KUK News & Events

ಯುಗಾದಿಯ ಕರೆಯೋಲೆ – ‘ ಶ್ರೀ. ಪ್ರಹ್ಲಾದ್ ಆಚಾರ್ಯ’ ಅವರಿಂದ ಮನೋರಂಜನೆ ಕಾರ್ಯಕ್ರಮ

ನೋವಿದ್ದಲ್ಲೇ ನಲಿವಿಗೆ ಬೆಲೆ, ಕಹಿ ಇದ್ದಲ್ಲೇ ಸಿಹಿಗೆ ನೆಲೆ, ಜೀವನದ ಈ ಸರಳ ಮರ್ಮವನ್ನು ಹೇಳುವ , ಸಿಹಿ- ಕಹಿ ಸತ್ವಗಳನ್ನೊಳಗೊಂಡ ಯುಗಾದಿ ಮತ್ತೆ ಬಂದಿದೆ. ಪ್ರತಿ ವರ್ಷದಂತೆ, ಈ ವರ್ಷವೂ ಕನ್ನಡಿಗರು ಯುಕೆ ವರ್ಷದ ಪ್ರಥಮ ಹಬ್ಬ , ಯುಗಾದಿಯನ್ನು ವಿಜೃಂಭಣೆಯಿಂದ ತಮ್ಮ ಮಿಲ್ಟನ್ ಕೀನ್ಸ್ ಶಾಖೆಯಲ್ಲಿ ಇದೇ ಏಪ್ರಿಲ್ 9 ರಂದು ಆಯೋಜಿಸಿದ್ದಾರೆ. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ , ತಮ್ಮ ನೆರಳು ಬೆಳಕಿನಾಟದಿಂದ ಪ್ರಖ್ಯಾತಿ ಪಡೆದಿರುವ ಬಹುಮುಖ ಪ್ರತಿಭೆ ‘ ಶ್ರೀ. ಪ್ರಹ್ಲಾದ್ ಆಚಾರ್ಯ‘ ಅವರಿಂದ ಮನೋರಂಜನೆ ಕಾರ್ಯಕ್ರಮವಿದ್ದು ಸುಗ್ರಾಸ ಭೋಜನದ ವ್ಯವಸ್ಥೆಯೂ ಇದೆ.
ಕೇವಲ ಆಹ್ವಾನಿತ ಅತಿಥಿಗಳಲ್ಲದೆ , ಸ್ಥಳೀಯ ಪ್ರತಿಭೆಗಳೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿರುವುದು ವಿಶೇಷ..
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ ಜಾಲತಾಣ https://www.kannadigaruuk.com/ugadi-celebration-2017/ ಸಂಪರ್ಕಿಸಿ.

IMG_5784

Leave a Reply

Your email address will not be published. Required fields are marked *