Kannada Development Kannada Kali Sutton KUK News & Events

Kannada Kali in Sutton Launched

ಕನ್ನಡಿಗರುಯುಕೆ ಕನ್ನಡ ಕಲಿ ಆರಂಭ ಸಮಾರಂಭ ಇಂದು Sutton ಕನ್ನಡಿಗರ ಉತ್ಸಾಹ ಹಾಗೂ ಸಹಯೋಗದಿಂದ ಅದ್ಭುತವಾಗಿ ನೆರವೇರಿತು. ಸುಮಾರು 30 ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ವಯಂ ಸೇವಕ ಶಿಕ್ಷಕಿಯರಾದ ಸೌಮ್ಯ, ಆಶಾ ರೋಹಿತ್, ಆಶಾ ನಾಯ್ಕ್ ಹಾಗೂ ಅಶ್ವಿನಿ ಪೋಷಕರಿಗೆ ತಮ್ಮ ಪರಿಚಯ ಮಾಡಿ ಎಲ್ಲರ ಸಹಕಾರ ಕೋರಿದರು. ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿಯ ಕನ್ನಡ ಕಲಿ ಪ್ರತಿನಿಧಿಯಾದ ರಾಜೇಶ್ ಅವರು ಕನ್ನಡಕಲಿ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ವಿವರ ನೀಡಿದರು. ಮಕ್ಕಳು ಹಾಗೂ ಪೋಷಕರು ತಮ್ಮ ಪರಿಚಯ ನೀಡಿ ತುಂಬು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಕ್ಕಳಿಂದ ಗಣಪತಿ ಶ್ಲೋಕ ಹಾಗೂ ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಲಾಯಿತು.

ಕನ್ನಡ ಕಲಿ ಶಿಬಿರ ನಿರಂತರವಾಗಿ Sutton ನಲ್ಲಿ ಅಲ್ಲಿರುವ ಕನ್ನಡಿಗರ ಸಹಯೋಗಲ್ಲಿ ಮುಂದುವರಿಯಲಿ ಎಂದು ಆಶಿಸೋಣ.

 

Leave a Reply

Your email address will not be published. Required fields are marked *