Kannada Kali Initiative

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡಿಗರುಯುಕೆ ಕನ್ನಡ ಕಲಿ ಬಗ್ಗೆ

“ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎನ್ನುವ ಕವಿವಾಣಿಯನ್ನು ಅನುಸರಿಸಿ ಕನ್ನಡಿಗರುಯುಕೆ ಸಂಸ್ಥೆಯು ನಿರಂತರವಾಗಿ ಯುನೈಟೆಡ್ ಕಿಂಗ್ಡಮ್ ನ ಕನ್ನಡಿಗರಿಗೆ “ಕನ್ನಡ ಕಲಿ” ಎಂಬ ಕನ್ನಡ ತರಬೇತಿ ಕಾರ್ಯಕ್ರಮವನ್ನು ಇಂಗ್ಲೆಂಡ್ನಲ್ಲಿ ಹುಟ್ಟಿ ಬೆಳೆಯುತ್ತಿರುವ (ಕನ್ನಡಿಗರ) ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಹಲವಾರು ಕೇಂದ್ರಗಳಲ್ಲಿ ಸ್ವಯಂಸೇವಕ ಶಿಕ್ಷಕರಿಂದ ಕಳೆದ ೧೦ ವರ್ಷಗಳಿಂದ ನಡೆಸಿಕೊಂಡು ಬರುತ್ತಾ ಇದೆ.

ಕನ್ನಡ ಕಲಿ ಕಾರ್ಯಕ್ರಮದ ಉದ್ದೇಶ ಮುಖ್ಯವಾಗಿ ೪ ರಿಂದ ೧೨ ವರ್ಷದ ಒಳಗಿನ ಮಕ್ಕಳಿಗೆ ಕನ್ನಡ ಭಾಷೆ (ಓದು ಹಾಗೂ ಬರಹ) ಒಂದು ಕ್ರಮಬದ್ಧವಾಗಿ ಕಲಿಸಿ ಕೊಡುವ ಪ್ರಯತ್ನ. ಇದಕ್ಕಾಗಿ ೨೦ ಕ್ಕೂ ಹೆಚ್ಚು ಸ್ವಯಂ ಸೇವಕ ಶಿಕ್ಷಕರಿಂದ ಬೆಂಬಲವಿದೆ. ವಾರದ ಕೊನೆಯ ದಿನ ಬ್ರಿಟನ್ನಿನಲ್ಲಿರುವ ಶಾಲೆ ಅಥವಾ ದೇವಸ್ಥಾನಗಳಲ್ಲಿ ಬಾಡಿಗೆ ಕೊಟ್ಟು ಕನ್ನಡ ಕಲಿ ಶಿಬಿರಗಳನ್ನು ಒಂದು ಕ್ರಮಬದ್ಧವಾದ ರೀತಿಯಲ್ಲಿ ಎಲ್ಲಾ ಶಿಕ್ಷಕರ ಸಲಹೆಯಿಂದ ನಡೆಸಲಾಗುತ್ತದೆ.ಇದಲ್ಲದೇ, ಮುಂದೆ ಕನ್ನಡ ಪ್ರಾಧಿಕಾರದ ಸಹಯೋಗದಿಂದ ಅಧಿಕೃತವಾಗಿ ಪಠ್ಯಕ್ರಮ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸುವ ವ್ಯವಸ್ಥೆಯನ್ನು ಅಳವೊಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಹಾರೋ, ಬೇಸಿಂಗ್ ಸ್ಟೋಕ್, ಸ್ಲೋವ್, ಮಿಲ್ಟನ್ ಕೀನ್ಸ್, ಕೇಂಬ್ರಿಜ್ ಹಾಗು ಇಲ್ಫೊರ್ಡ್ ನಲ್ಲಿ ಕನ್ನಡ ಕಲಿ ಶಿಬಿರ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಇಂಗ್ಲೆಂಡಿನ ಹಲವಾರು ಪ್ರದೇಶಗಳಿಂದ ಈ ಕಾರ್ಯಕ್ರಮವನ್ನು ಶುರು ಮಾಡಲು ವಿಶೇಷ ಕೋರಿಕೆ ಬರುತ್ತಿದೆ.
ಈ ಆಂತರ್ಜಾಲ ಪುಟದ ಮುಖಾಂತರ ನಮ್ಮ ಕನ್ನಡ ಕಲಿ ಕೇಂದ್ರಗಳ ವಿವಿಧ ಚಟುವಟಿಕೆಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿರುತ್ತೇವೆ. ತಾವಿರುವ ಕ್ಷೇತ್ರದಲ್ಲಿ ಕನ್ನಡ ಕಲಿ ಶಿಬಿರವನ್ನು ಶುರು ಮಾಡಲು ಮುಂದಾಗುವಿರಾದರೆ, ದಯವಿಟ್ಟು ನಮ್ಮ ಮಿಂಚಂಚೆ kannadakali@kannadigaruuk.com ಗೆ ಬರೆಯಿರಿ.

ಕನ್ನಡ ಕಲಿ ಕೇಂದ್ರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೇಂದ್ರಗಳ ಅಂತರ್ಜಾಲ ಕೊಂಡಿಯನ್ನು ಕ್ಲಿಕ್ ಮಾಡಿ....

Harrow

Basingstoke

Sutton

Milton Keynes

Slough

Birmingham

Ilford

Cambridge

Kannada Development Kannada Kali Sutton KUK News & Events

Kannada Kali in Sutton Launched

ಕನ್ನಡಿಗರುಯುಕೆ ಕನ್ನಡ ಕಲಿ ಆರಂಭ ಸಮಾರಂಭ ಇಂದು Sutton ಕನ್ನಡಿಗರ ಉತ್ಸಾಹ ಹಾಗೂ ಸಹಯೋಗದಿಂದ ಅದ್ಭುತವಾಗಿ ನೆರವೇರಿತು. ಸುಮಾರು 30 ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ವಯಂ ಸೇವಕ ಶಿಕ್ಷಕಿಯರಾದ ಸೌಮ್ಯ, ಆಶಾ ರೋಹಿತ್, ಆಶಾ ನಾಯ್ಕ್ ಹಾಗೂ ಅಶ್ವಿನಿ ಪೋಷಕರಿಗೆ ತಮ್ಮ ಪರಿಚಯ ಮಾಡಿ ಎಲ್ಲರ ಸಹಕಾರ ಕೋರಿದರು. ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿಯ ಕನ್ನಡ ಕಲಿ ಪ್ರತಿನಿಧಿಯಾದ ರಾಜೇಶ್ ಅವರು ಕನ್ನಡಕಲಿ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ವಿವರ ನೀಡಿದರು. ಮಕ್ಕಳು ಹಾಗೂ ಪೋಷಕರು ತಮ್ಮ ಪರಿಚಯ ನೀಡಿ […]

Kannada Development Kannada Kali Basingstoke KUK News & Events

International Language Day – Basingstoke Kananda Kali

ಕನ್ನಡಿಗರುಯುಕೆ ಕನ್ನಡ ಕಲಿ ಶಿಕ್ಷಕಿಯರಾದ Dr Saritha Arun ಹಾಗೂ Mrs Deepa Shyam ಇಂದು International Language Day ಪ್ರಯುಕ್ತ Basingstoke Multi Cultural Forum ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಭಾಗವಹಿಸಿ ಅಲ್ಲಿ ನೆರೆದಿದ್ದ ಸಭಿಕರೊಂದಿಗೆ ಕನ್ನಡ ಕಲಿ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಮಕ್ಕಳಿಂದ ಕನ್ನಡ ಹಾಡು ಹಾಗೂ ಬೇಸಿಂಗ್ ಸ್ಟೋಕ್ ಮೇಯರ್ ಅವರಿಂದ ಮಕ್ಕಳಿಗೆ ಮೇಡಲ್ಸ್ ಹಾಗೂ ಸರ್ಟಿಫಿಕೇಟ್ ವಿತರಿಸಲಾಯಿತು. Well done Basingstoke Kannada Kali Children!!

Kannada Development Kannada Kali Sutton KUK News & Events

Kannada Kali Launch in Sutton

ಸ್ನೇಹಿತರೇ, ಕನ್ನಡಿಗರುಯುಕೆ ಕನ್ನಡ ಕಲಿ Sutton ನಲ್ಲಿ ಪ್ರಾರಂಭವಾಗುತ್ತಿದೆ!! ಪ್ರಾರಂಭ ಸಮಾರಂಭಕ್ಕೆ ನಿಮಗೆಲ್ಲ ಸ್ವಾಗತ! ಸೌಮ್ಯ ಹೆಗ್ಡೆ, ಡಾ. ಜಯಕೀರ್ತಿ, ಅಶ್ವಿನಿ, ಸ್ಮಿತಾ ಹಾಗೂ ಆಶಾ ಅವರ ನೇತೃತ್ವದಲ್ಲಿ ಈ ಕನ್ನಡ ಕಲಿ ಶಿಬಿರವನ್ನು ನಡೆಸಲಾಗುತ್ತದೆ. Sutton ಕನ್ನಡಿಗರ ಬೆಂಬಲಕ್ಕೆ ನಮ್ಮೆಲ್ಲರ ಅಭಿನಂದನೆಗಳು ಹಾಗೂ ಶುಭಾಶಯಗಳು Please register your child using the link below: https://docs.google.com/forms/d/e/1FAIpQLScBQXktQVqXH1oxvROvsEmG-RJ4h0rO-zl5Bozr3QJnUMZdiQ/viewform

Kannada Development Kannada Kali Harrow KUK News & Events

Harrow Kannada Kali Classes Time Table for 2018

Harrow Kannada Kali Classes Venue: Pinner Methodist Church, Love lane, Pinner HA5 3EE Please note the Class  timings: 4:30PM to 5:30PM Feb 2018 10th Feb 2018 March 2018 3rd March 2018 10th March 2018 17th March 2018 April 2018 21st April 2018 28th April 2018 May 2018 5th May 2018 12th May 2018 June 2018 […]

Kannada Development KUK News & Events

Kannada Kali Term for 2018 Begins

The Kannada Kali classes will resume for the term Jan 2018 to April 2018. Here are the details for each centres: Slough – From 6th Jan 2018 every Saturday Ilford – From 6th Jan 2018 every Saturday Milton Keynes – From 7th Jan 2018 every Sunday 4PM Cambridge – From 7th Jan 2018 every Sunday Basingstoke […]