KUK Local Chapters

ಕನ್ನಡಿಗರುಯುಕೆ – ಯುಕೆ ಕನ್ನಡಿಗರ ಸಂಪರ್ಕ ಸಾಧನ

From Ganapati Bhat, KannadigaruUK

ನಾನೀಗ ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿಯಲ್ಲಿದ್ದು ಸುಮಾರು ಐದು ವರ್ಷಗಳಾದವು. ನಾನು ಕನ್ನಡಿಗರುಯುಕೆ ಸಂಸ್ಥೆಯ ಸಂಪರ್ಕದಲ್ಲಿ ಬಂದಿದ್ದು 2010 ರಲ್ಲಿ. ಆಗಿನ ಕೆ.ಯು.ಕೆ.ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿರೂಪಾಕ್ಷ ಪ್ರಸಾದ್ Croydon ನಲ್ಲಿ ನನ್ನನ್ನು ಮೊದಲು ಭೇಟಿ ಆಗಿದ್ದು. ಮೊದ ಮೊದಲಿನ ನಾಲ್ಕು ವರ್ಷಗಳಲ್ಲಿ ಸಮಿತಿಯ ಸದಸ್ಯರೆಲ್ಲರೂ ಮುಖಾಮುಖಿ ಭೇಟಿಯಾಗುವದು ಸಾಮಾನ್ಯವಾಗಿತ್ತು. ಸಂಘಟನೆಯ ಎಲ್ಲ ಕಮಿಟಿ ಸದಸ್ಯರು ಆಗಾಗ ಒಟ್ಟುಗೂಡುತ್ತಿದ್ದೆವು. ಈಗ ಕಾಲ ಬದಲಾಗಿದೆ. ಕಾರ್ಯಕ್ರಮಗಳ ಬಗ್ಗೆ WhatsApp ಗುಂಪುಗಳ್ಳಲ್ಲಿ ಚರ್ಚೆ ಮಾಡಿ ಅಲ್ಲಿಯೇ ಎಲ್ಲಾ ರೀತಿಯ ಯೋಜನೆ ರೂಪಕಗೊಳ್ಳುವದು ಈಗ ಸಾಮಾನ್ಯವಾಗಿದೆ. ಕಾರಣ ಯಾರಿಗೂ ಮುಖಾಮುಖಿ ಭೇಟಿ ಆಗಲು ಟೈಮ್ ಇಲ್ಲ. ಕನ್ನಡಿಗರುಯುಕೆ ಸಂಸ್ಥೆ ವಿಸ್ತರಾಗಿ ಬೆಳೆದಿದೆ. ಕಾರ್ಯನಿರ್ವಾಹಕ ಸಮಿತಿಯ ಸದಸ್ಯರು ದೂರ ದೂರದ ಪ್ರದೇಶಗಳ್ಲಲಿದ್ದಾರೆ. ಮಿಲ್ಟನ್ ಕೇನ್ಸ್, ಹ್ಯಾರೋ, ಇಲ್ಫೊರ್ಡ್, ಬೇಸಿಂಗ್ ಸ್ಟೋಕ್, Croydon , Ipswhich ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ಎಲ್ಲಾ EC ಮೆಂಬರ್ಸ್ ಇರುವದರಿಂದ, ನಾವೆಲ್ಲ ಹೆಚ್ಚಿನದಾಗಿ ಮುಖಾಮುಖಿ ಭೇಟಿಯಾಗುವದು ಇವೆಂಟ್ ದಿನವೇ! ಇಷ್ಟೆಲ್ಲಾ ಅಡಚಣೆಯಿದ್ದರೂ ಇಂದು ಕನ್ನಡಿಗರುಯುಕೆ ಕನ್ನಡ ಸಮೂದಾಯಕ್ಕೆ ಉತ್ತಮವಾಗಿ ಸ್ಪಂದಿಸುವ, ಕಂಪನಶೀಲ ಸಂಸ್ಥೆಯಾಗಿರುವದಲ್ಲಿ ನನ್ನ ಪ್ರಕಾರ ಅನುಮಾನವೇ ಇಲ್ಲ.
ಸುಮಾರು ೪ ವರ್ಷಗಳಿಂದ ವಾಟ್ಸಪ್ಪ್ ಹಾಗೂ ಫೇಸ್ಬುಕ್ ಗ್ರೂಪ್ಸ್ ಒಂದು mass communication ಮಾಧ್ಯಮ ಆಗಿರುವದು ನಮಗೆಲ್ಲ ಗೊತ್ತಿರುವ ಸಂಗತಿಯೇ. ಇದನ್ನೇ ಮುಖ್ಯ ಕಮ್ಯುನಿಕೇಷನ್ ಮಾಧ್ಯಮವಾಗಿ ಇಟ್ಟುಕೊಂಡು ಕನ್ನಡಿಗರುಯುಕೆ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಯುನೈಟೆಡ್ ಕಿಂಗ್ಡಮ್ ನ ಕನ್ನಡ ಸಮೂದಾಯದ ಮುಂದಿಡುತ್ತಿದೆ. ೨೦೧೦ ರ ಮಾರ್ಚ್ ತಿಂಗಳಲ್ಲಿ ಕನ್ನಡಿಗರುಯುಕೆ ಎಂಬ ಫೇಸ್ಬುಕ್ ಗ್ರೂಪ್ ಶುರು ಮಾಡಲಾಯಿತು. ಇಂದು ಆ ಗುಂಪಿನಲ್ಲಿ ೧೨೦೦ ಕ್ಕೂ ಹೆಚ್ಚು ಯುನೈಟೆಡ್ ಕಿಂಗ್ಡಮ್ ನಲ್ಲಿ ನೆಲೆಸಿರುವ ಮೆಂಬರ್ಸ್ ಇದ್ಧಾರೆ. ಕನ್ನಡಿಗರುಯುಕೆ ನಡೆಸುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಈ ಮಾಧ್ಯಮದ ಮುಖಾಂತರ ಪಸರಿಸಲಾಗುತ್ತದೆ. ಇದಲ್ಲದೆ ಕನ್ನಡಿಗರುಯುಕೆ ಫೇಸ್ಬುಕ್ ಪೇಜ್ ಕೂಡ ಇದೇ ವೇಳೆಯಲ್ಲಿ ಪ್ರಾರಂಭಿಸಲಾಯಿತು. ಸುಮಾರು ೪೦೦೦ ರಷ್ಟು ವಿಶ್ವ ಕನ್ನಡಿಗರು ಈ ಫೇಸ್ಬುಕ್ ಪೇಜ್ ಫಾಲೋ ಮಾಡುತ್ತಿದ್ದಾರೆ.

೨೦೧೭ ರಲ್ಲಿ ಕನ್ನಡಿಗರುಯುಕೆ ತಂಡದಿಂದ ಸುಮಾರು ೨೦ ಕ್ಕೂ ಹೆಚ್ಚು ಬೇರೆ ಬೇರೆ ಪ್ರದೇಶದಲ್ಲಿರುವ ಕನ್ನಡಿಗರ ಸಹಾಯದಿಂದ ಇವೆಂಟ್ಸ್ & ಮೂವೀಸ್ ಎಂಬ ಹೊಸ WhatsApp ಗುಂಪು ರಚಿಸಲಾಯಿತು. ರಚಿಸದ ಕೇವಲ ೨-೩ ದಿನಗಳಲ್ಲಿ, ಗುಂಪು ತುಂಬಿತು. ಮುಖ್ಯವಾಗಿ ಈ ಗುಂಪು ಯುನೈಟೆಡ್ ಕಿಂಗ್ಡಮ್ ಆದ್ಯಂತ ನಡೆಯುವ ಕನ್ನಡ ಇವೆಂಟ್ಸ್ ಹಾಗೂ ಸಿನಿಮಾಗಳನ್ನು ಜನರಿಗೆ ತಲುಪಿಸಲು ಅನುಕೂಲವಾಗುತ್ತಿದೆ. ಇದೇ ರೀತಿ ಕನ್ನಡಿಗರುಯುಕೆ ಬುಲೆಟಿನ್ (ಎರಡು whatsapp ಗುಂಪುಗಳು), ಕನ್ನಡಿಗರುಯುಕೆ ಬಿಸಿನೆಸ್ ಸಪೋರ್ಟ್ ಗುಂಪುಗಳು ಇಂದು ಹಲವಾರು ಕಾರ್ಯಕ್ರಮಗಳು, ಸಂಗತಿಗಳನ್ನು ಹಂಚಿಕೊಳ್ಳಲು ಅನುಕೂಲವಾಗುತ್ತಿದೆ. ಕನ್ನಡಿಗರುಯುಕೆ ಸಂಸ್ಥೆಯೊಂದಲ್ಲದೇ ಯುನೈಟೆಡ್ ಕಿಂಗ್ಡಮ್ ನಲ್ಲಿರುವ ಹಲವಾರು ಕನ್ನಡ ಸಂಘಗಳೂ ಹಾಗೂ ಗುಂಪುಗಳು ಈ ಮಾಧ್ಯಮದ ಉಪಯೋಗ ಪಡೆದುಕೊಳ್ಳುವದನ್ನು ನಾವು ನೋಡುತ್ತಿದ್ದೇವೆ.

ಇತ್ತೀಚಿಗೆ ನಮ್ಮ ಸಮಿತಿಯ ಸದಸ್ಯರೂ, ಇವೆಂಟ್ಸ್ ಟೀಮ್ ಸದಸ್ಯರೂ ಹಾಗೂ ಕನ್ನಡ ಕಲಿ ಶಿಕ್ಷಕ ಶಿಕ್ಷಕಿಯರೂ ಹ್ಯಾರೋ ಆರ್ಟ್ಸ್ ಸೆಂಟರ್ ನಲ್ಲಿ ಒಟ್ಟಾಗಿದ್ದೆವು. ಅದೊಂದು ಮಿನಿ ಇವೆಂಟ್ ತರ ರೂಪುಗೊಂಡಿತ್ತು. ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮಿನಿಸ್ಟರ್ ಕಮ್ಯುನಿಕೇಷನ್ ಶ್ರೀ ರಾಜನ್ ಅವರು ಮುಖ್ಯ ಅಥಿತಿಯಾಗಿದ್ದರು. ಕನ್ನಡಿಗರುಯುಕೆ ಕನ್ನಡ ಕಲಿ ಕಾರ್ಯಕ್ರಮದ ಬಗ್ಗೆ ಹಾಗೂ ಮುಂಬರುವ ಎಲ್ಲಾ ಕಾರ್ಯಕರಮಗಳ ಬಗ್ಗೆ ಅರಿವು ನೀಡಲಾಯಿತು. ಕನ್ನಡಿಗರುಯುಕೆ ಸಂಸ್ಥೆಯು ನಿರಂತರವಾಗಿ ಯುನೈಟೆಡ್ ಕಿಂಗ್ಡಮ್ ನ ಕನ್ನಡಿಗರಿಗೆ “ಕನ್ನಡ ಕಲಿ” ಎಂಬ ಕನ್ನಡ ತರಬೇತಿ ಕಾರ್ಯಕ್ರಮವನ್ನು ಇಂಗ್ಲೆಂಡ್ನಲ್ಲಿ ಹುಟ್ಟಿ ಬೆಳೆಯುತ್ತಿರುವ (ಕನ್ನಡಿಗರ) ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಹಲವಾರು ಕೇಂದ್ರಗಳಲ್ಲಿ ಸ್ವಯಂಸೇವಕ ಶಿಕ್ಷಕರಿಂದ ಕಳೆದ ೧೦ ವರ್ಷಗಳಿಂದ ನಡೆಸಿಕೊಂಡು ಬರುತ್ತಾ ಇದೆ. ಕನ್ನಡ ಕಲಿ ಬಾವುಟವನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿರುವ ನಮ್ಮ ಎಲ್ಲಾ ಶಿಕ್ಷಕ ಶಿಕ್ಷಕಿಯರ ಸಂಪೂರ್ಣ ಸಹಕಾರ ಹಾಗೂ ವಿಶ್ವಾಸದಿಂದ ಇಂದು ಶ್ರದ್ಧಾ ಕಾರ್ತಿಕ್ ನೇತೃತ್ವದಲ್ಲಿ ಉತ್ತಮವಾದ ಯೋಜನೆಯಡಿ ಹಲವಾರು ಯುಕೆ ಪ್ರದೇಶಗಲ್ಲಿ ಕನ್ನಡ ಕಲಿ ಶಿಬಿರಗಳನ್ನು ಶುರು ಮಾಡುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಇಲ್ಲಿರುವ ಎಲ್ಲಾ ಕನ್ನಡಿಗರು ಸ್ಪಂದಿಸುತ್ತಾರೆ ಎಂಬ ಭರವಸೆಯಿದೆ.

ಇದೇ ಬರುವ ಏಪ್ರಿಲ್ ೭ ರಂದು ಕನ್ನಡಿಗರುಯುಕೆ ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಕನ್ನಡ ಸಿನಿಮಾ ನಟಿ, ಹಾಗೂ ಪ್ಲೇಬ್ಯಾಕ್ ಸಿಂಗರ್ ಅನನ್ಯ ಭಟ್ ನಮ್ಮ ಅಥಿತಿ ಕಲಾವಿದರಾಗಿದ್ದಾರೆ. ಅನನ್ಯ ಭಟ್ ಒಬ್ಬ ಅತ್ಯುತ್ತಮ ಯುವ ಕಲಾವಿದೆ. ಜಾನಪದ ಗೀತೆ, ಸಿನಿಮಾ ಹಿನ್ನೆಲೆ ಗಾಯಕಿ, ಬಾಲ್ಯ ನಟಿ ಹಾಗೂ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ ಬಹುಮುಖ ಪ್ರತಿಭೆ! ಇಂತಹ ಹೆಮ್ಮೆಯ ಯುವ ಕಲಾವಿದೆಯನ್ನು ನಾವು ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡಿಗರುಯುಕೆ ಮುಖಾಂತರ ಬರ ಮಾಡಿಕೊಳ್ಳುತ್ತಿರುವದು ಸಂತಸದ ವಿಷಯ. ಯುಗಾದಿ ಕಾರ್ಯಕ್ರಮ ಏಪ್ರಿಲ್ ೭ ರ ಬೆಳಿಗ್ಗೆ ೧೧ ಕ್ಕೆ ಶುರುವಾದಿ ಸಂಜೆ ೭ ಘಂಟೆಗೆ ಮುಕ್ತಾಯಗೊಳ್ಳುತ್ತದೆ. ಸ್ಥಳೀಯ ಹಲವಾರು ಕಲಾವಿದರು ( ಗಾಯಕಿ Dr ಶ್ವೇತಾ ಹಿರೇಮತ್, Dr ಗಿರೀಶ್, ವೀಣಾ ವಿಶ್ವನಾಥ್, ಕೀರ್ತನಾ ರೆಡ್ಡಿ, ಪ್ರಮೋದ್, ಅಖಿಲ, ವಿಜಯ ಮಂಜುನಾಥ್, ಸಾತ್ವಿಕ್, ಅನುರಾಧ ವೇಣುಗೋಪಾಲ್ ಹಾಗೂ ಹಲವಾರು ಪುಟಾಣಿ ಮಕ್ಕಳು) ತಮ್ಮ ವಿವಿಧ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಕನ್ನಡ ಕಲಿ ಮಕ್ಕಳಿಂದ ಕೂಡ ವಿಶೇಷ ಪ್ರಸ್ತುತನೆಯಿದೆ! ರುಚಿಕರವಾದ ಹೋಳಿಗೆ ಊಟದೊಂದಿಗೆ, ಸಾಂಸ್ಕ್ರತಿಕ ಕಾರ್ಯಕಮಗಳೊಂದಿಗೆ ಎಲ್ಲಾ ಒಟ್ಟಾಗಿ ಸೇರಿ ಈ ಬಾರಿಯ ಯುಗಾದಿ ಹಬ್ಬವನ್ನು ಆಚರಿಸೋಣ. ಕಾರ್ಯಕ್ರಮದ ವಿವರ ಹಾಗೂ ಟಿಕೆಟ್ ಮಾಹಿತಿಗಾಗಿ ಕೆಳಗಿನ ಅಂತರ್ಜಾಲ ಕೊಂಡಿಯನ್ನು ಒತ್ತಿ.
https://www.kannadigaruuk.com/ugadi2019/

ಹೊಸ ವರ್ಷದೊಂದಿಗೆ ಹೊಸ ಕನ್ನಡಿಗರುಯುಕೆ ಯ ಸದಸ್ಯರನ್ನು ಬರ ಮಾಡಿಕೊಳ್ಳೋಣ. ಇನ್ನೂ ಹಲವಾರು ಕಾರ್ಯಕ್ರಮಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವರಿದ್ದೇವೆ. ನನ್ನ ಮುಂದಿನ ಬ್ಲಾಗ್ ನಲ್ಲಿ ಮತ್ತಷ್ಟು ವಿಷಯಗಳನ್ನು ತಮ್ಮ ಮುಂದಿಡುತ್ತೇನೆ.
ಧನ್ಯವಾದಗಳೊಂದಿಗೆ
ಗಣಪತಿ ಭಟ್

Leave a Reply

Your email address will not be published. Required fields are marked *