KUK News & Events

ಕನ್ನಡಿಗರುಯುಕೆ ಆಯೋಜಿಸಿದ ದಶಮಾನೋತ್ಸವ ೨೦೧೪ ರ ಯಶಸ್ಸಿಗೆ ಕಾರಣರಾದ ನಿಮ್ಮೆಲ್ಲರಿಗೂ ಕನ್ನಡಿಗರುಯುಕೆ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು

ಪ್ರಿಯ ಕನ್ನಡಿಗ ಬಾಂಧವರೆ
ಕನ್ನಡಿಗರುಯುಕೆ ಆಯೋಜಿಸಿದ ದಶಮಾನೋತ್ಸವ ೨೦೧೪ ರ ಯಶಸ್ಸಿಗೆ ಕಾರಣರಾದ ನಿಮ್ಮೆಲ್ಲರಿಗೂ ಕನ್ನಡಿಗರುಯುಕೆ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. ೭೦೦ರಕ್ಕೂ ಹೆಚ್ಚು ಸಂಖ್ಯೆಯಲ್ಲಿ ನೆರೆದು ಈ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆಡೆಸಲು ಸಹಾಯಹಸ್ತ ನೀಡಿ ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ಕನ್ನಡಿಗರುಯುಕೆ ಅತ್ಯಂತ ಚಿರಋಣಿ. ನೀವಿಲ್ಲದೆ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮ ಅಸಾಧ್ಯ, ನಿಮ್ಮ ಪ್ರೋತ್ಸಾಹವೇ ನಮ್ಮ ಸ್ಪೂರ್ತಿ
ತಮ್ಮ ನೆಚ್ಚಿನ ನಟ, ಸಂಗೀತ ಕಲಾವಿದರನ್ನು ಭೇಟಿ ಮಾಡಿ, ಅವರ ಕಲಾಪ್ರದರ್ಶನವನ್ನು ಸವಿದು, ಸಂತಸದ ಕ್ಷಣಗಳನ್ನು ಕಳೆಯಲು ನೆರೆದಿದ್ದ ಕನ್ನಡಿಗರನ್ನು ಕಂಡು ಕಲಾವಿದರೆಲ್ಲ ತುಂಬ ಭಾವಪರವಶರಾದರು. ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಪ್ರೇರಣೆಯಾದ ನಿಮ್ಮೆಲ್ಲರಿಗೂ ಹೃದಯಾಳದಿಂದ ವಂದನೆಗಳನ್ನು ತಿಳಿಯ ಪಡಿಸಿರುತ್ತಾರೆ. ಅಂದು ನಿಮ್ಮನ್ನೆಲ್ಲ ಮನರಂಜಿಸಿದ ಕಲಾವಿದರಾದ ಯುವಕೇಸರಿ ಯಶ್, ಕೃಷ್ಣೆ ಗೌಡ, ಗುರುಕಿರಣ್, ಅನುರಾಧ ಭಟ್, ಚೇತನ್ ಸೋಸ್ಕಾ , ವಿನಾಯಕ್ ಜೋಷಿ ಹಾಗೂ ಉಳಿದ ಕಲಾವಿದರಿಗೆ ಕನ್ನಡಿಗರುಯುಕೆಯ ಮನಃಪೂರ್ವಕ ಕೃತಜ್ಞತೆಗಳು.Our special thanks to Mimicri Dayanand and Joel of Bevin Exports to help get this program together.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ ಎಲ್ಲ ಸ್ಥಳೀಯ ಪ್ರತಿಭಾವಂತರಿಗೆ ಕನ್ನಡಿಗರುಯುಕೆ ವತಿಯಿಂದ ಅಭಿನಂದನೆಗಳನ್ನು ತಿಳಿಯಪಡಿಸುತ್ತೇವೆ.
ನಮ್ಮ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಆರ್ಥಿಕ ನೆರವು ನೀಡಿದ ಎಲ್ಲಾ ಪ್ರಾಯೋಜಕರಿಗೂ ನಾವು ಬಹಳ ಆಭಾರಿ. ನಮ್ಮ ದಶಮಾನೋತ್ಸವ ೨೦೧೪ ನ್ನು ಪ್ರಾಯೋಜಿಸಿದವರು Infosight Consulting, Brown & Burk, Purvankara, Asset India, DAIMS Jewellery, HDFC Homeloans, Punjab National Bank, Salarpuria, UAE Exchange, Akshar & Co, ಡಾ॥ ಕೃಷ್ಣಪ್ರಸಾದ್, ಹರೀಶ್ ಹಾಗೂ SciFi Animations. ಈ ಕಾರ್ಯಕ್ರಮಕ್ಕೆ ತಮ್ಮ ಬೆಂಬಲವನ್ನು ನೀಡಿ ಹಾಗೂ ಕಾರ್ಯಕ್ರಮದ ಮಾಹಿತಿ ಪ್ರಸಾರದಲ್ಲಿ ನೆರವಾದ ಕನ್ನಡ ಬಳಗ ಯುಕೆ, ನಾವಿಕ, ಐಯರ್ಲ್ಯಾಂಡ್ ಕನ್ನಡ ಸಂಘ, ವೀರ ಶೈವ ಸಂಘ , ಧ್ರುವ ಆರ್ಟ್ಸ್, ಹಾಗೂ ಜೀಬೀ-ಎಸ್ಆರ್ ಎಸ್ ಬಿ ಗೆ ಕನ್ನಡಿಗರುಯುಕೆ ಧನ್ಯವಾದಗಳನ್ನುಅರ್ಪಿಸುತ್ತದೆ .
ಒಂದು ಕಾರ್ಯಕ್ರಮದ ಯಶಸ್ಸಿಗೆ, ಅದನ್ನು ನಿರಾತಂಕವಾಗಿ ನೆಡೆಸಲು, ನೆರವಿಗೆ ಮುಂದೆ ಬರುವಂತಹ ಸ್ವಯಂಸೇವಕರು ಅತಿ ಮುಖ್ಯ ಪಾತ್ರವಹಿಸುತ್ತಾರೆ. ಅಂತಹ ಎಲ್ಲಾ ಸ್ವಯಂಸೇವಕರಿಗೆ ಕನ್ನಡಿಗರು ಯುಕೆ ಅಭಿನಂದಿಸುತ್ತಾ, ಹೀಗೆ ನಿಮ್ಮ ಸಹಾಯ ಕನ್ನಡಿಗರುಯುಕೆಗೆ ಎಂದೆಂದೂ ಲಭಿಸಲಿ ಎಂದು ಆಶಯಿಸುತ್ತೇವೆ. ತಮ್ಮ ಮಾರ್ಗದರ್ಶನ ಹಾಗೂ ಇತರ ಸಹಾಯಗಳಿಂದ ನಮ್ಮನ್ನು ಹುರಿದುಂಬಿಸಿದ ಲಾಂಬೆತ್ ನ ಮಾಜಿ ಮೇಯರ್ ಡಾ॥ ನೀರಜ್ ಪಾಟಿಲ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು
ಶ್ರೀಮತಿ ಸುಧಾಮೂರ್ತಿ ಮತ್ತು ಭಾರತೀಯ ವಿದ್ಯಾ ಭವನದ ನಂದಕುಮಾರ್ ಅವರ ಅಕಸ್ಮಾತ್ ಆಗಮನ ಒಂದು ಪ್ರಿಯವಾದ ಅಚ್ಚರಿ, ಕನ್ನಡದ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅವರಿಗಿರುವ ಒಲುಮೆ ನಿಜವಾಗಿಯೂ ಶ್ಲಾಘನೀಯ. ಅವರಿಗೆ ಕನ್ನಡಿಗರುಯುಕೆಯ ಪರವಾಗಿ ತುಂಬು ಹೃದಯದ ನಮನಗಳು
ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ನಿರ್ವಹಿಸಿದ ಬೃಂದನ್, ಆಹಾರ ಸರಬರಾಜಿನ ಪಾಲುದಾರಿಕೆಯ ಬಾನ್ಸುರಿ ಹಾಗೂ ಕಾರ್ಯಕ್ರಮದ ಅಂಶಗಳನ್ನು ಸೆರೆಹಿಡಿದ ಪ್ರಸಾರ ಮಾಧ್ಯಮದ ND TV ಯವರಿಗೂ ಅನಂತ ಕೃತಜ್ಞತೆಗಳು
ಪ್ರತಿ ವರ್ಷ ಕನ್ನಡಿಗರಿಗೆ ಅತ್ಯುತ್ತಮ ಶ್ರೇಣಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೆರವೇರಿಸುವುದಲ್ಲಿ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಕನ್ನಡಿಗರು ಸವಿಯುವ ಅವಕಾಶವನ್ನು ರೂಪಿಸುವುದಲ್ಲಿ ಹಾಗೂ ಈ ದೇಶದಲ್ಲಿ ಒಂದು ಕನ್ನಡ ವಾತಾವರಣ ನಿರ್ಮಿಸುವುದರಲ್ಲಿ ಕನ್ನಡಿಗರುಯುಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಕಾರ್ಯಕ್ರಮದಲ್ಲಿ ಸಣ್ಣ ಪುಟ್ಟ ಅಡಚಣೆ, ಲೋಪದೊಷಗಳಾಗಿದ್ದಲ್ಲಿ, ಅದರಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಅದಕ್ಕಾಗಿ ಕನ್ನಡಿಗರುಯುಕೆ ನಿಮ್ಮಲ್ಲಿ ಕ್ಷಮೆ ಯಾಚಿಸುತ್ತದೆ.
ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು
ಕನ್ನಡಿಗರುಯುಕೆ

Leave a Reply

Your email address will not be published. Required fields are marked *