ಕನ್ನಡಿಗರು ಯು.ಕೆ ಆಂತರಿಕ ಸಂಘಟನೆಯ ಮಾಹಿತಿ

ಪ್ರೀತಿಯ ಕನ್ನಡಿಗರೇ, 

ಕಳೆದ ವರ್ಷ ಜೂಲೈ ನಲ್ಲಿ ಕನ್ನಡಿಗರು ಯು.ಕೆ ಸಂಸ್ಥೆಯ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರ ಬಗ್ಗೆ ಘೋಷಣೆ ಮಾಡಲಾಗಿತ್ತು. ಈ ವರ್ಷದಿಂದ ಕನ್ನಡಿಗರು ಯು.ಕೆ ತನ್ನ ಆಂತರಿಕ ಸಂಘಟನೆಯನ್ನು ಮೂರು ವಿಭಾಗದಲ್ಲಿ ಸಂಘಟಿಸಿಕೊಂಡಿದೆ.

ಮೊದಲನೆಯ ಸಂಘಟನೆ ಕೆ.ಯು.ಕೆ. ಇವೆಂಟ್ಸ್ ಟೀಮ್. ಈಗಾಗಲೇ ಯುನೈಟೆಡ್ ಕಿಂಗ್ಡಮ್ನ ಬೇರೆ ಬೇರೆ ಪ್ರದೇಶಗಳಿಂದ 30 ಕ್ಕೂ ಹೆಚ್ಚು ಕನ್ನಡ ಪರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಸದಸ್ಯರು ಈ ತಂಡದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ. ಕೆ.ಯು.ಕೆ. ಇವೆಂಟ್ಸ್ ಟೀಮ್ ನಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ಕೂಡ ಇರುವದರಿಂದ, ಈಗಾಗಲೇ ಘೋಷಿಸಿರುವ ಕನ್ನಡ ಹಬ್ಬಕ್ಕೆ ತಂಡದಲ್ಲಿ ಇನ್ನಷ್ಟು ಉತ್ಸಾಹ ತಂದಿದೆ.

ಎರಡನೆಯದಾಗಿ ಕನ್ನಡ ಕಲಿ ಶಿಕ್ಷಕರ ತಂಡ. ಈ ತಂಡದಲ್ಲಿ ಹ್ಯಾರೋ, ಬೇಸಿಂಗ್ ಸ್ಟೋಕ್, ಸ್ಲೋವ್,ಇಲ್ಫೊರ್ಡ್ ಹಾಗೂ ಮಿಲ್ಟನ್ ಕೇನ್ಸ್ ನಿಂದ ವಿಶೇಷವಾಗಿ ಮಹಿಳಾ ಶಿಕ್ಷಕಿಯರು ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿ ತಿಂಗಳು ಕನ್ನಡ ಕಲಿ ವಿಚಾರದ ಬಗ್ಗೆ ಆಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಯುತ್ತದೆ.

ಕೊನೆಯದಾಗಿ ಕೆ.ಯು.ಕೆ ಕಾರ್ಯನಿರ್ವಾಹಕ ಸಮಿತಿ (ಎಸ್ಎಕ್ಯುಟಿವ್ ಕಮಿಟಿ). ಕಾರ್ಯಕ್ರಮದ ಪರಿಕಲ್ಪನೆಯಿಂದ ಹಿಡಿದು ಅದನ್ನು ಯಶಸ್ವಿಯಾಗಿ ಮುಂದುವರಿಸಿ ಪೂರ್ಣ ನಿರ್ವಹಣೆ ಮಾಡುವದೇ ಕೆ.ಯು.ಕೆ. ಕಾರ್ಯನಿರ್ವಾಹಕರ ಮುಖ್ಯ ಜವಾಬ್ದಾರಿ.

ಕನ್ನಡಿಗರು ಯು.ಕೆ ತಂಡದ ಕಾರ್ಯನಿರ್ವಾಹಕರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಂತರ್ಜಾಲ ಪುಟವನ್ನು ಭೇಟಿ ಮಾಡಿ.
http://www.kannadigaruuk.com/contact-us/

ಕನ್ನಡಿಗರು ಯು.ಕೆ ತಂಡದ ಎಲ್ಲಾ ಪ್ರತಿನಿದಿಗಳಿಗೂ ಹಾಗೂ ಹೊಸದಾಗಿ ಈ ವರ್ಷ ಸೇರ್ಪಡೆ ಆದ ಪ್ರತಿನಿದಿಗಳಿಗೆ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಸ್ವಾಗತ.

ವಂದನೆಗಳೊಂದಿಗೆ
ಕೆ.ಯು.ಕೆ. ನಿರ್ವಾಹಕ ಸಮಿತಿ

Leave a Reply

Your email address will not be published. Required fields are marked *