾದವಿದೆ. ಇದಲ್ಲದೇ, ಕಾರ್ಯಕ್ರಮದ ಕೊನೆಯಲ್ಲಿ, ಬೆಂಗಳೂರಿನ ಪ್ರಖ್ಯಾತ ಫ್ಯೂಶನ್ ಮ್ಯೂಸಿಕ್ ತಂಡವಾದ ಪ್ರಾಜೆಕ್ಟ್ ಮಿಶ್ರಾಮ್ ಕರ್ನಾಟಕ ಶಾಸ್ತ್ರೀಯ ಸಂಗೀತ ಆಧರಿಸಿದ ಫ್ಯೂಶನ್ ವಾದ್ಯ ಗೋಷ್ಠಿಯಿಂದ ಮನ ಸೆಳೆಯಲಿದ್ದಾರೆ.
Venue: Tudor Park Sports & Leisure, Browell’s Lane, Feltham, London, TW13 7EF
Time: 11AM Onwards
ಇಪ್ಪತ್ತಕ್ಕೂ ಹೆಚ್ಚು ಕರ್ನಾಟಕದ ಪ್ರತಿಭೆಗಳು ಹಾಗೂ ಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಊಟ, ಚಹಾ, ತಿಂಡಿಯ ವ್ಯವಸ್ಥೆಯಿದೆ.
ತಮ್ಮ ಗೆಳೆಯರು ಹಾಗೂ ಕುಟುಂಬದೊಂದಿಗೆ ಬನ್ನಿ, ಎಲ್ಲರೂ ಜೊತೆಗೂಡಿ ಈ ನಾಟಕ.ಸಂಗೀತ.ಸಮ್ಮಿಲನದ ರಸದೌತಣವನ್ನು ಸವಿಯೋಣ.
ನಿಮ್ಮ ಆಗಮನ ಬಯಸುವ
ಕನ್ನಡಿಗರುಯುಕೆ ಕಾರ್ಯಕಾರಿ ಹಾಗೂ ಆಯೋಜನಾ ಸಮಿತಿ

Terms & Conditions

  • Kids below age 6 are FREE
  • By buying the ticket, you are agreeing to share your data with KUK and to be used for future event promotions. Refer to KUK Data Privacy Policy for more details.
  • By buying the ticket, you are agreeing to provide your consent to be covered in the photography and videography of the event
  • Once the ticket is bought, there is no cancellation or refund is allowed 

Leave a Reply

Your email address will not be published. Required fields are marked *