KUK News & Events

Kannada Habba 2017 – Thank you!

ನಲ್ಮೆಯ ಕನ್ನಡಿಗ ಬಂಧುಗಳೇ,
ಕನ್ನಡಿಗರುಯುಕೆ ೧೩ ನೇ  ಬಾರಿ ಕನ್ನಡ ರಾಜ್ಯೋತ್ಸವನ್ನು ಕನ್ನಡ ಹಬ್ಬ ರೂಪದಲ್ಲಿ ಅದ್ದೂರಿಯಾಗಿ ಲಂಡನ್ ನ  ವೆಂಭ್ಲಿ  ಯಲ್ಲಿ ನಿನ್ನೆ ಆಚರಿಸಿತು. ೭೦೦ ಕ್ಕೂ ಮಿಕ್ಕಿ ನೆರೆದಿದ್ದ ಕನ್ನಡಿಗರು ಬಹಳ ಅದ್ಭುತವಾಗಿ ಮೂಡಿಬಂದ ಸಾಂಸ್ಕೃತಿಕ ಮನರಂಜನೆಯ  ಕಾರ್ಯಕ್ರಮಗಳನ್ನು ಮನಸಾರೆ ಸವಿದರು. ಈ ಕನ್ನಡ ಹಬ್ಬ ಯಶಸ್ವಿಯಾಗಿ ನೆರವೇರಲು ಅಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಎಲ್ಲ ಪ್ರೇಕ್ಷಕರಿಗೂ ಕನ್ನಡಿಗರುಯುಕೆಯ ಸಂಘಟನಾ ಸಮಿತಿ ಮನದಾಳದಿಂದ ಧನ್ಯವಾದಗಳನ್ನು ತಿಳಿಯಪಡಿಸಲಿಚ್ಚಿಸುತ್ತದೆ .  ನಿಮ್ಮ ಆಸಕ್ತಿ, ಸಕ್ರಿಯ ಭಾಗವಹಿಸುವಿಕೆ , ಬೆಂಬಲ ಹಾಗೂ ಉತ್ತೇಜನಗಳೇ ನಮ್ಮ ಸ್ಫೂರ್ತಿ.
ನಮ್ಮ ಕೋರಿಕೆಯನ್ನು ಮನ್ನಿಸಿ ಕನ್ನಡ  ಹಬ್ಬಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರೋತ್ಸಾಹದ ಮಾತುಗಳನ್ನಾಡಿದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಭರತೇಶ್, ಭಾರತೀಯ ಹೈ ಕಮಿಶನ್ನಿನ ಪ್ರಥಮ ಕಾರ್ಯದರ್ಶಿ ಶ್ರೀ ಬಾಲಾಜಿ, ಭಾರತೀಯ ವಿದ್ಯಾಭವನದ ಶ್ರೀ ನಂದಕುಮಾರ್  ಮತ್ತು  ಸ್ವಿ೦ಡನ್ ಕೌನ್ಸಿಲರ್ ಶ್ರೀ ಸುರೇಶ್ ಗಟ್ಟಾಪುರ್ ಇವರೆಲ್ಲರಿಗೂ ಕನ್ನಡಿಗರುಯುಕೆಯಿಂದ ತುಂಬುಹೃದಯದ ಧನ್ಯವಾದಗಳು. ಕನ್ನಡಿಗರುಯುಕೆಯ ಈ ಸಾಲಿನ “ಕನ್ನಡ ರತ್ನ”  ಪಾರಿತೋಷಕ ವನ್ನು ಸ್ವೀಕರಿಸಿದ್ದಕ್ಕಾಗಿ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಮತ್ತೊಮ್ಮೆ ಧನ್ಯವಾದಗಳು
ಆಂಗ್ಲನಾಡಿನ ಕನ್ನಡಿಗರನ್ನು ಕನ್ನಡ ಹಬ್ಬದಲ್ಲಿ ಮನರಂಜಿಸಲು ನಮ್ಮ ಬೇಡಿಕೆಯ ಮೇರೆಗೆ ಬಂದು,  ರಂಗ ಕಲಾವಿದ, ಚಿತ್ರನಟ, ಮಜಾ ಟಾಕೀಸ್ ಖ್ಯಾತಿಯ ಹಾಸ್ಯ ಕಲಾವಿದ  ಮಂಡ್ಯ ರಮೇಶ್, ಹಾಸ್ಯ ಕಲಾವಿದ, ತುಳು ರಂಗನಟ  ನವೀನ ಪಡೀಲ್ ತಮ್ಮ ಹಾಸ್ಯ ಪ್ರಹಸನದಿಂದ ಹಾಗೂ ಮಹಾದೇವ ಸತ್ತಿಗೇರಿ  ತಮ್ಮ ಹಾಸ್ಯ ಚಟಾಕಿಗಳಿಂದ  ಸಭಿಕರನ್ನು ನಕ್ಕು ನಲಿಯುವಂತೆ ಮಾಡಿದ್ದಕ್ಕಾಗಿ ಕನ್ನಡಿಗರುಯುಕೆ ಚಿರಋಣಿಯಾಗಿರುತ್ತದೆ.  ತಮ್ಮ ಜನಪದ ಗೀತೆಯ ಸೊಗಡಿನಿಂದ ಗೋ.ನಾ.ಸ್ವಾಮಿ ಮತ್ತು ಉಚ್ಛಸ್ಥಾಯಿಯ ರಂಗಗೀತೆಗಳನ್ನು ಲೀಲಾಜಾಲವಾಗಿ ಹಾಡಿದ ಮಂಡ್ಯರ ಸುಪುತ್ರಿ ದಿಶಾ ರಮೇಶ್ ಸಭಿಕರನ್ನು ನಿಬ್ಬೆರಗಾಗಿ ಮೈಮರೆಯುವಂತೆ ಮಾಡಿದ್ದಕ್ಕಾಗಿ ನಾವೆಲ್ಲ ಅಭಾರಿ.
ಕನ್ನಡಿಗರುಯುಕೆಯ ಕನ್ನಡಕಲಿ ಕೇಂದ್ರಗಳಾದ ಹ್ಯಾರೋ, ಬೇಸಿಂಗ್ ಸ್ಟೋಕ್, ಸ್ಲಾವ್, ಇಲ್ಫೋರ್ಡ್, ಮಿಲ್ಟನ್ ಕೀನ್ಸ್ , ಕೇಂಬ್ರಿಜ್  ಕೇಂದ್ರಗಳಿಂದ ಸೊಗಸಾಗಿ ನರ್ತಿಸಿ, ತಮ್ಮ ಕನ್ನಡ ಕಲಿಕೆಯನ್ನು ಪ್ರದರ್ಶಿಸಿ ನಮ್ಮನ್ನೆಲ್ಲ ಮುದಗೊಳಿಸಿದ ಮುದ್ದು  ಚಿಣ್ಣರಿಗೂ, ಅವರಿಗೆಲ್ಲ ಕನ್ನಡವನ್ನು ಕಲಿಸಿ, ಗೀತರೂಪಕಗಳನ್ನು ನಿರ್ದೇಶಿಸಿದ ಕನ್ನಡಕಲಿ ಶಿಕ್ಷಕಿಯರೆಲ್ಲರಿಗೂ ಕನ್ನಡಿಗರುಯುಕೆಯು ಅನಂತ ಧನ್ಯವಾದಗಳನ್ನು  ಅರ್ಪಿಸುತ್ತದೆ.
 ತಮ್ಮ ವಿವಿಧ ಕಲಾಪ್ರದರ್ಶನದಿಂದ ಕಾರ್ಯಕ್ರಮಕ್ಕೆ ಕಳೆಗೂಡಿಸಿದ ಸ್ಥಳೀಯ ಪ್ರತಿಭೆಗಳಿಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಕನ್ನಡ ಹಬ್ಬಕ್ಕೆ ಮೆರುಗುನೀಡುವಂತೆ ಅತ್ಯದ್ಭುತವಾಗಿ ನಿರೂಪಣೆ ಮಾಡಿ ಕಾರ್ಯಕ್ರಮಕ್ಕೆ ಇನ್ನೊಂದು ಆಯಾಮ ನೀಡಿದ ಭವ್ಯ ಕಾರ್ತಿಕ್ ಮತ್ತು ಡಾ|| ಕುಮಾರ್ ನಾಯ್ಕ್ ಅವರಿಗೆ ಕನ್ನಡಿಗರುಯುಕೆ ತುಂಬಾ ಅಭಾರಿಯಾಗಿರುತ್ತದೆ.
ನಮ್ಮ ಈ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಭರಿಸಲು ಆರ್ಥಿಕ ಬೆಂಬಲ ನೀಡಲು ಕಾರ್ಯಕ್ರಮ ಪ್ರಾಯೋಜಿಸಿದ title sponsor Ogaara Foods, premier sponsor ಗಳಾದ  Silverside Protection and Mortgages, A One Insurance, HDFC, SBI UK, Lyca Mobile, Basaveshwara Foundation, Advanced group ವಾಣಿಜ್ಯ ಸಂಸ್ಥೆಗಳಿಗೆ ನಮ್ಮ ಕೃತಜ್ಞತೆಗಳು.
ನಮ್ಮ ಮೀಡಿಯಾ ಮಿತ್ರ ಸಂಸ್ಥೆಗಳಾದ ನಮ್ ರೇಡಿಯೋ, Asian Lite ಅಲ್ಲದೆ   Xplor Travels, Event365 ಸಂಸ್ಥೆಗಳಿಗೂ ಅವರ ಎಲ್ಲಾ ಸಹಾಯಗಳಿಗೂ ನಾವು ಚಿರಋಣಿಯಾಗಿರುತ್ತೇವೆ
ಈ ಕಾರ್ಯಕ್ರಮಕ್ಕೆ ಆಹಾರ ಸರಬರಾಜು ಮಾಡಿದ ಕೈಲಾಶ್ ಪರ್ಬತ್ ಹಾಗು ಅನು ಕೇಟರರ್ಸ್ ಅವರಿಗೂ ಧನ್ಯವಾದಗಳು.
ನಮಗೆ ಬೆನ್ನೆಲುಬಾಗಿ ನಿಂತು, ಎಲ್ಲ ಕಾರ್ಯಗಳಲ್ಲೂ ಕೈಜೋಡಿಸಿ ಕಾರ್ಯಕ್ರಮ ಸಾಂಗವಾಗಿ ನಡೆದು ಅತ್ಯಂತ ಯಶಸ್ವಿಯಾಗಲು ಪರಿಶ್ರಮಿಸಿದ ಕಾರ್ಯಕ್ರಮ  ಸಮಿತಿಯ ಸದಸ್ಯರು, ಸ್ವಯಂಸೇವಕರಿಗೆಲ್ಲ ಕನ್ನಡಿಗರುಯುಕೆ ತುಂಬಾ ಅಭಾರಿಯಾಗಿರುತ್ತದೆ.
ತಿಳಿದೋ, ತಿಳಿಯದೆಯೋ ಏನಾದರೂ ತಪ್ಪು, ಲೋಪದೋಷಗಳಾಗಿದ್ದಲ್ಲಿ, ನಿಮ್ಮ ಕ್ಷಮೆ ಇರಲಿ, ನಿಮ್ಮ ತಾಳ್ಮೆ ಶ್ಲಾಘನೀಯ.
ಆಂಗ್ಲನಾಡಿನಲ್ಲಿ ಕನ್ನಡ ಭಾಷೆ ಹಾಗು  ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ಕನ್ನಡಿಗರುಯುಕೆ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮ ಈ ಬೆಂಬಲ ಹಾಗು ಸಕ್ರಿಯ  ಭಾಗವಸುವಿಕೆ ಪ್ರಶಂಸಾರ್ಹ, ಅದುವೇ ನಮಗೆ ಸ್ಪೂರ್ತಿ.  ಇಂತಹ ಹಾಗೂ ಇನ್ನೂ ಉನ್ನತ ಮಟ್ಟದ ಕಾರ್ಯಕ್ರಮಗಳನ್ನು ನಿಮಗೆ ತರಲು  ನಿಮ್ಮ ಬೆಂಬಲ ಅತ್ಯಗತ್ಯ ಮತ್ತು  ಅತ್ಯಮೂಲ್ಯ.  ದಯವಿಟ್ಟು ನಿಮ್ಮ ಅಮೂಲ್ಯವಾದ ಸಲಹೆ, ಮರುಮಾಹಿತಿಗಳನ್ನು events@kannadigaruuk.com ಗೆ ಮಿಂಚಂಚೆ (email) ಕಳುಹಿಸಿ, ನಾವು ಖಂಡಿತವಾಗಿ ಪರಿಗಣಿಸುತ್ತೇವೆ.
ಸಿರಿಗನ್ನಡಂ ಗೆಲ್ಗೆ.

Leave a Reply

Your email address will not be published. Required fields are marked *