
ಕನ್ನಡಿಗರುಯುಕೆ ಕನ್ನಡ ರಾಜ್ಯೋತ್ಸವದ ಬಗ್ಗೆ ಒಂದು ವಿಶೇಷ ಲೇಖನ ಶ್ರೀಮತಿ ಶೋಭಾ ಸಾಗರ್ ಅವರಿಂದ.
ಕನ್ನಡ ರಾಜ್ಯೋತ್ಸವವೆಂದರೆ ಕನ್ನಡ ಹಬ್ಬ, ಕನ್ನಡಿಗರ ಹಿರಿಮೆ , ಗರಿಮೆ, ಮತ್ತು ಕನ್ನಡವೆಂದರೆ ‘ಅಮೃತವಾಣಿ ‘ ಇಂತಹ ಕನ್ನಡ ನಾಡು- ನುಡಿ ಉದಯವಾದ ನಮ್ಮೆಲ್ಲರ ಹೆಮ್ಮೆಯ ದಿನ ‘ನವೆಂಬರ್ ೧’.
ಪ್ರತಿ ಬಾರಿ ಕನ್ನಡ ರಾಜ್ಯೋತ್ಸವ ಬಂದಾಗ ನಾವೆಲ್ಲಾ ಎಚ್ಛೆತ್ತುಕೊಂಡು ಕನ್ನಡ ಉಳಿಸಿ ಬೆಳೆಸಿ ಅಂತೆಲ್ಲ ಹೇಳುತ್ತೇವೆ ಆದರೆ ಪ್ರತಿ ಕ್ಷಣವೂ ನಮ್ಮ ನಾಡು-ನುಡಿಗೆ ಜೀವ ತುಂಬಿ , ನಮ್ಮಲ್ಲಿ ಭಾಷಾಭಿಮಾನ ಕಡಿಮೆಯಾಗದಂತೆ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ . ಹೀಗೆ ಹೊರದೇಶದಲ್ಲೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗಲೆಂದು ಕಟ್ಟಿದ ಸಂಸ್ಥೆ “ಕನ್ನಡಿಗರು ಯು ಕೆ”
ಅಂದು ಕನ್ನಡಿಗರು ಯು ಕೆ ಆಯೋಜಿಸಿದ “ಕನ್ನಡ ಹಬ್ಬ” ನಿಜಕ್ಕೂ ಹಬ್ಬದ ವಾತಾವರಣವೇ ಆಗಿತ್ತು. ಅದನ್ನು ನಾನು ಹೇಗೆ ವರ್ಣಿಸಲಿ, ಊಹೆಗೂ ಮೀರಿದ ಆಯೋಜನೆ, ಎಲ್ಲೆಲ್ಲೂ ಕನ್ನಡಿಗರು, ಮಕ್ಕಳ ಕೈಯಲ್ಲಿ ಕನ್ನಡದ ಬಾವುಟ, ಕ್ಷಣ-ಕ್ಷಣವೂ ಕಿವಿಗಪ್ಪಳಿಸುತ್ತಿದ್ದ ಕನ್ನಡ ನುಡಿ. ಬಣ್ಣಿಸಲಾಗದಂತಹ ಕನ್ನಡಿಗರ ಉತ್ಸಾಹ.
ಅಂದು ಕಂಡ ಆ ಕನ್ನಡ ಹಬ್ಬ ಇಂದಿಗೂ ನೆನಪಿದೆ, ಮಕ್ಕಳ ಬಾಯಲ್ಲಿ ಆ ತೊದಲು ಕನ್ನಡ ನುಡಿಗಳು ಪದೇ ಪದೇ ನಮ್ಮಲ್ಲಿ ಭಾಷಾಭಿಮಾನವನ್ನು ಹೆಚ್ಚಿಸುತ್ತಿತ್ತು. ಆ ಪುಟ್ಟ ಮಕ್ಕಳ ನೃತ್ಯಗಳಿಂದ ಪ್ರಾರಂಭವಾದ ಹಬ್ಬ, ಮಕ್ಕಳ ಆ ನೃತ್ಯ ಶೈಲಿ ಅದರ ಪರಿಪೂರ್ಣತೆ ಕಾರ್ಯಕ್ರಮದ ತೂಕವನ್ನು ಹೆಚ್ಚಿಸಿತ್ತು ಮತ್ತು ವೇದಿಕೆಮೇಲೆ ಮಕ್ಕಳು ಹಾಕುತ್ತಿದ್ದ ಹೆಜ್ಜೆ-ಹೆಜ್ಜೆಗೂ ನಮ್ಮಲ್ಲಿ ಸಡಗರದ ಉತ್ಸಾಹವನ್ನು ಹೆಚ್ಚಿಸಿತ್ತು. ನಂತರದ ಯಕ್ಷಗಾನ, ಭರತನಾಟ್ಯ ಮತ್ತು ಜಾನಪದ ನೃತ್ಯಗಳು ನಮ್ಮ ಕನ್ನಡ ನಾಡಿನ ವಿವಿಧ ಕಲೆಯನ್ನು ನೆನಪಿಸಿತು ಮತ್ತು ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿದಿತ್ತು. ಯು ಕೆ ಕನ್ನಡಿಗರೇ ರಚಿಸಿ ನಟಿಸಿದ “ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ” ನಾಟಕ ನಮ್ಮೆಲ್ಲರನ್ನು ಬೆರಗುಗೊಳಿಸಿತ್ತು.
ಹೀಗೆ ಮುಂದುವರೆದ ಕಾರ್ಯಕ್ರಮದಲ್ಲಿ ನಮಗುನಿಸಿದ ಊಟ ಶ್ಲಾಗನೀಯ, ಪರಿಸರ ಸ್ನೇಹಿ ( Eco-friendly) ತಟ್ಟೆಗಳನ್ನು ಉಪಯೋಗಿಸುವುದರ ಮೂಲಕ ಅವರು ಸಮಾಜಕ್ಕೆ ಕೊಟ್ಟ ಸ್ನಾದೇಶಕ್ಕೆ (Social- message) ನನ್ನದೊಂದು ನಮನ.
ಕನ್ನಡಿಗರು ಯು ಕೆ ಸಂಸ್ಥಯು ಕನ್ನಡ ಹಬ್ಬ ಮತ್ತು ಯುಗಾದಿಯ ಸಂಧರ್ಭದಲ್ಲಿ ವಸಂತೋತ್ಸವವನ್ನು ಆಚರಿಸುತ್ತಾರೆ. ಈ ಕಾರ್ಯಕ್ರಮಗಳಿಗೆ ನಮ್ಮ ನಾಡಿನಿಂದ ಕಾಲ ಭಂಡಾರವೇ ಹರಿದುಬರುತ್ತದೆ.
ಸಂಗೀತ ಕ್ಷೇತ್ರದಿಂದ :- ಸಂಗೀತ ಕಟ್ಟಿ, ರತ್ನಮಾಲಾ ಪ್ರಕಾಶ್ , ಅರ್ಜುನ್ ಜನ್ಯ , ರಘು ಧೀಕ್ಷಿತ್ , ಸಂಗೀತಾ ರಾಜೇವ್ ಮತ್ತ್ತು ಹಲವರು.
ಚಿತ್ರರಂಗದ ಕಲಾವಿದರಲ್ಲಿ :- ಯಶ್ , ರಮೇಶ್ ಅರವಿಂದ್ , ನಾಗತಿ ಹಳ್ಳಿ ಚಂದ್ರಶೇಖರ್ , ಮುಖ್ಯಮಂತ್ರಿ ಚಂದ್ರು, ಕೋಮಲ್ , ಸಾದು ಕೋಕಿಲಾ , ರಂಗಾಯಣ ರಘು ಮತ್ತು ಹಲವರು .
ರಂಗ ಕಲಾವಿದರಲ್ಲಿ :- ಮಂಡ್ಯಾ ರಮೇಶ್ , ನವೀನ ಪಡೀಲ್, ದಿಶಾ ರಮೇಶ್ , ದಯಾನಂದ್ ಮತ್ತು ಹಲವರು
ಹಾಸ್ಯ ಕಲಾವಿದರಲ್ಲಿ :- ಪ್ರಾಣೇಶ್ , ಸುಧಾ ಬರಗೂರ್, ಬಸವರಾಜ್ ಮಹಾಮನಿ, ಮತ್ತು ಹಲವರು.
ಜಾನಪದ ಕಲಾವಿದರಲ್ಲಿ ಗೋನ ಸ್ವಾಮಿ ಹೀಗೆ ಕಾಲ-ಕ್ಷೇತ್ರದ ಸಾಧಕರನ್ನು ನೋಡುವ ಸಧವಕಾಶ ಕಲ್ಪಿಸಿದ ಕನ್ನಡಿಗರು ಯು ಕೆ ಸಂಸ್ಥೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.
ಕನ್ನಡವೆಂದರೆ ಬರಿ ಭಾಷೆ ಮಾತ್ರವೇ ಅಲ್ಲ , ಅದೊಂದು ಸಂಸ್ಕೃತಿ , ಅದೊಂದು ಸಂಸ್ಕಾರ , ವ್ಯವಸ್ಥೆ, ಜೀವನ ಶೈಲಿ , ಅದೊಂದು ಸಂಪ್ರದಾಯ, ಪರಂಪರೆಯೂ ಹೌದು . ಅದನ್ನು ಹೊರದೇಶದಲ್ಲೂ ಉಳಿಸಿ ಬೆಳೆಸುವ ಸಂಕಲ್ಪ ತೊಟ್ಟು ಪ್ರಾರಂಭಿಸಿದ ಸಂಸ್ಥೆ ಕನ್ನಡಿಗರು ಯು ಕೆ .
ಅಂದು ಧಶಕಗಲ ಹಿಂದೆ ೨೦೦೫ ರಂದು ಸ್ಥಾಪಿಸಿದ ಸಂಸ್ಥೆ ಹಚ್ಚಿದ ಕನ್ನಡದ ಜ್ಯೋತಿ ಇಂದಿಗೂ ಬೆಳಗುತಿದೆ. ಇದರ ಮನ್ನಣೆ ಇದರ ಸಂಸ್ಥಾಪಕರಾದ ಗಾಯತ್ರಿ ವಿನಯ್ , ಶುಭಾ ದಿಲೀಪ್ , ಮಲ್ಲಿಕಾ ವೇಣುಗೋಪಾಲ್ , ಪವನ್ ಮೈಸೂರ್ ಅವರಿಗೆ ದೊರೆಯುತ್ತದೆ ಹಾಗೂ ಈ ಸಂಸ್ಥೆಯ ಉತ್ಸಾಹ ಇಂದಿಗೂ ಕಡಿಮೆಯಾಗದಂತೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಹಲವರಲ್ಲಿ ವಿನಯ್ ರಾವ್ , ಗಣಪತಿ ಭಟ್ , ಅನೀಲ್ ಕೊಂಡೇಬೆಟ್ಟು , ನವೀನ್ ಅವರಿಗೆ ಒಂದು ದೊಡ್ಡ ಸಲಾಂ.
ಈ ಸಂಸ್ಥೆಯ ಹಲವಾರು ಚಟುವಟಿಕೆಗಳಲ್ಲಿ “ಕನ್ನಡ ಕನ್ನಡ ಕಲಿ ” ಒಂದು ಅದ್ಬುತ ಉಪಕ್ರಮ. ಇಲ್ಲಿ ಮಕ್ಕಳಿಗೆ ಕನ್ನಡ ಭಾಷೆಯನ್ನು ಹಾಗು ನಮ್ಮ ಸಂಸ್ಕೃತಿ , ಜಾನಪದ ಶೈಲಿಗಳ ಪರಿಚಯ , ನಮ್ಮ ಕಲೆ , ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಉತ್ಸಾಹ ತುಂಬುವುದು ಈ ಚಟುವಟಿಕೆಯ ಮುಖ್ಯ ಗುರಿ.. ಇವರ ಈ ಕಾರ್ಯ ಚಟುವಟಿಕೆಗೆ ಕನ್ನಡ ಪ್ರಾಧಿಕಾರದ ಬೆಂಬಲ ಸಿಕ್ಕಿರುವುದು ಮತ್ತಷ್ಟು ಖುಷಿಪಡುವ ವಿಚಾರ.
ಹೀಗೆ ದೇಶದಾಚೆಯೂ ನಾಡು-ನುಡಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ತೊಟ್ಟ ಕನ್ನಡಿಗರು ಯು ಕೆ ಸಂಸ್ಥೆಗೆ ನಮ್ಮ ನಿಮ್ಮೆಲ್ಲರ ಬೆಂಬಲ ಮತ್ತು ಸಹಕಾರವಿರಲಿ.
ಜೈ ಕರ್ನಾಟಕ ಮಾತೆ
ಶೋಭಾ ಸಾಗರ್