KUK Local Chapters

ಯುಕೆಯಲ್ಲಿ ಕನ್ನಡದ ಜ್ವಾಕೇ

“ಎಲ್ಲೊ ಹುಡಕಿದೆ ಇಲ್ಲದ ದೇವರ ಕಲ್ಲು ಮಣ್ಣಿನ ಗುಡಿಯೊಳಗೆ, ಇಲ್ಲೆ ಇರುವ ಪ್ರೀತಿ ಸ್ನೇಹಗಳ ಗುರತಿಸದಾಗಿದ್ದೆನು ನನ್ನೊಳಗೆ” (ಸ್ವಲ್ಪ ಬದಲಾಯಿಸಿದ್ದಕ್ಕಾಗಿ ಕ್ಷಮೆಯನ್ನು ಕೊರುತ್ತ). ಲಂಡನ್ನಿಗೆ ಬಂದಂದಿನದಿಂದ ಹಲವಾರುಬಾರಿ ತಲೆಯನ್ನು ಕೆಡಸಿಕೊಂಡು, ಸಾಕಷ್ಟು ಯೋಚಿಸಿ ನನ್ನನ್ನು ನಾನು ಒಬ್ಬ ಕನ್ನಡಿಗನಾಗಿ ಪ್ರಶ್ನಿಸಿಕೊಂಡಾಗ ಕಾಡುವ ಕೆಲವು ಪ್ರಶ್ನೆಗಳು, ಕನ್ನಡಿಗರು ಕಡಿಮೆ ಸ್ವಾಭಿಮಾನಿಗಳಾ…? ಕನ್ನಡದ ಬಗ್ಗೆ, ಕನ್ನಡತನದ ಬಗ್ಗೆ ಕನ್ನಡವನ್ನು ಮಾತನಾಡುವುದರ ಬಗ್ಗೆ ಆಸಕ್ತಿ ಇಲ್ಲವಾ…? ಅಭಿಮಾನ ಶೂನ್ಯರಾ…? ಹೀಗೆ ಹಲವು ಪ್ರಶ್ನೆಗಳಿಗೆ ಸಮಾಧಾನಕರವಾದಂತ ಉತ್ತರ ದೊರಕಿದ್ದು ಇಂದಿನ ಕನ್ನಡಿಗರು ಯುಕೆ ತಂಡದವತಿಯಿಂದ ಆಯೋಜಿಸಲಾದ ಯುಗಾದಿ ಹಬ್ಬದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ. ಕನ್ನಡಿಗರು ಕೊಂಚ ನಾಚಿಕೆಯ ಸ್ವಭಾವದವರು ಹಾಗೂ ಅತ್ಯಂತ ಸ್ವಾಭಿಮಾನಿಗಳು ಆಗಿರುವುದಕ್ಕೆಯೊ ಎನೊ ಕೆಲವೂಮ್ಮೆ ಇನ್ನೊಬ್ಬ ಕನ್ನಡಿಗರೊಂದಿಗೆ ಬೆರೆಯಲು ಹೆಣಗಬೆಕಾಗುತ್ತಿರುವುದು. ಹಾಗಾಗಿ ಯಾರು ಸ್ವಭಾವತಃ ಸ್ವಲ್ಪ ಸಂಕೋಚ ಹೊಂದಿದ್ದಾರೊ ಅಂತಹ ಪ್ರತಿಯೊಬ್ಬ ಕನ್ನಡಿಗನ ಮನದಾಳದಲ್ಲಿ ಒಂದಲ್ಲ ಒಂದುಬಾರಿ ಬಂದು ಹೊಗಿರಬಹುದಾದಂತ ಪ್ರಶ್ನೆಗಳು ಇವಾಗಿರಬಹುದು ಎನ್ನುವುದು ನನ್ನ ಭಾವನೆ. ಆದರೆ ನನ್ನ ಮಟ್ಟಿಗೆ ಎಲ್ಲಾ ಪ್ರಶ್ನೆಗಳಿಗೆ ಅದ್ಭುತವಾದಂತ ಉತ್ತರದ ರೂಪದಲ್ಲಿ ಮೂಡಿಬಂದಿದ್ದು ಕನ್ನಡಿಗರುಯುಕೆಯ ೨೦೧೯ ಯುಗಾದಿ ಹಬ್ಬದ ಸಂಭ್ರಮಾಚರಣೆ.

“ಕನ್ನಡವೆನೆ ಕುಣಿದಾಡುವುದೆನ್ನೆದೆ…ಕನ್ನಡವೆನೆ ಕಿವಿ ನಿಮಿರುವುದು” ಎನ್ನುವ ಕವಿತೆಯ ಸಾಲಿನ ಅಕ್ಷರಕ್ಷರವು ಕ್ಷಣಕ್ಷಣಕ್ಕೂ ದಿನವಿಡಿ ಇಂದು ನನ್ನದಾದಯಿತು ಎಂದರೆ ಉತ್ಪ್ರೇಕ್ಷೆಯೆನಲ್ಲ. ಕನ್ನಡ ನಾಡಿನಿಂದ ಹಾಗೂ ಮನೆಯಿಂದ ಹೊರಗೆ ಮೊದಲ ಬಾರಿಗೆ ಯುಗಾದಿಯ ಹಬ್ಬವನ್ನು, ಹೊಸ ಮುಖಗಳೊಂದಿಗೆ ಆಚರಿಸಲು ಶುರುವಾಗಿ ದಿನ ಕಳೆಯುವದರಲ್ಲಿ ಪರಮಾಪ್ತರೇನೋ ಅನ್ನುವಂತಹ ಜನರನ್ನ ಭೇಟಿಯಾದಂತಹದು ಇಂದಿನ ವೀಶೇಷ, ಅದಕ್ಕಾಗಿ ನಾನು ಕನ್ನಡಿಗರುಯುಕೆ ತಂಡದ ಎಲ್ಲಾ ಪದಾಧಿಕಾರಿಗಳಿಗೂ ಚಿರಋಣಿ.

Lighting the Lamp by Mr A. R. Ghanashyam

ಘಮಘಮಿಸುವ ಹೋಳಿಗೆ ಅದರೊಂದಿಗೆ ಬಿಸಿ ಬಿಸಿ ತುಪ್ಪ ,ಚಟ್ನಿ ಕೊಸಂಬರಿ, ಪೂರಿ ಸಾಗು, ಮೈಸೂರಪಾಕ್, ಅನ್ನ ಹುಳಿ ಸಾರು ಬಡಿಸಿದ ಉಟದೊಂದಿಗೆ ಸಂತಸ ತುಂಬಿದ ಮುಖಗಳ ಉಪಸ್ಥಿತಿಯಲ್ಲಿ ವಿಘ್ನ ವಿನಾಶಕನನ್ನು ಪ್ರಾರ್ಥಿಸಿ ಹಬ್ಬದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ವಿಧ್ಯಾರಾಣಿಯವರು ನಿರೂಪಿಸಿ, ಅತಿಥಿಗಳು ದೀಪ ಬೆಳಗುವುದರ ಮೂಲಕ ಆರಂಭಿಸಲಾಯಿತು. ಕನ್ನಡಿಗರುಯುಕೆ ಪರವಾಗಿ ವಿನಯ ರಾವ್ ಅವರು ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದಂತ “ರುಚಿ ಘನಶಾಮ” ಹೈ ಕಮಿಷನರ್ ಆಫ ಇಂಡಿಯಾ ಹಾಗೂ ” ಎ ಆರ್ ಘನಶಾಮ್” , ಎ ಎಸ್ ರಾಜನ,ಡಾ.ನೀರಜ್ ಪಾಟೀಲ್ ಮತ್ತು ಕಾರ್ಯಕ್ರಮದ ಪ್ರಾಯೋಜಕರಾದಿಯಾಗಿ ನೆರದಿದ್ದ ಎಲ್ಲರಿಗೂ ಸ್ವಾಗತವನ್ನು ಕೋರಿದರು. ರುಚಿ ಘನಶಾಮ ಅವ ರು ಭಾರತಿಯ ಹೈ ಕಮಿಷನ್ ಮತ್ತು ಅದರ ಕಾರ್ಯವ್ಯಾಪ್ತಿಯ ಬಗ್ಗೆ ಹಾಗೂ ಎ ಆರ್ ಘನಶಾಮ ಅವರು ತಮ್ಮ ಮನೆಯ ವಾತವರಣದಲ್ಲಿ ಕನ್ನಡ ಹಾಗೂ ಕನ್ನಡಿಗನ ಅನುಭವದ ಬಗ್ಗೆ ಕನ್ನಡದಲ್ಲಿ ಚಿಕ್ಕ ಕಥೆಯ ಮೂಲಕ ಹಂಚಿಕೂಂಡರು. “ಪಿಳ್ಳಂಗೋವಿಯ ಚಲುವ ಕೃಷ್ಣನ ಎಲ್ಲಿ ನೊಡಿದಿರಿ…” ಹಾಡಿಗೆ ಸೊಗಸಾಗಿ ನೃತ್ಯವನ್ನು ಮಾಡುವುದರ ಮೂಲಕ ದೀಪ್ತಿಯವರು ಜನರನ್ನು ರಂಜಿಸಿದರು. ಕನ್ನಡ ಕಲಿ ಮಕ್ಕಳ ತಂಡಗಳಿಂದ ಕಿರು ನಾಟಕದ ಮೂಲಕ ಕನ್ನಡ ನಾಡಿನ ವಿವಿದ ಪ್ರದೇಶಗಳ ಪರಿಚಯ ಮತ್ತು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು ಹಾಗು ಅವುಗಳ ವೀಶೆಷತೆಯ ಬಗ್ಗೆ ಪರಿಚಯ ಮಾಡಿಕೊಡಲಾಯಿತು. ಅಖಿಲಾ ಅಯ್ಯಂಗಾರ ಅವರು ಸುಶ್ರಾವ್ಯವಾಗಿ ಅಮೃತ ವರ್ಷಿಣಿ ಚಿತ್ರದ “ತುಂತುರು ಅಲ್ಲಿ ನೀರ ಹಾಡು…” ಮತ್ತು ಡಾ. ಶ್ವೇತಾ ಅವರು “ದ್ವೀಪವು ನಿನ್ನದೆ…ಗಾಳಿಯು ನಿನ್ನದೆ..” , “ಎಲ್ಲೂ ಜೋಗಪ್ಪ ನಿನ್ನರಮನೆ” ಹಾಡುವುದರ ಮೂಲಕ, ಕುಮಾರಿ ಅವನಿ ಭಾರಧ್ವಜ ಅವರು ಕಿ ಬೊರ್ಡನಲ್ಲಿ, ಸಾತ್ವೀಕ್ ಅವರು ವಯೋಲಿನ್ ನಲ್ಲಿ ಜನಪ್ರಿಯ ಕನ್ನಡದ ಹಾಡುಗಳನ್ನು ನುಡಿಸಿ, ಹಲವು ಕನ್ನಡ ಹಾಡುಗಳಿಗೆ ನೃತ್ಯ ಮಾಡುವುದರ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಕೊನೆಯಲ್ಲಿ ಕಾರ್ಯಕ್ರಮದ ಆಕರ್ಷಣೆಯ ಬಿಂದು, ಜಾನಪದ ಸಂಗೀತ ಲೋಕದ ಅನರ್ಘ್ಯರತ್ನ, ಜನಪ್ರಿಯ ಹಿನ್ನಲೆ ಗಾಯಕಿ, ಕೋಗಿಲೆ ಕಂಠದ “ಅನನ್ಯ ಭಟ್” ಅವರು ತಮ್ಮದೆ ಆದ ಶೈಲಿಯ ಹಾಡುಗಳನ್ನು ಹಾಡುವುದರ ಮೂಲಕ ಮನೋರಂಜಿಸಿ ನೆರೆದಿದ್ದವರನ್ನು ಎದ್ದು ಕುಣಿಯುವಂತೆ ಮಾಡಿದರು.ಒಟ್ಟಾರೆಯಾಗಿ ೨೦೧೯ ರ ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಕನಸನ್ನ ಹೊತ್ತು ಆಯೋಜಿಸಿದ್ದ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಳ್ಳುವುದರೂಂದಿಗೆ ಕನ್ನಡಿಗರು ಯುಕೆ ತಂಡ ಇನ್ನೂಂದು ಗರಿಯನ್ನು ತನ್ನ ಮುಡಿಗೆ ಸೆರಿಸಿಕೊಂಡಂತಾಯಿತು…

ಮತ್ತೊಮ್ಮೆ ಎಲ್ಲರಿಗೂ ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಕೊರುತ್ತ, ವಿಕಾರಿ ನಾಮ ಸಂವತ್ಸರವು ಎಲ್ಲರ ಜೀವನದ ವಿಕಾರಗಳೆಲ್ಲವುಗಳನ್ನು ಕಳೆದು ಹೊಸ ಜೀವನಕ್ಕೆ ಶ್ರೀಕಾರವನ್ನು ಹಾಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತ… ಕಾರ್ಯಕ್ರಮಕ್ಕೆ ಬಂದು ಸಹಕರಿಸಿ, ಸಹಾಯಮಾಡಿದ ಪ್ರತಿಯೊಬ್ಬರಿಗೂ ಕನ್ನಡಿಗರುಯುಕೆ ತಂಡದವತಿಯಿಂದ ಹಾಗೂ ನನ್ನ ಪರವಾಗಿ ಹೃದಯಪೂರ್ವಕ ಧನ್ಯವಾದಗಳು…

-ಗೋವರ್ಧನ ಗಿರಿ ಜೋಷಿ

Leave a Reply

Your email address will not be published. Required fields are marked *