KUK News & Events

Kannada Rajyotsava 2018 Invitation

Invitation from Mr Pavan Mysore, Chairman of KannadigaruUK

ಸ್ನೇಹಿತರೇ,
ಕನ್ನಡಿಗರು ಯು.ಕೆ ಪರವಾಗಿ ನಿಮ್ಮೆಲ್ಲರಿಗೂ ಆದರದ ಹೃತ್ಪೂರ್ವಕ ನಮಸ್ಕಾರಗಳು.
ಕಳೆದೆರಡು ವಾರಗಳಿಂದ ಬರೆಯಬೇಕೆಂಬ ಹಂಬಲ, ಆದರೆ ಒಂದಾದರಮೇಲೊಂದು ಕೆಲಸ. ಕಾರ್ಯಕಾರಿ ಸಮಿತಿಯವರು “ಏನಪ್ಪ ರಾಜ್ಯೋತ್ಸವ ಹತ್ತಿರ ಬಂತು, ಇನ್ನು ಮಲಗೇ ಇದ್ದೀರ” ಅಂತ ಎಚ್ಚರಿಸದ ಮೇಲೆ ಬರೆಯಲು ಕುಳಿತೆ.
ಕಳೆದ 2  ತಿಂಗಳಿನಿಂದ ಕನ್ನಡಿಗರು ಯು.ಕೆ ಬಹಳ busy ಆಗಿ ಬಿಟ್ಟಿದೆ. ನಿಮಗೆಲ್ಲ ತಿಳಿದಿರುವ ಹಾಗೆ, ಮೇ 25ರಿಂದ GDPR ಅನಾವರಣಗೊಂಡ ಹಿನ್ನೆಲೆಯಲ್ಲಿ, ಅದರ ಅನುಷ್ಟಾನವನ್ನು ಜಾರಿಗೆ ತಂದಿತು. ನಿಮ್ಮೆಲ್ಲರ ಸಹಕಾರ ಮತ್ತು ಸಹಯೋಗದೊಂದಿಗೆ ಇದೇನು ಕಷ್ಟ ಅನ್ನಿಸಲೇ ಇಲ್ಲ. ನಮ್ಮ ಸಮಿತಿಯ ಪರವಾಗಿ ಪರವಾಗಿ ನಿಮಗೆ ಧನ್ಯವಾದಗಳು.
ಇದರ ಬೆನ್ನಲ್ಲೇ, ಜೂನ್ ತಿಂಗಳಲ್ಲಿ ನಮ್ಮ ಕೆಲವು ಉತ್ಸಾಹಿ ಮಿತ್ರರು  Birmingham ನಲ್ಲಿ “ಕನ್ನಡ ಕಲಿ” ಪ್ರಕ್ರಿಯೆಗೆ ಚಾಲನೆ ನೀಡಿದರು. ಶ್ರೀ.ರಾಜೆಶ್, ಶ್ರೀಮತಿ. ದೀಪು, ಸವಿತ, ಶಿಲ್ಪ, ಚೇತನ, ಶಾಂತ, ಸಹನ, ಸ್ವಾತಿ ಇವರ ನೇತ್ರತ್ವದಲ್ಲಿ, ಪೋಷಕರ ಹಾರೈಕೆ ಮತ್ತು ಉತ್ಸಾಹದೊಂದಿಗೆ 30ಕ್ಕೂ ಹೆಚ್ಚು ಮಕ್ಕಳು ಪ್ರತೀ ವಾರ ಕನ್ನಡ ಕಲಿಯುತ್ತಿದ್ದಾರೆ. ಇದೊಂದು ಶುಭ ಸೂಚನೆ. ಈ ಪ್ರಕ್ರಿಯೆ ನಿಲ್ಲಬಾರದು ಮತ್ತು ಇನ್ನೂ ಬೆಳೆಯಬೇಕೆಂಬುದೇ ನಮ್ಮೆಲ್ಲರ ಆಶಯ.
ಈಗ finally, ಕನ್ನಡ ರಾಜ್ಯೋತ್ಸವ 2018 . ನವೆಂಬರ್ 3rd , ಶನಿವಾರ ರಾಜ್ಯೋತ್ಸವವನ್ನು ಹಮ್ಮಿ ಕೊಳ್ಳಲಾಗಿದೆ.
ಸರಿ ಸುಮಾರು 12 ವರ್ಷಗಳಿಂದ ಕನ್ನಡಿಗರು ಯು.ಕೆ ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿರುವುದು ಹೆಮ್ಮೆಯ ವಿಷಯವೇ. ಇದರ ಪರಿಪೂರ್ಣ credit ನಿಮಗೇ ಸಲ್ಲಬೇಕು. ಪ್ರತೀ ಬಾರಿಯಂತೆ, ಈ ಬಾರಿಯೂ ನಿಮ್ಮ ಸಹಕಾರ, ಸಹಭಾಗಿತ್ವ ಮತ್ತು ಸದಾರೈಕೆಯೆಂಬ ಅಧಾರ ಸ್ತಂಭದ ಮೇಲೆ, ಈ ರಾಜ್ಯೋತ್ಸವದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಉತ್ಸುಕರಾಗಿದ್ದೇವೆ.
ಈ ಕಾರ್ಯಕ್ರಮ ನಮ್ಮೆಲ್ಲರನ್ನೂ ಒಂದು ಮಾಡುವ ಪ್ರಕ್ರಿಯೆ.
ಈಗಾಗಲೇ, ನಿಮಗೆ ಆಮಂತ್ರಣ ಪತ್ರಿಕೆ ತಲುಪಿರಬೇಕು, ಅಲ್ಲವೆ?ಇಲ್ಲದಿದ್ದಲ್ಲಿ, ಈ ಪತ್ರದ ಕೆಳಗೆ ಗಮನಿಸಿ. ಕಾರ್ಯಕಾರಿ ಸಮಿತಿಯ ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ತೊಡಗಿದ್ದಾರೆ.
ರಾಜ್ಯೋತ್ಸವ ಎಂದರೆ ರಂಜನೆಗೆ ಎಣೆಯಿಲ್ಲ. ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆ, ಸಾಹಿತ್ಯ, ಗೀತೆ, ನೃತ್ಯ, ನಾಟ್ಯ, ನಾಟಕ, ನಗು ಹಾಗು ಹತ್ತು ಹಲವಾರು ಮನರಂಜಿಸುವ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ನಮಗಾಗಿ (exclusive) ಸಂಗೀತ ರಾಜಿವ್ ಮತ್ತು ತಂಡದವರು ಬೆಂಗಳೂರಿನಿಂದ ಇಲ್ಲಿಗೆ ಬಂದು ನಮ್ಮನ್ನು ರಂಜಿಸಲಿದ್ದಾರೆ. Zee ಸ ರಿ ಗ ಮ ದ ಮೂಲಕ ಅಥವಾ ಬಹಳಷ್ಟು ವೇದಿಕೆಗಳ ಮೂಲಕ ಇವರನ್ನು ನೋಡಿರಬಹುದು ಅಥವಾ ಕೇಳಿರಬಹುದು. ಸದ್ಯಕ್ಕೆ ಕನ್ನಡದಲ್ಲಿ ಇವರು Rocking!!!.
ಈ ನವರಸಗಳಿಂದ ತುಂಬಿರುವ ಮನರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರ್ಯಕ್ರಮದ ಆಯೋಜನೆಯ ಹೊಣೆಯನ್ನು ಶ್ರೀ. ನವೀನ್ (Milton Keynes) ಹೊತ್ತಿದ್ದಾರೆ.
ನೀವು ವೇದಿಕೆಯಲ್ಲಿ ನಿಮ್ಮ ಪ್ರತಿಭೆಯನ್ನು ತೋರಬೇಕೆಂದರೆ, ದಯವಿಟ್ಟು ನವೀನರನ್ನು ಸಂಪರ್ಕಿಸಿ. ಅಥವಾ, events@kannadigaruuk.com ಗೆ ಇ-ಮೈಲ್ ಮಾಡಿ. ನವೀನ್ ಅಥವಾ ಕಾರ್ಯಕಾರಿ ಸದಸ್ಯರು ನಿಮಗೆ ಪ್ರತಿಸ್ಪಂದಿಸುತ್ತಾರೆ.
ನಮ್ಮ ಕನ್ನಡ ಕಲಿ ಮಕ್ಕಳಿಂದ ಕೂಡ ಕಾರ್ಯಕ್ರಮಗಳು ಮೂಡಿ ಬರಲಿವೆ. ಈ ಚಿಣ್ಣರ ಪ್ರತಿಭೆಯನ್ನು ನಿಮ್ಮೆಲ್ಲರಿಗೂ ಪರಿಚಯಿಸುವ ಹಂಬಲ ನಮಗೂ ಮತ್ತು ನಿಮಗೂ ಇದೆ ಅಲ್ಲವೇ?
ಈ ಬಾರಿ ಕಾರ್ಯಕಾರಿ ಸಮಿತಿಯವರು, ದೂರದ ಊರುಗಳಿಂದ ಬರುವರಿಗೆ ಸಹಾಯವಾಗಲೆಂದು ಸಂಚಾರ ವ್ಯವಸ್ಥೆ ಮಾಡುತ್ತಲಿದೆ. Bus/Coach arrangements for those travelling from far places.
ಹೆಚ್ಚಿನ ಮಾಹಿತಿಗಳಿಗೆ KUK | Rajyotsava 2018 – Early Bird Offer ಕ್ಲಿಕ್ ಮಾಡಿ.
ಈ ಕಾರ್ಯಕ್ರಮದ ಆಯೋಜನೆಗೆ ನಿಮ್ಮೆಲ್ಲರ ಸಹಾಯ ಅತ್ಯಗತ್ಯ. ನಿಮಗೆ ಈ ಕಾರ್ಯಕ್ರಮದ ಆಯೊಜನೆಯಲ್ಲಿ ಭಾಗಿಯಾಗಬೇಕೆಂಬ ಇಚ್ಚೆ ಇದ್ದಲ್ಲಿ ದಯವಿಟ್ಟು ನಮಗೆ ತಿಳಿಸಿ. . email us on events@kannadigaruuk..com, with subject name – Event Volunteer and don’t forget to put your name and phone number. ಸೆಪ್ಟೆಂಬರ್ ತಿಂಗಳಲ್ಲಿ  Event planning meetingಇಟ್ಕೋಳೋಣ ಅಂತ ಇದೀವೆ. ನಿಮಗೆ ಅದರ ಬಗ್ಗೆ ಮಾಹಿತಿ ಕಳಿಸುತ್ತೇವೆ. ಅಲ್ಲಿ ಹೆಚ್ಚು ಮಾತನಾಡೊಣ.
ನಮ್ಮ ಈ ವರ್ಷದ ಎಲ್ಲಾ ಕಾರ್ಯಕ್ರಮಗಳಿಗೂ ಸಹಾಯ ಹಸ್ತ ನೀಡುತ್ತಿರುವ  Platinum Sponsors Purvankara & Gold Sponsors SBI UK, DHFL and Freedom Mortgages  ಸಂಸ್ಥೆಯವರಿಗೆ ನಾವು ಚಿರಋಣಿಗಳಾಗಿದ್ದೇವೆ.
ಕಡೆಯದಾಗಿ,
ಈ ಕನ್ನಡ ರಾಜ್ಯೋತ್ಸವ ಒಂದು ಹಬ್ಬ. ಹಬ್ಬ ಅಂದ್ರೆ ಕಾಫಿ, ಚಹ, ಒಳ್ಳೆಯ ಊಟ ತಿಂಡಿ, ಒಂದೆರಡು ಸಿಹಿ ಮಾತುಗಳು, ಹೆಲೋ-ಹಾಯ್ ಗಳು ಮತ್ತು ಮನಕ್ಕೆ ಆನಂದ ನೀಡುವ ಕಾರ್ಯಕ್ರಮಗಳು..ಏನಂತೀರಿ?
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ.
ನಿಮ್ಮೆಲ್ಲರಿಗೂ ಕನ್ನದ ರಾಜ್ಯೋತ್ಸವ 2018 ಗೆ ಆದರದ ಸ್ವಾಗತ. ನಿಮ್ಮ ಪ್ರೀತಿ, ಪ್ರೋತ್ಸಹ ಮತ್ತು ಪೋಷಣೆ ನಮಗೆ ಶ್ರೀರಕ್ಷೆ. ನೀವು, ನಿಮ್ಮ ಮನೆಯವರು, ನಿಮ್ಮ ಸ್ನೇಹಿತರು ಎಲ್ಲರನ್ನು ಕರೆ ತನ್ನಿ.
ಮುಂಚಿತವಾಗಿ  register ಮಾಡಿ ಮತ್ತು Discount ಪಡೆಯಲು ಮರೆಯದಿರಿ.
Details of the Event
Saturday, 3rd November 2018
11 Am to 7 PM
Gracepoint, 161-169, Essex Road, London N1 2SN
ಮತ್ತೆ ಭೇಟಿಯಾಗೋಣ…..
(ಕನ್ನಡಿಗರು ಯು.ಕೆ ಕಾರ್ಯಕಾರಿ ಸಮಿತಿಯ ಪರವಾಗಿ)
ನಿಮ್ಮ
ಪವನ್ ಮೈಸೂರ್

Leave a Reply

Your email address will not be published. Required fields are marked *