KUK News & Events

ಕನ್ನಡ ಹಬ್ಬ ೨೦೧೭ – ಅರಳು ಪ್ರತಿಭೆ ದಿಶಾ ರಮೇಶ್

ಅಪ್ಪ: ಶ್ರೀ ಮಂಡ್ಯ ರಮೇಶ್, ಅಮ್ಮ: ಶ್ರೀಮತಿ ಸರೋಜಾ ಹೆಗಡೆ. ರಂಗಭೂಮಿಯ ಸೈಡ್ ವಿಂಗ್ ನಲ್ಲಿಯೇ ಆಡಿ ಬೆಳೆದ ಪುಟ್ಟ ಹುಡುಗಿ ದಿಶಾಗೆ ಸಹಜವಾಗಿ ರಂಗಾಸಕ್ತಿ ಅನ್ನುವುದು ಬದುಕಿನ ಧರ್ಮವಾಗಿ ಬಿಟ್ಟಿದೆ. ‘ಗೋವಿನಹಾಡು’ ಪುಟ್ಟು ಕರುವಾಗಿ ಅಡಿ ಇಟ್ಟ ದಿಶಾಗೆ ಗಾಯನದ ಮೊದಲ ಗುರು ಶ್ರೀ ರಾಜು ಅನಂತಸ್ವಾಮಿ. ರಂಗಸ್ಥಳದಲ್ಲಿ ಹಾಡುತ್ತಾ ಆಡುತ್ತಾ ಬೆಳೆದ ಪೋರಿ ಸದ್ಯದ ಕರ್ನಾಟಕ ರಂಗಭೂಮಿಯ ಅತ್ಯಂತ ಭರವಸೆಯ ನಟಿಯಾಗಿ ರೂಪುಗೊಂಡಿದ್ದಾರೆ. ಮಂಡ್ಯ ರಮೇಶರಿಂದ ಆದಿಯಾಗಿ, ಭಾರತದ ಸರ್ವಶ್ರೇಷ್ಠ ನಿರ್ದೇಶಕರಾದ ಶ್ರೀ ಪ್ರಸನ್ನ, ಶ್ರೀ ಚಿದಂಬರರಾವ್ ಜಂಬೆ, ಶ್ರೀಮತಿ ಬಿ. ಜಯಶ್ರೀ, ಶ್ರೀ ಬಿ. ಸುರೇಶ, ಶ್ರೀ ಶ್ರೀಪಾದ್ ಭಟ್ ಮುಂತಾದ ರಂಗಪ್ರಮುಖರೊಂದಿಗೆ ದುಡಿದ ಅನುಭವಗೊಳಿಸಿಕೊಂಡಿದ್ದಾರೆ.
ಚಾಮಚೆಲುವೆಯ ಕೋರನಂಜಿ ಮತ್ತು ಚಾಮುಂಡಿ, ಹ್ಯಾಮ್ಲೆಟ್ ಬಫಿಲಿಯಾ, ಚರಣದಾಸ ದಾಸದ ಸಖಿ, ಸುಭದ್ರಾ ಕಲ್ಯಾಣದ ಸುಭದ್ರೆ, ಕೆಂಪುಕಣಿಗಿಲೆಯ ಪ್ರಧಾನ ಪಾತ್ರ…. ನೂರಾರು ನಾಟಕಗಳ ಅಸಂಖ್ಯಾತ ಪಾತ್ರಗಳಲ್ಲಿ ಅವಿಸ್ಮರಣೀಯ ಅಭಿನಯ ನೀಡಿದ್ದಾರೆ. ಗಾಯಕಿಯಾಗಿ ಹೆಸರು ಮಾಡಿದ್ದಾರೆ.
N.S.D ಉತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ. ರಾಷ್ಟ್ರಪತಿಯೆದುರು ರಂಗಗೀತೆ ಹಾಡಿ ಸೈ ಅನಿಸಿಕೊಂಡಿದ್ದಾರೆ.
ಅಮೆರಿಕಾದ KKNC ಅಭಿನಯ ತರಬೇತಿ ಶಿಭಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕನ್ನಡಿಗರಿಗೆ ಹೆಮ್ಮೆ ಮಾಡಿಸಿದ್ದಾರೆ. 2016 ರಲ್ಲಿ ಸಿಂಗಾಪುರ ಸಿಂಗರ ಕನ್ನಡ ಸಂಸ್ಕೃತಿ ಉತ್ಸವದ ಎರಡು ನಾಟಕಗಳಲ್ಲಿ ಪ್ರಧಾನ ಪಾತ್ರವಹಿಸಿ ಅಲ್ಲಿನ ಕನ್ನಡಿಗರಿಗೆ ಮೆಚ್ಚಿನ ನಟಿಯಾಗಿದ್ದಾರೆ. ನಟ ರಂಗಶಾಲೆಯಲ್ಲಿ ರಂಗಾಗಾಯನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಾ, ಪತ್ರಿಕೋದ್ಯಮದಲ್ಲೂ ಪದವೀಧರೆಯಾಗಿದ್ದು, ಪ್ರಸ್ತುತ Dr ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ವಿದ್ಯಾರ್ಥಿನಿಯಾಗಿದ್ದು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರಂಗಗೀತೆಗಳ ಕಾರ್ಯಕ್ರಮ ನೀಡಿ ಜನಪ್ರಿಯರಾಗಿದ್ದಾರೆ.
ಪ್ರಕಾಶ್ ರೈ ನಟಿಸಿರುವ ಬಿ. ಸುರೇಶ ನಿರ್ದೇಶನದ ‘ದೇವರ ನಾಡಲ್ಲಿ’ ಕನ್ನಡ ಚಲನ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ವರ್ಷ ನೋವೆಂಬರನಲ್ಲಿ ಕನ್ನಡಿಗರು ಯು. ಕೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಹಬ್ಬ ೨೦೧೭ ನೇ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಅತಿಥಿ ಕಲಾವಿದರಾಗಿ ದಿಶಾ ರಮೇಶ್ ಲಂಡನ್ ಬರುತ್ತಿರುವದು ಹೆಮ್ಮೆಯ ವಿಷಯ. ಕನ್ನಡಿಗರು ಯು.ಕೆ ತಂಡದಿಂದ ದಿಶಾ ರಮೇಶ್ ಅವರಿಗೆ ಹೃದಯಪೂರ್ವಕ ಸ್ವಾಗತ.

Leave a Reply

Your email address will not be published. Required fields are marked *