KUK News & Events

Kannada Community programme at High Commission of India

ಕಳೆದ ಶುಕ್ರವಾರ, ೪ ನೇ ಮೇ ೨೦೧೮ ರಂದು ಭಾರತೀಯ ಹೈ ಕಮಿಷನ್ ಲಂಡನ್ ಕಚೇರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ನೆಲೆಸಿದ ಕನ್ನಡ ಸಮುದಾಯದ ಒಕ್ಕೂಟ ಸಮಾರಂಭ, ಕನ್ನಡಿಗರುಯುಕೆ ಸಹಯೋಗದಲ್ಲಿ  ಜರುಗಿತು. Minister  Coordination Mr A S Rajan ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಇಂಗ್ಲೆಂಡ್ ನಲ್ಲಿ ನೆಲೆಸಿರುವ ಕನ್ನಡ ಸಂಸ್ಥೆಗಳ ಸುಮಾರು ೧೨೦ಕ್ಕೂ ಹೆಚ್ಚು ಸದಸ್ಯರು/ಮುಖಂಡರು ಈ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು. ಕನ್ನಡಿಗರುಯುಕೆ, ಕನ್ನಡ ಬಳಗ ಯುಕೆ, ಡಾರ್ಸೆಟ್ ಕನ್ನಡ ಬಳಗ, ಸ್ವಿನ್ಡೊನ್ ಕನ್ನಡ ಬಳಗ, ಇಪ್ಸ್ವಿಚ್, ಕೆಂಟ್, ಚೆಮ್ಸ್ಫೊರ್ಡ್ ಹಾಗೂ ಲಂಡನ್ ಸುತ್ತ ಮುತ್ತ ಇರುವ ಹಲವಾರು ಕನ್ನಡಿಗರು ಹಾಗೂ ಸಂಸ್ಥೆಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು.
 
ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಹೈ ಕಮಿಷನ್  ಶ್ರೀ ಬಾಲಾಜಿ ರಾಮಸ್ವಾಮಿ ಅವರ ಸ್ವಾಗತ ಭಾಷಣದಿಂದ ಸಮಾರಂಭ  ಶುರುವಾಯಿತು. ಅನಂತರ ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿಯ ಮುಖ್ಯಸ್ಥರಾದ  ಶ್ರೀ ಗಣಪತಿ ಭಟ್ ಯುನೈಟೆಡ್ ಕಿಂಗ್ಡಮ್ ನಲ್ಲಿರುವ ಕನ್ನಡ ಸಮುದಾಯದ ಬಗ್ಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಶ್ರೀ A S Rajan ಅವರು ಮಾತನಾಡಿ ಕರ್ನಾಟಕ ರಾಜ್ಯದ ಸಂಸ್ಕೃತಿಯ ಪ್ರಭಾವ ಹಾಗೂ ಪುರಾತನ ಸ್ಮಾರಕಗಳನ್ನು ಭಾರತೀಯರು ಸಂರಕ್ಷಿಸಿಕೊಂಡು ಬರಬೇಕೆಂದು ನೆರೆದ ಸಭಿಕರಲ್ಲಿ ಕೋರಿದರು. ಕನ್ನಡ ಸಮುದಾಯದ ಸದಸ್ಯರಿಂದ ಶ್ರೀ A S ರಾಜನ್ ಹಾಗೂ ಶ್ರೀ ಬಾಲಾಜಿ ರಾಮಸ್ವಾಮಿ (ಸೆಕ್ರೆಟರಿ ಕಾನ್ಸುಲರ್ ಸರ್ವಿಸ್) ಯವರಿಗೆ ಗೌರವ ಸಲ್ಲಿಸಲಾಯಿತು. ಅತಿಥಿಗಳಾದ ಶ್ರೀ ನೀರಜ್ ಪಾಟೀಲ್, ಶ್ರೀಮತಿ ಗೀತಾ ಮೋರ್ಲಾ, ಶ್ರೀ ಸುರೇಶ ಗಟ್ಟಪುರ್ ಹಾಗೂ ಶ್ರೀ ರಘುನಾಥ್ ಅವರಿಗೆ ಕನ್ನಡ ಸಮುದಾಯದ ಸದಸ್ಯರಿಂದ ಗೌರವ ಸಲ್ಲಿಸಲಾಯಿತು. ಸಭೆಯನ್ನು ಉದ್ದೇಶಿಸಿ ರಾಮಕೃಷ್ಣ ಮಠ ತುಮಕೂರು ಹಾಗೂ ಬಿಜಾಪುರ್, ಸಂಸ್ಥಾಪಕರಾದ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮಿಯವರು ಮಾತನಾಡಿದರು. ಅವರೊಂದಿಗೆ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹಾಗೂ  ಶ್ರೀ ಪರಮಾನಂದ ಸ್ವಾಮೀಜಿಯವರು ಉಪಸ್ಥಿತರಿದ್ದರು. ಹೈ ಕಮಿಷನ್ ಹಾಗೂ ಕನ್ನಡ ಸಮುದಾಯದ ಸದಸ್ಯರಿಂದ ಸ್ವಾಮೀಜಿಯವರಿಗೆ ಗೌರವ ಸಲ್ಲಿಸಲಾಯಿತು.
 
ಸುಮನಾ ಗಿರೀಶ್, ಅನಿಲ್ ಕೊಂಡೆಬೆಟ್ಟು, ಹರೀಶ್ ರಾಮಯ್ಯ, ರಮಾನಾಥ ಶಾಸ್ತ್ರಿ, ಸುರೇಶ ಗಟ್ಟಪುರ್, ರಾಮು ಗುರುಲಿಂಗಪ್ಪ ಹಾಗೂ ಡಾಕ್ಟರ್ ಸೀಮಾ ಸೀತಾರಾಮ್ ಅವರು ತಮ್ಮ ತಮ್ಮ  ಕನ್ನಡ ಸಂಸ್ಥೆಯ ಬಗ್ಗೆ ಪರಿಚಯ ಮಾಡಿಕೊಟ್ಟರು.
 
ಸೌಮ್ಯ ರಾವ್ ಹಾಗೂ ಕುಮಾರಿ ಆದ್ಯ ಶಾಸ್ತ್ರಿ ಯವರ ಭರತನಾಟ್ಯ ಪ್ರದರ್ಶನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಸುಹೊಕ್ಕಾಗಿ ಮುನ್ನಡೆಯಿತು. ಶ್ರೀ ವಿಶ್ವೇಶ್ ಭಟ್, ಶ್ರೀಮತಿ ಅಶ್ವಿನಿ ಭಟ್ ಹಾಗೂ ಕುಮಾರಿ ಆರಭಿ ಭಟ್ ಸುಮಧುರ  ಗಾಯನದೊಂದಿಗೆ ನೆರೆದಿದ್ದ ಪ್ರೇಕ್ಷಕರನ್ನು ಅದ್ಭುತವಾಗಿ ರಂಜಿಸಿದರು. ಶ್ರೀ ವಿನಯ್ ರಾವ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. 
 
ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ ಈ ಒಕ್ಕೂಟ ಸಮಾರಂಭ ಭಾರತೀಯ ಹೈ ಕಮಿಷನ್ ಲಂಡನ್ ಹಾಗೂ ಕನ್ನಡಿಗರುಯುಕೆ ನೇತೃತ್ವದಲ್ಲಿ  ಹಲವಾರು ಕನ್ನಡ ಸಂಸ್ಥೆಗಳ ಸಹಯೋಗದೊಂದಿಗೆ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. OGARA ಹಾಗೂ Stoneage Properties ಸಂಸ್ಥೆಗಳಿಂದ ಕಾರ್ಯಕ್ರಮದ ಪ್ರಾಯೋಜಕತ್ವ ಏರ್ಪಾಡಾಗಿತ್ತು  ಹಾಗೂ ಶಿವಳ್ಳಿ ಅವರಿಂದ ಸ್ವಾದಿಷ್ಟ ಊಟ ಉಪಚಾರದ ವ್ಯವಸ್ಥೆ ಮಾಡಲಾಗಿತ್ತು.
 
ಯುನೈಟೆಡ್ ಕಿಂಗ್ಡಮ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಕನ್ನಡ ಸಂಸ್ಥೆಗಳ ಒಕ್ಕೂಟಕ್ಕೆ, ಏಕೀಕರಣಕ್ಕೆ ಇದೊಂದು ಮೊದಲ ಹೆಜ್ಜೆ ಎಂದು ನೆರೆದಿರುವ ಎಲ್ಲ ಕನ್ನಡ ಸಮುದಾಯದ ಸದಸ್ಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು

Leave a Reply

Your email address will not be published. Required fields are marked *