ಪ್ರಿಯ ಕನ್ನಡಿಗ ಬಂಧುಗಳೇ,
ಕನ್ನಡಿಗರುಯುಕೆ ಯ ಮಾಜಿ ಚೇರ್ಮನ್ ಪವನ್ ಮೈಸೂರ್ ನಮ್ಮನ್ನಗಲಿದ್ದಾರೆಂದು ತಿಳಿಸಲು ತುಂಬಾ ವಿಷಾದವಾಗುತ್ತಿದೆ. ಕನ್ನಡಿಗರುಯುಕೆ ಯ ಮೊದಲ ಕಾರ್ಯಕಾರಿ ಸಮಿತಿಗೆ ಸೇರ್ಪಡೆಯಾದ ಪವನ್, ಮೊದಲ ನಾಲ್ಕು ವರ್ಷಗಳಲ್ಲಿ ಸಂಸ್ಥೆಯ ಮುಂದಾಳತ್ವ ವಹಿಸಿ, ಕನ್ನಡಿಗರುಯುಕೆಯನ್ನು ಆಂಗ್ಲನಾಡಿನ ಕನ್ನಡ ಸಮುದಾಯದಲ್ಲಿ ಚಿರಪರಿಚಿತಗೊಳಿಸಿದರು. ಸಂಸ್ಥೆಯ ಧ್ಯೇಯ, ಉದ್ದೇಶಗಳನ್ನು ಪರಿಭಾಷಿಸಿ ಪರಿಷ್ಕರಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದರು. ಈ ಅವಧಿಯಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಮುಖ್ಯ ಕಾರಣಕರ್ತೃರಾದರು . ಒಂಭತ್ತು ವರ್ಷಗಳ ವಿರಾಮದ ಬಳಿಕ ಮತ್ತೊಮ್ಮೆ ಸಂಸ್ಥೆಯನ್ನು ಮುನ್ನಡೆಸಲು ಪವನ್ ಅವರನ್ನು ಈ ವರ್ಷ ಆಹ್ವಾನಿಸಲಾಗಿತ್ತು. ಕನ್ನಡಿಗರುಯುಕೆಯ ಇತ್ತೀಚಿನ ಕನ್ನಡ ರಾಜ್ಯೋತ್ಸವದ ನೇತೃತ್ವ ವಹಿಸಿ ಅದನ್ನು ಯಶಸ್ವಿಯಾಗಿ ನೆರವೇರಿಸಿದರು. ಆದರೆ ಅವರ ಆರೋಗ್ಯ ದೃಷ್ಟಿಯಿಂದ ರಾಜ್ಯೋತ್ಸವದ ನಂತರ ಕನ್ನಡಿಗರುಯುಕೆಯಿಂದ ಮತ್ತೊಮ್ಮೆ ಬಿಡುವು ತೊಗೊಂಡಿದ್ದರು. ಅವರ ಅಗಲಿಕೆ ಕನ್ನಡಿಗರುಯುಕೆ ಗೆ ಹಾಗೂ ಆಂಗ್ಲನಾಡಿನ ಕನ್ನಡ ಸಮುದಾಯಕ್ಕೆ ಭರಿಸಲಾಗದ ನಷ್ಟ. ಕನ್ನಡಿಗರುಯುಕೆ, ಅವರ ಆದರ್ಶಪ್ರಾಯ ದೃಷ್ಟಿಕೋನ ಹಾಗೂ ಅಭಿಮಾನದಿಂದ ಇನ್ನು ಮುಂದೆ ವಂಚಿತವಾಗಲಿದೆ. ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿ ಹಾಗು ಆಂಗ್ಲ ನಾಡಿನ ಕನ್ನಡ ಸಮುದಾಯದ ಪರವಾಗಿ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ. ಅವರ ಕುಟುಂಬದ ದುಃಖದಲ್ಲಿ ಪಾಲ್ಗೊಂಡು, ನಮ್ಮೆಲ್ಲರ ಬೆಂಬಲ ನೀಡಿ, ಈ ಪರಿಸ್ಥಿತಿಯನ್ನು ಎದುರಿಸುವ ಆತ್ಮಸ್ಥೈರ್ಯ, ಈ ಅಘಾತದಿಂದ ಚೇತರಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೂ, ಎಲ್ಲರಿಗು ದೇವರು ನೀಡಲೆಂದು ಪ್ರಾರ್ಥಿಸೋಣ.
ಓಂ ಶಾಂತಿ.
ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿ