KUK Local Chapters

ಕಡಲಾಚೆಗೂ ಕನ್ನಡದ ಹಾಗೂ ಕನ್ನಡಿಗರ ಕಲರವ

ಗೋವರ್ಧನ ಗಿರಿ ಜೋಷಿ

ಗೋವರ್ಧನ ಗಿರಿ ಜೋಷಿ – ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಹುಟ್ಟಿದ ಇವರು, ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಅಲ್ಲಿಯ ಸರ್ಕಾರಿ ಕನ್ನಡ ಮಾದ್ಯಮ ಶಾಲೆಯಲ್ಲಿ ಮುಗಿಸಿರುತ್ತಾರೆ. ನಂತರ ಪದವಿಪೂರ್ವ ವಿಧ್ಯಾಭ್ಯಾವನ್ನು ರಾಯಚೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಲಕ್ಷ್ಮೀ ವೆಂಕಟೇಶ್ ದೇಸಾಯಿ ಕಾಲೇಜಿನಲ್ಲಿ ಹಾಗೂ ವಿಜ್ಞಾನ (ಕಂಪ್ಯೂಟರ್ ಸಯನ್ಸ್) ಪದವಿಯನ್ನು ಅಲ್ಲಿನ ಎ.ಎಮ್.ಇ ಪದವಿ ಮಹವಿಧ್ಯಾಲಯದಲ್ಲಿ ಮುಗಿಸಿರುತ್ತಾ. ಪ್ರತಿಷ್ಠಿತ ವಿಪ್ರೊ ಸಂಸ್ಥೆಯಲ್ಲಿ ಪ್ರೂಜಕ್ಟ ಮ್ಯಾನೇಜರ ಆಗಿರುವ ಇವರು ಕಳೆದ ಎರಡು ವರ್ಷಗಳಿಂದ ಹೌಂಸ್ಲೊ (Hounslow)ನಲ್ಲಿ ನೆಲೆಸಿ ತಮ್ಮ ಸ್ವಂತ ಬ್ಲಾಗ್ ( https://devagiri.wordpress.com/) ಮೂಲಕ ಹಲವಾರು ಕವನಗಳನ್ನ ರಚಿಸಿ ತಮ್ಮ ಕನ್ನಡದ ಬಗೆಗಿನ ಆಸಕ್ತಿ ಮತ್ತು ಅಭಿರುಚಿಯನ್ನು ಮುಂದುವರಿಸಿಕೊಂಡು ಬಂದಿರುತ್ತಾರೆ.

 

ನಮಸ್ಕಾರ ಸ್ನೇಹಿತರೆ…!!

ಹಲವಾರು ದಿನಗಳ ನಂತರ ಎಲ್ಲಾ ಜಂಜಾಟಗಳನ್ನು ಬದಿಗಿಟ್ಟು ಬರಿಯಲೆಬೇಕು ಎನ್ನುವ ಒಳ ಬೆಗುದಿಯನ್ನ ತಣ್ಣಗಾಗಿಸಲೆನೋ ಎನ್ನುವಂತೆ, ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಾಗೂ ವಿಶ್ವಪ್ರೀಯ ಪ್ರದಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಗೆಲುವಿನ ಸಮರ್ಥನೆಗಾಗಿ ಲಂಡನ್ ನಗರದಲ್ಲಿ ಎರ್ಪಡಿಸಿದಂತ ಕಾರು ಯಾತ್ರೆಯ ಸಮಾರಂಭದಲ್ಲಿ ಪಾಲ್ಗೂಂಡು ಮುಗಿದ ನಂತರ ಕನ್ನಡನಾಡನ್ನ ಪ್ರತಿನಿಧಿಸಿದ ಹಲವು ಮಿತ್ರರ ಪರಿಚಯ ಮಾಡಿಕೊಳ್ಳುತ್ತ, ಆತ್ಮೀಯ ಮಿತ್ರರಾದ ಶ್ರೀ ಯುತ ಗಣಪತಿ ಭಟ್ ಅವರೊಂದಿಗೆ ಕುಶಲೋಪರಿ ವಿಚಾರಿಸಿ ಮುಂದಿನ ಕಾರ್ಯಕ್ರಮದ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ, ಅವರು ನನ್ನ ಬರವಣಿಗೆಯನ್ನ ಇಷ್ಟಪಟ್ಟದ್ದಾಗಿಯು ಮತ್ತು ಇನ್ನು ಹೆಚ್ಚು ಹೆಚ್ಚು ಬರೆಯುವುದನ್ನು ಎದಿರು ನೋಡುತ್ತಿರುವುದಾಗಿಯು ತಿಳಿದಾಗ ಸಂತೋಷವಾಯಿತು.

ಎಲ್ಲವನ್ನು ಮುಗಿಸಿ ಮನೆಯ ಕಡೆಗೆ ಹೂರಟಾಗ ದಾರಿಯುದ್ದಕ್ಕು ತಲೆಯಲ್ಲಿ ಸುಳಿಯುತ್ತಿದ್ದದ್ದು ಒಂದೆ ಇಂದು ಕೆಲವು ಸಾಲುಗಳಾದರು ಬರೆಯಲೆಬೇಕು ಎನ್ನುವ ಹಟವಾದಿ ದೊರಣೆ. ಸರಿ ಮನೆಯೆನೊ ಬಂದಾಯಿತು ಅಷ್ಟರಲ್ಲಿ ಒಳಗಿದ್ದ ಹಟವಾದಿ ಗೆದ್ದಾಗಿತ್ತು, ಅವನ ಆ ಗೆಲುವಿನ ಪ್ರತಿಫಲವೆ ಈ ಕೆಳಗಿನ ಸಾಲುಗಳು…
“ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ” , ಅಪ್ರತಿಮ ಕನ್ನಡಿಗ, ನಿತ್ಯೋತ್ಸವ ಕವಿ ಶ್ರೀ ಕೆ.ಎಸ್. ನಿಸಾರ್ ಅಹ್ಮದ ರವರ ಈ ಸಾಲನ್ನ ಜೀವಮಾನದಲ್ಲಿ ಒಮ್ಮೆಯಾದರು ಕೆಳಿರದಿದ್ದಲ್ಲಿ ಅವನು ಕನ್ನಡಿಗನಾಗಿರುವುದಕ್ಕೆ ಸಾಧ್ಯವೆ ಇಲ್ಲ ಎನ್ನುವುದು ನನ್ನ ಅನಿಸಿಕೆ. ಹಾಗಾಗಿ ಕನ್ನಡಿಗನಾಗಿ ಕನ್ನಡತನವನ್ನ ರೂಡಿಸಿಕೊಂಡು,ಕನ್ನಡದ ಮನವನ್ನ ಬೆಳಿಸಿಕೊಂಡು, ಕನಡದಲ್ಲಿ ಮನದ ಇಂಗಿತವನ್ನು ಬರೆದುಕೊಳ್ಳುವ ನನ್ನನ್ನು, ಇಂದು ಅಕ್ಷರಶಃ ಮೇಲಿನ ಸಾಲಿನಲ್ಲಿ ಅಡಗಿರುವ ಒಳ ಅರ್ಥವನ್ನ ಹುಡಕುವ ಮತ್ತು ಅನುಭವಕ್ಕೆ ತಂದುಕೊಳ್ಳುವ ಪ್ರಯತ್ನವನ್ನು ಮಾಡುವಂತೆ ಮಾಡಿದ್ದು “ಕನ್ನಡಿಗರುಯುಕೆ” ಎನ್ನುವ ತಂಡ ಮತ್ತು ಅದರ ರುವಾರಿ ಶ್ರೀಯುತ ಗಣಪತಿ ಭಟ್ ರವರು.

ಶ್ರೀ ನಿಸಾರ ಅಹ್ಮದರವರು ಬರಿದಿರುವ ಹಾಗೆ, ಕನ್ನಡವೆಂದರೆ ಬರಿ ನುಡಿಯಲ್ಲ ಅದು…”ಕಷ್ಟಪಟ್ಟು ದುಡಿಯುವ, ಕಣ್ಬಿಟ್ಟಲ್ಲು, ಕಾಲಿಟ್ಟಲ್ಲು, ಕಷ್ಟಗಳನ್ನು ಕಳೆಯಲು ಕೈ ಜೋಡಿಸುವ, ಕಲೆ ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಸೊಬಗನ್ನು ಬಿತ್ತಿ ಬೆಳೆಯುವ ಕಲಿಗಳ ಮತ್ತು ಕಟ್ಟಾಳುಗಳ ವರ್ಗ” ಎನ್ನುವುದೆನೋ ಅನ್ನುವಂತೆ ಕನ್ನಡ ನಾಡಿನಿಂದ ಸಾವಿರಾರು ಮೈಲುಗಳಾಚೆ ಕಾಲಿಟ್ಟು, ಕಣ್ಬಿಟ್ಟು ಕಳೆದ ೧೫ ವರ್ಷಗಳಿಂದ ಕನ್ನಡದ ಕಂಪನ್ನು ಲಂಡನ್ ನಗರದ (ಅ)ನೀವಾಸಿಗಳೆಲ್ಲರಿಗೂ ಯಶಸ್ವಿಯಾಗಿ ಉಣಬಡಿಸುತ್ತಿರುವುದು ಮೇಲಿನ ಸಾಲಿಗೆ ಸಾಕ್ಷಿ ಎಂದರೆ ತಪ್ಪಾಗಲಾರದೆನೋ.

ಎಂದಿನಂತೆ ಕನ್ನಡಿಗರ ಒಳಹೃದಯದ ಮಿಡಿತ ಅದರಿಂದ ಉಂಟಾಗುವ ಸೆಳೆತ, ಮತ್ತೆ ಮತ್ತೆ ಕನ್ನಡಿಗರೆಲ್ಲರನ್ನು ಒಂದೆಡೆ ಸೆರಿಸಲು, ಸಂಭ್ರಮಿಸಲು ಮುಂದಾಗುವಂತೆ ಮಾಡುವ, ಅದಕ್ಕೆ ಒದಗಿಬರುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುವ ಹಂಬಲವನ್ನು ಹೊಂದಿರುವ “ಕನ್ನಡಿಗರುಯುಕೆ” ತಂಡ ಮತ್ತೊಮ್ಮೆ, ಹಳೆಯ ಕನಸುಗಳನ್ನು ಹೊತ್ತುಕೊಂಡು ಒಂದು ಸುತ್ತಿನ ಪ್ರಯಾಣವನ್ನು ಮುಗಿಸಿಕೊಂಡು, ಹತ್ತು ಹಲವು ಹೊಸ ಕನಸುಗಳನ್ನು ಮತ್ತೆ ಎತ್ತಿಕೊಂಡು ಈ ಹೊಸ ವರ್ಷದ (ಯುಗಾದಿಯ) ಹಬ್ಬವನ್ನು ಸಂತೋಷ ಮತ್ತು ಸಡಗರದಿಂದ ನಿಮ್ಮೊಂದಿಗೆ ಆಚರಿಸುವ ಹೊಸ್ತಿಲಲ್ಲಿ ಬಂದುನಿಂತಿದೆ.

ಇದೆ ಎಪ್ರೀಲ್ ೭ನೇ ತಾರಿಕು ೧೧ ಗಂಟೆಗೆ, ಫೆಲ್ತಾಮ್ ನಗರದ ಬ್ರೋವೆಲ್ಸ್ ಲೇನ್ ನಲ್ಲಿ ಅದ್ದೂರಿಯಾಗಿ ನಾವು ನೀವುಗಳೆಲ್ಲರು ಸೇರಿ ಸಡಗರದಿಂದ ಹಬ್ಬವನ್ನು ಆಚರಿಸುವುದಕ್ಕೆ ಸಾಕ್ಷಿಯಾಗಲು ತಂಡ ಎಲ್ಲಾ ಸಿದ್ದತೆಗಳನ್ನು ಭರದಿಂದ ಮಾಡಿಕ್ಕೂಳ್ಳುತ್ತಿದೆ..ಈ ಕಾರ್ಯಕ್ರಮದ ಅಂಗವಾಗಿ ಈ ಬಾರಿ ಹಲವಾರು ಚಿಗುರೊಡೆಯುತ್ತಿರುವ ಸ್ಥಳಿಯ ಪ್ರತಿಭೆಗಳನ್ನು ಗುರುತಿಸಿ ಅವರುಗಳ ಮೂಲಕ ಹಬ್ಬದ ಸಂಭ್ರಮಾಚರಣೆಗೆ ಇನ್ನಷ್ಟು ಹೆಚ್ಚಿನ ಮೆರೆಗನ್ನು ತರುವ ಪ್ರಯತ್ನದಲ್ಲಿದೆ. ಕನ್ನಡಿಗರ ರುಚಿ ಮತ್ತು ಅಭಿರುಚಿಗೆ ಅನುಗುಣವಾಗಿ ಹಲವಾರು ಕಾರ್ಯಕ್ರಮಗಳೊಂದಿಗೆ ಹೆಸರಾಂತ ಹಿನ್ನಲೆ ಗಾಯಕಿ, ರಂಗಕಲಾವಿದೆ ಶ್ರೀ ಅನನ್ಯ ಭಟ್ ಅವರ ಸಂಗೀತ ರಸ ಸಂಜೆ ಅದರೊಂದಿಗೆ ಹಬ್ಬದ ಬೂರಿಭೋಜನವನ್ನು ಎರ್ಪಡಿಸಲಾಗಿದೆ.
ಕನ್ನಡಾಭಿಮಾನಿಯಾಗಿ, ಕನ್ನಡನಾಡಿನ ಪರವಾಗಿ ತಾವೆಲ್ಲರು ತಪ್ಪದೆ ಬರುವುದರ ಜೋತೆಗೆ ತಮ್ಮೆಲ್ಲ ಕನ್ನಡೇತರ ಮಿತ್ರರನ್ನು ಕರೆತಂದು…ಕವಿ ನಿಸಾರ ಅಹ್ಮದರವರು ಇನ್ನೊಂದು ಸಾಲಿನಲ್ಲಿ ಹೆಳಿರುವಂತೆ…”ಕನ್ನಡ ಬರಿ ಕರ್ನಾಟಕವಲ್ಲ ಅಸೀಮ,ಅದು ಅದಿಗಂತ” ಎನ್ನುವುದನ್ನು ಸಾಬಿತು ಪಡಿಸಲು, ಈ ಕಾರ್ಯಕ್ರಮದ ಮೂಲಕ ಸಾಕ್ಷಿಕರಿಸಲ “ಕನ್ನಡಿಗರುಯುಕೆ” ತಂಡದ ಪರವಾಗಿ ಕೋರುತ್ತ…ಅತಿ ಶೀಗ್ರದಲ್ಲಿ ತಮ್ಮೆಲ್ಲರನ್ನು ಕಾಣುವ ಆಶಯ ಮತ್ತು ಧನ್ಯವಾದಗಳೊಂದಿಗೆ…

-ಗೋವರ್ಧನ ಗಿರಿ ಜೋಷಿ

Leave a Reply

Your email address will not be published.