KUK News & Events

ಕನ್ನಡಿಗರು ಯು. ಕೆ. ಕನ್ನಡ ಹಬ್ಬ ೨೦೧೭

ಪ್ರೀತಿಯ ಕನ್ನಡಿಗರೇ,
ಕನ್ನಡಿಗರು ಯು,ಕೆ ಪ್ರಸ್ತುತ ಪಡಿಸುತ್ತಿರುವ ‘ಕನ್ನಡ ಹಬ್ಬ’ ಕ್ಕೆ ತಮ್ಮೆಲ್ಲರಿಗೆ ಆತ್ಮೀಯವಾದ ಆಮಂತ್ರಣ.
ಪ್ರತಿವರ್ಷದಂತೆ , ಈ ವರ್ಷವೂ ಮತ್ತ್ತೊಂದು ಯಶಸ್ವೀ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ನಾವೆಲ್ಲಾ ಸಜ್ಜಾಗುತ್ತಿದ್ದೇವೆ. ಈ ಬಾರಿಯ ಕನ್ನಡ ಹಬ್ಬದ ಮುಖ್ಯ ಆಕರ್ಷಣೆ ‘ ಜಾನಪದ’, ಜನ ಮಾನಸದಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಸೊಗಡನ್ನು ಪಸರಿಸಲು, ನಟನೆ, ನಿರ್ದೇಶನ, ನಿರ್ಮಾಣ, ರಂಗಭೂಮಿ, ಕಿರುತೆರೆ, ಹಿರಿತೆರೆಯ ಹೆಸರಾಂತ ಕಲಾವಿದ ಶ್ರೀ. ಮಂಡ್ಯ ರಮೇಶ್ ರವರು ತಮ್ಮ ಮಿತ್ರರಾದ ‘ತುಳುನಾಡ ಹಾಸ್ಯ ಚಕ್ರವರ್ತಿ’ ಶ್ರೀ. ನವೀನ ಡಿ ಪಡೀಲ್ , ‘ಜಾನಪದ ಕೋಗಿಲೆ’ ಶ್ರೀ, ಗೋನಾ ಸ್ವಾಮಿ , ಖ್ಯಾತ ಹಾಸ್ಯಗಾರ ಶ್ರೀ ಮಹದೇವ್ ಶೆಟ್ಟಿಗೇರಿ ಹಾಗೂ ‘ಅರಳು ಪ್ರತಿಭೆ’ ಕು. ದಿಶಾ ರಮೇಶ್ ರೊಂದಿಗೆ ಲಂಡನ್ ಗೆ ಪ್ರಥಮ ಬಾರಿಗೆ ಆಗಮಿಸುತ್ತಿದ್ದಾರೆ.
ಹಾಸ್ಯ , ಪ್ರಹಸನ, ಜಾನಪದ ಗೀತೆಗಳ ಮೇಳದ ಜೊತೆಗೆ ಯು.ಕೆ. ಸ್ಥಳೀಯ ಕಲಾವಿದರಿಂದ ಸಂಪೂರ್ಣ ಮನೋರಂಜನೆಯ ರಸದೂಟ!.
ಬನ್ನಿ, ಕನ್ನಡ ನಾಡಿನ ಜಾನಪದ, ಕಲೆ, ನಾಟಕ, ಸಂಗೀತ ಮತ್ತು ಸಂಭ್ರಮದ ಜಾತ್ರೆಯಲ್ಲಿ ಜೊತೆಗೂಡಿ!

ಬನ್ನಿ, ಕನ್ನಡ ನಾಡಿನ ಜಾನಪದ, ಕಲೆ, ನಾಟಕ, ಸಂಗೀತ ಮತ್ತು ಸಂಭ್ರಮದ ಜಾತ್ರೆಯಲ್ಲಿ ಜೊತೆಗೂಡಿ!

 

 

 

 

 

 

Leave a Reply

Your email address will not be published. Required fields are marked *